ಕರೆಗೆ, ಸಂಗೀತಕ್ಕೆ, ಆರೋಗ್ಯಕ್ಕೆ ಸ್ಮಾರ್ಟ್‌ವಾಚ್‌ ಪಿಟ್ರಾನ್‌ ಫೋರ್ಸ್‌ ಎಕ್ಸ್‌11

ಪಿ- ಟ್ರಾನ್‌ ಸ್ಮಾರ್ಟ್‌ವಾಚಲ್ಲಿ 4 ಅನೇಕ ಅನುಕೂಲಗಳಿವೆ.

about ptron force x11 Bluetooth calling smartwatch with touch colour display vcs

ಇದು ಸ್ಮಾರ್ಟ್‌ವಾಚುಗಳ ಕಾಲ. ಎಷ್ಟುಓಡಾಡಿದೆವು, ಎಷ್ಟುಸಲ ಉಸಿರಾಡುತ್ತೇವೆ, ರಕ್ತದಲ್ಲಿ ಆಕ್ಸಿಜೆನ್‌ ಎಷ್ಟಿದೆ, ನಿದ್ದೆ ಸರಿಯಾಗಿದೆಯೋ, ರಕ್ತದೊತ್ತಡ ಸರಿಯಿದೆಯೋ ಎಂಬುದನ್ನೆಲ್ಲ ಕ್ಷಣಕ್ಷಣವೂ ನೋಡುತ್ತಿರಬೇಕು ಅನ್ನುವುದು ಬಹುತೇಕ ಆಸೆ. ಅದರ ಜೊತೆಗೇ ಫೋನ್‌ ಬಂದರೆ ಕೈಯಲ್ಲೇ ರಿಸೀವ್‌ ಮಾಡುವಂತಿರಬೇಕು, ಮೆಸೇಜುಗಳನ್ನು ಕೈಯಲ್ಲೇ ಓದಲಿಕ್ಕಾಗಬೇಕು, ಬ್ಯಾಟರಿ ಕನಿಷ್ಠ ಒಂದು ವಾರವಾದರೂ ಬರಬೇಕು- ಹೀಗೆ ಮತ್ತೊಂದಷ್ಟುಆಸೆಗಳೂ ಸೇರಿಕೊಂಡಿರುತ್ತವೆ.

ಇವನ್ನೆಲ್ಲ ಪೂರೈಸುವುದಕ್ಕೆ ಸ್ಮಾರ್ಟ್‌ವಾಚ್‌ ಕಂಪೆನಿಗಳು ಹೆಣಗುತ್ತಿರುತ್ತವೆ. ಈ ಎಲ್ಲ ಅನುಕೂಲಗಳನ್ನೂ ನೀಡುವುದು ಕಷ್ಟವೇನಲ್ಲ. ಆದರೆ ಕೈಗೆಟಕುವ ಬೆಲೆಯಲ್ಲಿ ಇವನ್ನು ನೀಡುವುದು ಸವಾಲು. ಅಂಥ ಸವಾಲನ್ನು ಸಮರ್ಥವಾಗಿ ಎದುರಿಸಿದೆ ಪಿ-ಟ್ರಾನ್‌. ಈ ಕಂಪೆನಿ ಹೊರತಂದಿರುವ ಪಿ-ಟ್ರಾನ್‌ ಫೋರ್ಸ್‌ ಎಕ್ಸ್‌11, ಬ್ಲೂಟೂಥ್‌ ಕಾಲಿಂಗ್‌ ಸ್ಮಾರ್ಟ್‌ವಾಚ್‌ ಅಗ್ಗದ ಬೆಲೆಗೆ ಅತ್ಯುತ್ತಮ ಆಯ್ಕೆಯೆಂದೇ ಹೇಳಬಹುದು.

ಪಿ- ಟ್ರಾನ್‌ ಸ್ಮಾರ್ಟ್‌ವಾಚಲ್ಲಿ 4 ಅನೇಕ ಅನುಕೂಲಗಳಿವೆ.

1. ಬ್ಲೂಟೂಥ್‌ ಮೂಲಕ ಫೋನ್‌ ಹತ್ತಿರದಲ್ಲಿದ್ದರೆ, ವಾಚಿನಲ್ಲೇ ಕಾಲ್‌ ರಿಸೀವ್‌ ಮಾಡಬಹುದು. ವಾಚಿನ ಮೂಲಕವೇ ಸಂಭಾಷಣೆ ನಡೆಸಬಹುದು. ವಾಚ್‌ನಲ್ಲೇ ಡಯಲ್‌ಪ್ಯಾಡ್‌ ಇದೆ. ಕಾಲ್‌ಹಿಸ್ಟರಿ ಸಿಗುತ್ತದೆ ಮತ್ತು ಫೋನ್‌ ಕಾಂಟಾಕ್ಟ್ಗಳನ್ನು ಸಿಂಕ್‌ ಮಾಡಿಕೊಳ್ಳಬಹುದು.

ಕೈಗೆಟುಕುವ ಬೆಲೆಯ Realme 9 4G ಇಂದು ಭಾರತದಲ್ಲಿ ಮೊದಲ ಸೇಲ್‌: ಬೆಲೆ ಎಷ್ಟು?

2. ಆರೋಗ್ಯ ಮತ್ತು ಫಿಟ್‌ನೆಸ್‌ ನೋಡಿಕೊಳ್ಳಲು ವ್ಯವಸ್ಥೆಯಿದೆ. ರಕ್ತದ ಆಮ್ಲಜನಕ, ಉಸಿರಾಟದ ಲಯ, ನಿದ್ದೆಯ ಅವಧಿ, ಸುಸ್ತು, ನಡಿಗೆಯ ದೂರ, ಕಳೆದ ಕ್ಯಾಲರಿ, ದಾಹದ ಪರಿಮಾಣ ಎಲ್ಲವನ್ನೂ ಇದು ದಾಖಲಿಸುತ್ತಾ ಹೋಗುತ್ತದೆ.

3. 1.7 ಇಂಚಿನ ಕಲರ್‌ ಡಿಸ್‌ಪ್ಲೇ ಇದೆ. ವಾಚಿನ ಮುಖಗಳನ್ನು ಬದಲಾಯಿಸಬಹುದು. ಕೈಗೆ ಭಾರವೇನಿಲ್ಲ. ಬ್ಯಾಟರಿಯ ಆಯಸ್ಸು ಒಂದು ವಾರ. ಸುಮ್ಮನಿಟ್ಟರೆ ಎರಡು ವಾರ. ಧೂಳು ಮತ್ತು ವಾಟರ್‌ಪ್ರೂಫು. ಇದರ ಸ್ಟ್ರಾಪನ್ನು ಮ್ಯಾಚಿಂಗ್‌ ಬಣ್ಣಗಳಿಗೆ ಅನುಸಾರ ಬದಲಾಯಿಸಬಹುದು.

Honor Play 6T, 6T Pro ಲಾಂಚ್:‌ ಬೆಲೆ ಎಷ್ಟು? ಏನೆಲ್ಲಾ ವಿಶೇಷತೆಗಳಿವೆ?

4. ಟಚ್‌ಸ್ಕ್ರೀನ್‌ ಇದೆ. ನೋಟಿಫಿಕೇಷನ್‌ಗಳು ಫೋನಿನಿಂದ ವಾಚಿಗೆ ಬರುತ್ತವೆ. ಇದರಲ್ಲೇ ಸಂಗೀತ ಕೇಳಬಹುದು. ಫೋಟೋ ಕ್ಲಿಕ್ಕಿಸಬಹುದು. ಹವಾಮಾನ ವರದಿ ತಿಳಿಯಬಹುದು. ಅಲಾಮ್‌ರ್‍ ಇಡಬಹುದು.

ಇವತ್ತಿನ ಕಾಲಕ್ಕೆ ತಕ್ಕಂಥ ಟ್ರೆಂಡಿ ಲುಕ್‌ ಮತ್ತು ಸುಲಭ ಬಳಕೆ ಇದನ್ನು ನಿಮ್ಮ ಅಚ್ಚುಮೆಚ್ಚಿನ ವಾಚ್‌ ಆಗಿಸುವುದರಲ್ಲಿ ಅನುಮಾನವಿಲ್ಲ. ಇದರ ಬೆಲೆ 2,499 ರುಪಾಯಿ.

Latest Videos
Follow Us:
Download App:
  • android
  • ios