ಸೂಪರ್ ಕಪ್ ಫುಟ್ಬಾಲ್: ಇಂದು ಬಿಎಫ್‌ಸಿ vs ಜೆಎಫ್ಸಿ ಸೆಮಿ ಕದನ
ಸೂಪರ್ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಕ್ಷಣಗಣನೆ
ಸೆಮೀಸ್‌ನಲ್ಲಿ ಬಿಎಫ್‌ಸಿ ಹಾಗೂ ಜಮ್ಶೇಡ್ಪುರ ಎಫ್‌ಸಿ ಫೈಟ್
ಎರಡನೇ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿ ಬೆಂಗಳೂರು ಎಫ್‌ಸಿ
ಕಲ್ಲಿಕೋಟೆ(ಏ.21): 3ನೇ ಆವೃತ್ತಿಯ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ನಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ ಶುಕ್ರವಾರ ಜಮ್ಶೇಡ್ಪುರ ಎಫ್‌ಸಿ ವಿರುದ್ಧ ಸೆಣಸಾಡಲಿದ್ದು, 2ನೇ ಬಾರಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ.
ಗುಂಪು ಹಂತದಲ್ಲಿ ‘ಎ’ ಗುಂಪಿನಲ್ಲಿದ್ದ ಬಿಎಫ್‌ಸಿ ಆಡಿದ 3 ಪಂದ್ಯಗಳಲ್ಲಿ 1 ಗೆಲುವು, 1 ಡ್ರಾದೊಂದಿಗೆ 5 ಅಂಕ ಸಂಪಾದಿಸಿ ಅಗ್ರಸ್ಥಾನಿಯಾಗಿತ್ತು. ನಿರ್ಣಾಯಕ ಕೊನೆ ಪಂದ್ಯದಲ್ಲಿ ಬದ್ಧವೈರಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಟೂರ್ನಿಯಿಂದ ಹೊರಗಟ್ಟಿ ಅಂತಿಮ 4ರ ಘಟ್ಟಪ್ರವೇಶಿಸಿದೆ. ಮತ್ತೊಂದೆಡೆ ‘ಸಿ’ ಗುಂಪಿನಲ್ಲಿದ್ದ ಜಮ್ಶೇಡ್ಪುರ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದಿದ್ದು, ಅಜೇಯ ಓಟ ಮುಂದುವರಿಸಿ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್‌ಗೇರುವ ತವಕದಲ್ಲಿದೆ.
ಪಂದ್ಯ: ರಾತ್ರಿ 7ಕ್ಕೆ, ಪ್ರಸಾರ: ಸೋನಿ ಸ್ಪೋರ್ಟ್ಸ್/ಫ್ಯಾನ್‌ಕೋಡ್ ಆ್ಯಪ್
ಆರ್ಚರಿ ವಿಶ್ವಕಪ್: ಫೈನಲ್ ತಲುಪಿದ ರೀಕರ್ವ್ ತಂಡ
ಅಂಟಾಲ್ಯ(ಟರ್ಕಿ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ನಲ್ಲಿ ಭಾರತ ಪುರುಷರ ರೀರ್ಕವ್‌ರ್ ತಂಡ ಫೈನಲ್ಗೆ ಲಗ್ಗೆ ಇಟ್ಟಿದ್ದು, 9 ವರ್ಷಗಳಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ ಸಾಧನೆ ಮಾಡಿದೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಅತನು ದಾಸ್, ಧೀರಜ್, ತರುಣ್ದೀಪ್ ರೈ ಅವರನ್ನೊಳಗೊಂಡ ತಂಡ ಬಳಿಕ ಜಪಾನ್ ವಿರುದ್ಧ 5-4ರಿಂದ ಜಯಗಳಿಸಿದರೆ, ಚೈನೀಸ್ ತೈಪೆ ಹಾಗೂ ನೆದರ್ಲೆಂಡ್್ಸ ವಿರುದ್ಧ ತಲಾ 6-2 ಅಂತರದಲ್ಲಿ ಗೆಲುವು ಸಾಧಿಸಿತು.
RCB ಈ ಸ್ಟಾರ್ IPL ಆಟಗಾರನನ್ನು ಕೈಬಿಟ್ಟಿದ್ದೇಕೆಂದು ನನಗಂತೂ ಅರ್ಥವಾಗಿಲ್ಲ: ಕೆವಿನ್ ಪೀಟರ್‌ಸನ್..!
ಫೈನಲ್ನಲ್ಲಿ ಭಾನುವಾರ ಚೀನಾ ವಿರುದ್ಧ ಸೆಣಸಾಡಲಿದ್ದು, 13 ವರ್ಷಗಳಲ್ಲೇ ಮೊದಲ ಬಾರಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದೆ. 2010ರಲ್ಲಿ ಭಾರತ ಪುರುಷರ ರೀಕರ್ವ್ ತಂಡ ಕೊನೆ ಬಾರಿ ಶಾಂಘೈನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಚಿನ್ನದ ಪದಕ ಜಯಿಸಿತ್ತು. 2014ರಲ್ಲಿ ಕೊನೆ ಬಾರಿ ಫೈನಲ್ನಲ್ಲಿ ಆಡಿತ್ತು.
ಫ್ರೆಂಚ್ ಓಪನ್ ಟೆನಿಸ್: ರಾಫೆಲ್ ನಡಾಲ್ ಅನುಮಾನ!
ಮ್ಯಾಡ್ರಿಡ್: ಸೊಂಟದ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸ್ಪೇನ್‌ನ ರಾಫೆಲ್ ನಡಾಲ್ ಮೇ 28ರಿಂದ ಆರಂಭವಾಗಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವುದು ಅನುಮಾನ ಎನಿಸಿದೆ. ದೀರ್ಘ ಕಾಲದಿಂದ ನಡಾಲ್ ಸೊಂಟದ ಗಾಯದಿಂದ ಬಳಲುತ್ತಿದ್ದು, ಜನವರಿಯಿಂದ ಆಸ್ಪ್ರೇಲಿಯನ್ ಓಪನ್‌ನಲ್ಲಿ 2ನೇ ಸುತ್ತಿನಲ್ಲಿ ಸೋತ ಬಳಿಕ ಯಾವುದೇ ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಆಡಿಲ್ಲ. ಅವರು ಮುಂದಿನ ವಾರ ಆರಂಭವಾಗಲಿರುವ ಮ್ಯಾಡ್ರಿಡ್ ಓಪನ್ನಿಂದಲೂ ಹೊರಗುಳಿಯಲಿದ್ದು, ಫ್ರೆಂಚ್ ಓಪನ್ಗೂ ಮುನ್ನ ಸಂಪೂರ್ಣ ಫಿಟ್ ಆಗುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ.