Asianet Suvarna News Asianet Suvarna News

ಕೆಜಿಎಫ್ ಸಿನಿಮಾ ನೋಡೋದಕ್ಕೆ ಪ್ಲಾನ್ ಮಾಡಿ ಕೂತವರು ಮಾಡಿದ್ದು ಮರ್ಡರ್

  • ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ಗಲಾಟೆ
  • ಚಾಕುವಿನಿಂದ ಇರಿದು ಯುವಕನ ಕೊಲೆ
  • ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಘಟನೆ
Gadaga youth killed in group clash in Betageri akb
Author
Gadag, First Published Apr 16, 2022, 10:41 PM IST

ಗದಗ: ಬೆಟಗೇರಿಯ ಮಂಜುನಾಥ್ ಬಡಾವಣೆಯಲ್ಲಿ ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಚಾಕು ಇರಿತಕ್ಕೆ ಓರ್ವ ಬಲಿಯಾಗಿದ್ದಾನೆ. ಬೆಟಗೇರಿಯ ಮಂಜುನಾಥ ಬಡಾವಣೆಯ ಗಜೇಂದ್ರ ಸಿಂಗ್ ಸೊಲ್ಲಾಪುರ (30) (Gajendra Singh Sollapura) ಹತ್ಯೆಯಾದ ಯುವಕ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಜೇಂದ್ರ ಹಾಗೂ ಶಿವರಾಜ್ ಪೂಜಾರ್ ಅಲಿಯಾಸ್ (ಮೊಬೈಲ್ ಶಿವ್ಯಾ) (Shivraj Poojar alias Mobile Shivya)ಮಧ್ಯೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದು ನಂತರ ವಿಕೋಪಕ್ಕೆ ತಿರುಗಿದ್ದು ಮಾತಿಗೆ ಮಾತು ಬೆಳೆದು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಜೇಂದ್ರ, ಶಿವರಾಜ್ (Shivraj), ಮಲ್ಲೇಶ್ (Mallesh) ಎಂಬುವರನ್ನು ಬೆಟಗೇರಿಯ (Betagari) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಗಜೇಂದ್ರ ಅಲಿಯಾಸ್ ಗಣೇಶ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ.

ಕೆಜಿಫ್ ಸಿನಿಮಾ ನೋಡ ಹೊರಟವರು ಮಾಡಿದ್ರು ಮರ್ಡರ್..!

ಬೆಟಗೇರಿಯ ಮಂಜುನಾಥ್ ಬಡಾವಣೆಯ ಡಂಬಳದವರ ಅಂಗಡಿ ಬಳಿ ಶಿವು ಪೂಜಾರ ಅಲಿಯಾಸ್ (ಮೊಬೈಲ್ ಶಿವ್ಯಾ) ಆ್ಯಡ್ ಟೀಮ್ ಕುಳಿತಿದ್ದರಂತೆ. ಸ್ನೇಹಿತರಾದ ಎಲ್ಲಪ್ಪ ಭಜಂತ್ರಿ, ಮಂಜು ಪೂಜಾರಿ (Manju Poojary), ಉಮೇಶ್, ಪ್ರಕಾಶ್ ಸುಣಗಾರ ಜೊತೆ ಶಿವು ಕೆಜಿಎಫ್ ಸಿನಿಮಾ (KGF cinema) ನೋಡೋ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಈ ವೇಳೆ ಗಜೇಂದ್ರನ ಸಹೋದರ ರವಿ ಸೊಲ್ಲಾಪುರ ಎದ್ರಿಗೆ ಬಂದಿದ್ದ. ಈ ವೇಳೆ ಹಳೆಯ ವೈಷಮ್ಯದ ಹಿನ್ನೆಲೆ ರವಿ ಹಾಗೂ ಶಿವು ಮಧ್ಯೆ ಸಣ್ಣಗೆ ಗಲಾಟೆ ನಡೆದಿದೆ‌. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ರವಿ ಅದೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದಾನೆ. ಈ ಮಧ್ಯೆ ಕೆಲಸ ಮುಗಿಸ್ಕೊಂಡು ಗಜೇಂದ್ರ ಅದೇ ಮಾರ್ಗವಾಗಿ ಬಂದಿದ್ದಾನೆ. ಈ ವೇಳೆ ಮೊದ್ಲೆ ರೊಚ್ಚಿಗೆದ್ದಿದ್ದ ಶಿವು ಆ್ಯಡ್ ಟೀಮ್ ಗಜೇಂದ್ರನ ಮೇಲೂ ಮುಗಿಬಿದ್ದಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ್ದ ಗಜೇಂದ್ರ ಅವರ ಕೈಯಲ್ಲಿದ್ದ ಚಾಕು ಕಸಿದು ಮರು ಹಲ್ಲೆಗೆ ಪ್ರಯತ್ನಿಸಿದ್ದಾರೆ. ಆದರೆ ಗಲಾಟೆಯಲ್ಲಿ ಗಜೇಂದ್ರನ ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯಗಳಾಗಿವೆ, ಶಿವು ಪೂಜಾರ್ ಮಲ್ಲೇಶ್‌ಗೂ ಗಾಯವಾಗಿದೆ‌‌‌. ನಂತ್ರ ಸಿಟ್ಟಿಗೆದ್ದ ಶಿವು ಸಪೋರ್ಟರ್ಸ್ ಗಜೇಂದ್ರ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ ಅನ್ನೋ ಆರೋಪವೂ ಇದೆ.

