Asianet Suvarna News Asianet Suvarna News

ಸೂಪರ್‌ ಕಪ್‌: ಕೇರಳ ಬ್ಲಾಸ್ಟರ್ಸ್‌ ಎದುರು ಡ್ರಾ ಸಾಧಿಸಿದ ಬಿಎ​ಫ್‌ಸಿ ಸೆಮೀಸ್‌ಗೆ ಲಗ್ಗೆ

ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಬಿಎಫ್‌ಸಿ
ನಿರ್ಣಾ​ಯಕ ಪಂದ್ಯ​ದ​ಲ್ಲಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ 1-1 ಡ್ರಾ
ಬಿಎ​ಫ್‌ಸಿ ಏಪ್ರಿಲ್‌ 21ರಂದು ಜಮ್ಶೇ​ಡ್‌​ಪುರ ಎಫ್‌ಸಿ ವಿರುದ್ಧ ಕಾದಾಟ

Super Cup 2023 Bengaluru FC enters Super Cup semifinals after draw against Kerala Blasters kvn
Author
First Published Apr 17, 2023, 10:38 AM IST

ಮಂಜೇ​ರಿ​(ಏ.17): 3ನೇ ಆವೃತ್ತಿಯ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಮಾಜಿ ಚಾಂಪಿ​ಯನ್‌ ಬೆಂಗ​ಳೂರು ಎಫ್‌ಸಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದೆ. ಭಾನು​ವಾರ ‘ಎ’ ಗುಂಪಿನ ನಿರ್ಣಾ​ಯಕ ಕೊನೆ ಪಂದ್ಯ​ದಲ್ಲಿ ಬದ್ಧ​ವೈರಿ ಕೇರಳ ಬ್ಲಾಸ್ಟ​ರ್ಸ್‌ ವಿರುದ್ಧ 1-1 ಗೋಲು​ಗ​ಳಿಂದ ಬಿಎ​ಫ್‌ಸಿ ಡ್ರಾ ಸಾಧಿ​ಸಿ​ದರೂ, ಒಟ್ಟು 3 ಪಂದ್ಯ​ಗ​ಳಲ್ಲಿ 5 ಅಂಕ​ದೊಂದಿ​ಗೆ ಅಗ್ರ​ಸ್ಥಾ​ನಿ​ಯಾಗಿ ಅಂತಿಮ 4ರ ಘಟ್ಟ ಪ್ರವೇ​ಶಿ​ಸಿತು. ತಲಾ 4 ಅಂಕ ಗಳಿ​ಸಿದ ಬ್ಲಾಸ್ಟ​ರ್ಸ್‌ ಹಾಗೂ ಶ್ರೀನಿಧಿ ಡೆಕ್ಕನ್‌ ತಂಡ​ಗಳು ಹೊರ​ಬಿ​ದ್ದ​ವು.

ಇತ್ತೀ​ಚೆ​ಗ​ಷ್ಟೇ ವಿವಾದಿತ ಐಎಸ್‌ಎಲ್‌ ಪ್ಲೇ-ಆಫ್‌ ಪಂದ್ಯದಲ್ಲಿ ಕೇರ​ಳ​ವನ್ನು ಸೋಲಿಸಿ ಟೂರ್ನಿ​ಯಿಂದಲೇ ಹೊರ​ಹಾ​ಕಿದ್ದ ಬಿಎ​ಫ್‌ಸಿ ಮತ್ತೊಮ್ಮೆ ಕೇರ​ಳದ ಸೆಮೀಸ್‌ ಆಸೆಗೆ ಕೊಳ್ಳಿ ಇಟ್ಟಿತು. ಭಾನು​ವಾ​ರದ ಪಂದ್ಯದಲ್ಲಿ ರಾಯ್‌ ಕೃಷ್ಣ 23ನೇ ನಿಮಿ​ಷ​ದ​ಲ್ಲಿ ಗೋಲು ಬಾರಿಸಿ ಬಿಎ​ಫ್‌​ಸಿಗೆ ಮುನ್ನಡೆ ಒದ​ಗಿ​ಸಿ​ದರೆ, 77ನೇ ನಿಮಿ​ಷ​ದಲ್ಲಿ ಗೋಲು ಹೊಡೆದು ಕೇರಳ ಸಮ​ಬಲ ಸಾಧಿ​ಸಿತು. ಸೆಮೀ​ಸ್‌​ನಲ್ಲಿ ಬಿಎ​ಫ್‌ಸಿ ಏಪ್ರಿಲ್‌ 21ರಂದು ಜಮ್ಶೇ​ಡ್‌​ಪುರ ಎಫ್‌ಸಿ ವಿರುದ್ಧ ಸೆಣ​ಸಾ​ಡ​ಲಿದೆ.

