Asianet Suvarna News Asianet Suvarna News

Santosh Trophy: ಕರ್ನಾಟಕ ಫುಟ್ಬಾಲ್ ತಂಡಕ್ಕೆ ಸತತ ಎರಡನೇ ಜಯ

* ಸಂತೋಷ್ ಫುಟ್ಬಾಲ್ ಟೂರ್ನಿಯಲ್ಲಿ ರಾಜ್ಯಕ್ಕೆ ಸತತ ಎರಡನೇ ಜಯ

* ಆಂಧ್ರಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ 1-0 ಅಂತರದ ರೋಚಕ ಜಯ

* ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 4-0 ಗೋಲುಗಳ ಅಂತರದ ಭರ್ಜರಿ ಜಯ

Santosh Trophy Karnataka Football Team Register back to back Victory kvn
Author
Bengaluru, First Published Nov 26, 2021, 9:13 AM IST
  • Facebook
  • Twitter
  • Whatsapp

ಬೆಂಗಳೂರು(ನ.26): ಸಂತೋಷ್‌ ಟ್ರೋಫಿ (Santosh Trophy) ದಕ್ಷಿಣ ವಲಯ ಅರ್ಹತಾ ಫುಟ್ಬಾಲ್‌ ಟೂರ್ನಿಯಲ್ಲಿ (South Zone Football Tournament) ಕರ್ನಾಟಕದ ಪಾರುಪತ್ಯ ಮುಂದುವರೆದಿದ್ದು, ಗುರುವಾರ ಆಂಧ್ರಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ 1-0 ಅಂತರದ ರೋಚಕ ಜಯ ದಾಖಲಿಸಿದೆ. ಇದರೊಂದಿಗೆ ಅರ್ಹತಾ ಸುತ್ತಿನ 2 ಪಂದ್ಯಗಳಲ್ಲಿ ಕರ್ನಾಟಕ ಜಯ ಸಾಧಿಸಿದ್ದು, ಮುಂದಿನ ಹಂತ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಆರಂಭದಿಂದಲೂ ಉಭಯ ತಂಡಗಳು ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿದವು.

ಆಕ್ರಮಣಕಾರಿ ಆಟಕ್ಕೆ ಮುಂದಾದರೂ ಯಾವುದೇ ಪ್ರತಿಫಲ ಲಭಿಸಲಿಲ್ಲ. ಆದರೆ, ಪಂದ್ಯದ ಕೊನೆಯ ನಿಮಿಷದಲ್ಲಿ(90) ಕಮಲೇಶ್‌ .ಪಿ ಕರ್ನಾಟಕಕ್ಕೆ ಜಯದ ಗೋಲು ತಂದಿತ್ತರು. ಇದರೊಂದಿಗೆ ಕರ್ನಾಟಕ 2 ಜಯ ಸಾಧಿಸಿದ್ದು, 6 ಅಂಕಗಳನ್ನು ಸಂಪಾದಿಸಿದೆ. ಗುಂಪು ಹಂತದ ಕೊನೆ ಪಂದ್ಯದಲ್ಲಿ ಶನಿವಾರ ತೆಲಂಗಾಣ ವಿರುದ್ಧ ಕರ್ನಾಟಕ ಸೆಣಸಾಟ ನಡೆಸಲಿದೆ. ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 4-0 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿದೆ.

ಇನ್ನೊಂದೆಡೆ ಚಂಡಿಘಡ ತಂಡವು ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹಿಮಾಚಲ ಪ್ರದೇಶ ಎದುರು ಚಂಡೀಘಡ ತಂಡವು 2-0 ಗೋಲುಗಳ ಅಂತರದ ಗೆಲುವು ಸಾಧಿಸಿದೆ. 

ISL 2021-22: ಒಡಿಶಾ ವಿರುದ್ಧ ಬಿಎಫ್‌ಸಿಗೆ ಸೋಲಿನ ಆಘಾತ

ಆಡುವ ಹನ್ನೊಂದರ ಬಳಗದಲ್ಲಿ ಗೆಲುವು ಬದಲಾವಣೆಗಳೊಂದಿಗೆ ಕಣಕ್ಕಿಳಿದ ಚಂಡಿಘಡದ ಲೆಕ್ಕಾಚಾರ ಕೈ ಹಿಡಿಯಿತು. ಪಂದ್ಯಾಟದ 10ನೇ ನಿಮಿಷದಲ್ಲೇ ಗೌರವ್ ನೇಗಿ ಗೋಲು ಬಾರಿಸುವ ಮೂಲಕ ಚಂಡಿಘಡ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧದಲ್ಲಿ ಚಂಡಿಘಡ ತಂಡವು 1-0 ಮುನ್ನಡೆ ಸಾಧಿಸಿತ್ತು. ಇದಾದ ಬಳಿಕ ದ್ವಿತಿಯಾರ್ಧದ 47ನೇ ನಿಮಿಷದಲ್ಲಿ ಶಿವಂ ಪಾಂಡೆ ಮತ್ತೊಂದು ಗೋಲು ಬಾರಿಸಿ ಅಂತರವನ್ನು 2-0 ಗೆ ಹಿಗ್ಗಿಸಿದರು. ಹಿಮಾಚಲ ಪ್ರದೇಶ ತಂಡವು ಗೋಲು ಬಾರಿಸಲು ಸಾಕಷ್ಟು ಪ್ರಯತ್ನಿಸಿತಾದರೂ ಯಶಸ್ಸು ದಕ್ಕಲಿಲ್ಲ.

ಫುಟ್ಬಾಲ್‌ ಚಾಂಪಿಯನ್‌ಶಿಪ್‌: ರಾಜ್ಯ ತಂಡಕ್ಕೆ ತಾನ್ವಿ ನಾಯಕಿ

ಬೆಂಗಳೂರು: ನ.28ರಿಂದ ಕೇರಳದ ಕಲ್ಲಿಕೋಟೆಯಲ್ಲಿ ಆರಂಭವಾಗಲಿರುವ 26ನೇ ಹಿರಿಯ ಮಹಿಳಾ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ಗೆ 20 ಆಟಗಾರ್ತಿಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ತಾನ್ವಿ ಹ್ಯಾನ್ಸ್‌ ತಂಡವನ್ನು ಮುನ್ನಡೆಸಲಿದ್ದು, ನವೆಂಬರ್ 29ರಂದು ಜಾರ್ಖಂಡ್‌ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡ ಡಿಸೆಂಬರ್ 1ರಂದು ದೆಹಲಿ ಹಾಗೂ ಡಿಸೆಂಬರ್ 3ರಂದು ಗೋವಾ ವಿರುದ್ಧ ಸೆಣಸಾಡಲಿದೆ.

ಜೂನಿಯರ್‌ ಹಾಕಿ: ಭಾರತಕ್ಕೆ 13-1 ಗೋಲುಗಳ ಭರ್ಜರಿ ಜಯ

ಭುನವೇಶ್ವರ: ಅರೈಜೀತ್‌ ಸಿಂಗ್‌ ಹಾಗೂ ಸಂಜಯ್‌ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಪುರುಷರ ಜೂನಿಯರ್‌ ಹಾಕಿ ವಿಶ್ವಕಪ್‌ನಲ್ಲಿ (Junior Hockey World Cup) ಭಾರತ ತಂಡ ಕೆನಡಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಗುರುವಾರ ನಡೆದ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದ ಭಾರತ 13-1 ಗೋಲುಗಳಿಂದ ಜಯಭೇರಿ ಬಾರಿಸಿತು.

World Skating Games:ಭಾರತಕ್ಕೆ ಮೊದಲ ಪದಕ ಗೆದ್ದ ಆನಂದ್ ವೆಲ್ಕುಮಾರ್, ಯಾರೂ ಮಾಡದ ಸಾಧನೆಗೆ ಸಲಾಂ!

ಮೊದಲ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ ಹ್ಯಾಟ್ರಿಕ್‌ ಗೋಲು ಬಾರಿಸಿದ್ದ ಉಪನಾಯಕ ಸಂಜಯ್‌ ಮತ್ತೊಮ್ಮೆ ಹ್ಯಾಟ್ರಿಕ್‌ ಗೋಲಿನ ಮೂಲಕ ಮಿಂಚಿದರು. ಶಾರ್ದಾನಂದ್‌ ತಿವಾರಿ, ಉತ್ತಮ್‌ ಸಿಂಗ್‌ ತಲಾ 2, ಅಭಿಷೇಕ್‌ ಲಕ್ರಾ, ಮನೀಂದರ್‌ ಸಿಂಗ್‌ ಹಾಗೂ ವಿವೇಕ್‌ ಪ್ರಸಾದ್‌ ತಲಾ 1 ಗೋಲು ಹೊಡೆದರು. ಕೆನಡಾ ಪರ ಕ್ರಿಸ್ಟೋಫರ್‌ ಟಾರ್ಡಿಫ್‌ ಏಕೈಕ ಗೋಲು ಬಾರಿಸಿದರು.

Follow Us:
Download App:
  • android
  • ios