ಬುದ್ಧಿ ಹೇಳಿದ್ದಕ್ಕೆ ಹತ್ಯೆ ನಡೀತಾ..?

ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಯುವಕ ಯುವತಿಯರ ಮೊಬೈಲ್ ನಂಬರ್ ಸಂಗ್ರಹಿಸಿ, ಡಿಜಿಟಲ್ ಪ್ರಚಾರ ಮಾಡ್ಲಾಗ್ತಿತ್ತಂತೆ‌.. ಲೀಸ್ಟ್ ನಲ್ಲಿದ್ದ ಹುಡುಗಿಯರ ನಂಬರ್ ಇಟ್ಕೊಂಡು ಶಿವರಾಜ್ ಕಡೆಯ ಕೆಲ ಹುಡುಗ್ರು ಮೆಸೇಜ್ ಮಾಡೋದು ಮಾಡ್ತಿದ್ರಂತೆ. ಈ ವಿಚಾರವನ್ನ ಮನೆ ಬಳಿಯ ಓರ್ವ ಯುವತಿ ಗಜೇಂದ್ರನಿಗೆ ತಿಳಿಸಿದ್ಲಂತೆ. ಹೀಗಾಗಿ ಗಜೇಂದ್ರ ಆ ಯುವಕರನ್ನ ಕರೆದು ಬುದ್ಧಿ ಹೇಳಿದ್ರಂತೆ. ಇದ್ರಿಂದ ಕೆರಳಿದ್ದ ಶಿವು, ಗಜೇಂದ್ರ ಮೇಲೆ ಸಿಟ್ಟಾಗಿದ್ದ. ಹೀಗಾಗಿ ಹಲ್ಲೆ ಮಾಡಿದ್ದ ಅನ್ನೋ ಮಾತನ್ನ ಗಜೇಂದ್ರ ಕುಟುಂಬ ಹೇಳ್ತಿದೆ.

ರಾಜಕೀಯ ಕಾರಣಕ್ಕೆ ಹಲ್ಲೆ, ಕೊಲೆ..

ಚುನಾವಣೆ ಹಳೆಯ ವೈಷಮ್ಯವೇ ಚಾಕು ಇರಿತಕ್ಕೆ ಕಾರಣ ಎನ್ನಲಾಗ್ತಿದೆ. ಡಿಸೆಂಬರ್ ನಲ್ಲಿ ನಡೆದ ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದ ಗಜೇಂದ್ರ ಸಿಂಗ್ ಬಿಜೆಪಿಯ ಶಿವು ವೈರುದ್ಧ ಕಟ್ಕೊಂಡಿದ್ದ. ನಾಲ್ಕನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಅಕ್ಕಿ ಪರ ಗಜೇಂದ್ರ ಪ್ರಚಾರ ಮಾಡಿದ್ದ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಶಿವರಾಜ್ ಪೂಜಾರ್ ದ್ವೇಷ ಕಾರುತ್ತಿದ್ನಂತೆ. ಚುನಾವಣೆಯಲ್ಲಿ ಶಿವರಾಜ್ ಸಂಬಂಧಿ ದೀಪಾ ಪೂಜಾರ್ ಸೋತಿದ್ದು ದ್ವೇಷಕ್ಕೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಗದ್ದಲ ಗಲಾಟೆ ನಡೀತಿತ್ತು ಎನ್ನಲಾಗ್ತಿದೆ. 

ಸದ್ಯ ಶಿವು, ಮಲ್ಲೇಶ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದಾರೆ.. ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸ್ತಿದ್ದಾರೆ.

Follow Us:
Download App:
  • android
  • ios