ಕುಸ್ತಿ ಸಂಸ್ಥೆ ಅಧ್ಯ​ಕ್ಷ​ ಸ್ಥಾನ​ಕ್ಕೆ ಮತ್ತೆ ಸ್ಪರ್ಧೆ ಇಲ್ಲ: ಬ್ರಿಜ್‌

ಗೊಂಡಾ​(​ಉ​ತ್ತ​ರ​ ಪ್ರ​ದೇ​ಶ​): ದೇಶದ ಅಗ್ರ ಕುಸ್ತಿ​ಪ​ಟು​ಗ​ಳಿಂದ ಲೈಂಗಿಕ ದೌರ್ಜನ್ಯ ಸೇರಿ​ದಂತೆ ಗಂಭೀರ ಆರೋ​ಪ​ಗ​ಳನ್ನು ಹೊತ್ತು​ಕೊಂಡಿ​ರುವ ಬ್ರಿಬ್‌​ಭೂ​ಷಣ್‌ ಸಿಂಗ್‌ ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಆದರೆ ಸಮಿ​ತಿಯ ಬೇರೆ ಸ್ಥಾನಕ್ಕೆ ಸ್ಪರ್ಧಿ​ಸುವ ಬಗ್ಗೆ ಸುಳಿವು ನೀಡಿ​ದ್ದಾರೆ. 

RCB vs CSK: IPL ಟಿಕೆಟ್‌ಗಾಗಿ ಚಿನ್ನಸ್ವಾಮಿ ಸ್ಟೇಡಿಯಂನತ್ತ ಮುಗಿಬಿದ್ದ ಫ್ಯಾನ್ಸ್‌ಗೆ ನಿರಾಸೆ

ಬ್ರಿಜ್‌ ವಿರು​ದ್ಧದ ಆರೋ​ಪ​ಗಳ ಬಗ್ಗೆ ತನಿಖೆ ನಡೆ​ಯುತ್ತಿದ್ದು, ಇನ್ನಷ್ಟೇ ವರದಿ ಸಲ್ಲಿ​ಕೆಯಾ​ಗಬೇ​ಕಿದೆ. ಈ ನಡುವೆ ಪ್ರತಿ​ಕ್ರಿ​ಯಿ​ಸಿದ ಅವರು, ‘ಶೀಘ್ರ​ದಲ್ಲೇ ಸಮಿ​ತಿಯ ಪದಾ​ಧಿ​ಕಾ​ರಿ​ಗಳ ಆಯ್ಕೆಗೆ ಚುನಾ​ವಣೆ ನಡೆ​ಯ​ಲಿದೆ. ಈಗಾ​ಗಲೇ 12 ವರ್ಷ ಅಧ್ಯ​ಕ್ಷ​ನಾಗಿ ಕಾರ‍್ಯ​ನಿ​ರ್ವ​ಹಿ​ಸಿ​ದ್ದು, ಕ್ರೀಡಾ ನಿಯ​ಮದ ಪ್ರಕಾರ ಮತ್ತೆ ಅಧ್ಯ​ಕ್ಷ​ ಸ್ಥಾ​ನಕ್ಕೆ ಸ್ಪರ್ಧಿ​ಸು​ವು​ದಿಲ್ಲ’ ಎಂದಿ​ದ್ದಾ​ರೆ.

ಆರ್‌ಬಿಐ ಹುದ್ದೆ: ಮೊದಲ ಕಬಡ್ಡಿ ಪಟು ಪವನ್‌!

ನವ​ದೆ​ಹ​ಲಿ: ತಾರಾ ಕಬಡ್ಡಿ ಆಟ​ಗಾರ, ಬೆಂಗ​ಳೂರು ಬುಲ್ಸ್‌ ಮಾಜಿ ನಾಯಕ ಪವನ್‌ ಶೆರಾ​ವತ್‌ ಭಾರ​ತೀಯ ರಿಸರ್ವ್‌ ಬ್ಯಾಂಕ್‌​(​ಆ​ರ್‌​ಬಿ​ಐ​)​ನಲ್ಲಿ ಸಹಾ​ಯಕ ವ್ಯವ​ಸ್ಥಾ​ಪ​ಕಾಗಿ ನೇಮ​ಕ​ಗೊಂಡಿ​ದ್ದಾರೆ. 26 ವರ್ಷದ ಪವನ್‌ ಈ ಹುದ್ದೆ​ಗೇ​ರಿದ ಭಾರ​ತ​ದ ಮೊದಲ ಕಬಡ್ಡಿ ಆಟ​ಗಾರ ಎನಿ​ಸಿ​ಕೊಂಡಿ​ದ್ದಾರೆ. ಬೆಂಗ​ಳೂರು ತಂಡದ ಪ್ರಮುಖ ಆಟ​ಗಾ​ರ​ನಾ​ಗಿದ್ದ ಪವನ್‌ ಕಳೆದ ಆವೃ​ತ್ತಿಗೂ ಮುನ್ನ ಹರಾ​ಜಿ​ನಲ್ಲಿ ದಾಖ​ಲೆಯ 2.2 ಕೋಟಿ ರು.ಗೆ ತಮಿಳ್‌ ತಲೈ​ವಾಸ್‌ ತಂಡಕ್ಕೆ ಬಿಕ​ರಿ​ಯಾ​ಗಿ​ದ್ದರು.

Follow Us:
Download App:
  • android
  • ios