ಸಂತೋಷ್‌ ಟ್ರೋಫಿ: ಕೇರ​ಳ ವಿರುದ್ಧ ಕರ್ನಾ​ಟ​ಕಕ್ಕೆ ಭರ್ಜರಿ ಜಯ

ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕಕ್ಕೆ ಭರ್ಜರಿ ಜಯ
ಹಾಲಿ ಚಾಂಪಿಯನ್ ಕೇರಳ ಎದುರು ಗೆದ್ದು ಬೀಗಿದ ಕರ್ನಾಟಕ
ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟಕಕ್ಕೆ ಟೂರ್ನಿಯಲ್ಲಿ ಮೊದಲ ಗೆಲುವು

Santhosh Trophy Karnataka thrash defending Champion Kerala kvn

ಭುವ​ನೇ​ಶ್ವ​ರ(ಫೆ.13): ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಅಂತಿಮ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಕೇರಳ ವಿರುದ್ಧ ಕರ್ನಾಟಕ 1-0 ಗೋಲಿನ ಜಯ ಸಾಧಿಸಿದೆ. ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 20ನೇ ನಿಮಿಷದಲ್ಲಿ ಅಭಿಷೇಕ್‌ ಶಂಕರ್‌ ಬಾರಿಸಿದ ಗೋಲು, ಕರ್ನಾಟಕಕ್ಕೆ ಗೆಲುವು ತಂದುಕೊಟ್ಟಿತು. ರಾಜ್ಯದ ರಕ್ಷಣಾ ಪಡೆ ಆಕರ್ಷಕ ಪ್ರದರ್ಶನ ನೀಡಿ ಗಮನ ಸೆಳೆಯಿತು. 

ಮೊದಲ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಕರ್ನಾಟಕ 2-2ರ ಡ್ರಾ ಸಾಧಿಸಿತ್ತು. 2 ಪಂದ್ಯಗಳಿಂದ ಒಟ್ಟು 4 ಅಂಕ ಪಡೆದಿರುವ ರಾಜ್ಯ ತಂಡ ‘ಎ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಒಡಿಶಾ ಹಾಗೂ ಪಂಜಾಬ್‌ ಸಹ ತಲಾ 4 ಅಂಕ ಹೊಂದಿದ್ದರೂ, ಗೋಲು ವ್ಯತ್ಯಾಸದ ಆಧಾರದಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. 3ನೇ ಪಂದ್ಯ​ದಲ್ಲಿ ಕರ್ನಾ​ಟಕ ಮಂಗ​ಳ​ವಾರ ಗೋವಾ ವಿರುದ್ಧ ಸೆಣ​ಸಲಿದೆ.

ಬಿಎಫ್‌ಸಿ ಅಭಿಮಾನಿಗಳ ಮೇಲೆ ಕೇರಳ ಫ್ಯಾನ್ಸ್‌ ಹಲ್ಲೆ!

ಬೆಂಗ​ಳೂ​ರು: ಇಂಡಿ​ಯನ್‌ ಸೂಪರ್‌ ಲೀಗ್‌​(​ಐ​ಎ​ಸ್‌​ಎ​ಲ್‌)ನ ಬೆಂಗ​ಳೂರು ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್‌ ನಡು​ವಿನ ಪಂದ್ಯದ ವೇಳೆ ಆತಿಥೇಯ ತಂಡದ ಅಭಿಮಾನಿಗಳ ಮೇಲೆ ಕೇರಳ ಅಭಿಮಾನಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇರಳ ವಿರುದ್ಧ ಬಿಎಫ್‌ಸಿ 1-0 ಗೋಲಿನ ಜಯ ಸಾಧಿಸಿತ್ತು. 

ಬಾಲಿವುಡ್‌ 'ಹೀರೋ'ಗಿಂತ ಭಿನ್ನ ಆರ್‌.ಮಾಧವನ್‌ ಪುತ್ರ, ಖೇಲೋ ಇಂಡಿಯಾದಲ್ಲಿ 5 ಸ್ವರ್ಣ ಗೆದ್ದ ವೇದಾಂತ್!

ತಮ್ಮ ತಂಡ ಸೋತ ಹತಾಶೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಕೇರಳ ಅಭಿಮಾನಿಗಳು, ಬಿಎಫ್‌ಸಿಯ ಕೆಲ ಅಭಿಮಾನಿಗಳನ್ನು ಗುರಿಯಾಗಿಸಿ ವಾಗ್ವಾದಕ್ಕಿಳಿದರು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆಯಿತು. ವಾತಾವರಣ ತಿಳಿಗೊಳಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು. ಈ ಘಟನೆಯ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ಫೆಬ್ರವರಿ 20ರಂದು ಭಾರತದಲ್ಲಿ ಮೊದಲ ಬಾರಿ ಫ್ರೇಜನ್‌ ಲೇಕ್‌ ಮ್ಯಾರಥಾನ್‌ ಓಟ

ಲೇಹ್‌/ಜಮ್ಮು: ಭಾರತದಲ್ಲಿ ಮೊದಲ ಬಾರಿ ಘನೀಕೃತ ಸರೋವರ (ಫ್ರೇಜನ್‌ ಲೇಕ್‌) ಮ್ಯಾರಥಾನ್‌ ಅನ್ನು ಫೆಬ್ರವರಿ 20ರಂದು ಲಡಾಖ್‌ ಪ್ಯಾಂಗಾಂಗ್‌ ತ್ಸೋನಲ್ಲಿ ಆಯೋಜಿಸಲಾಗಿದೆ. 13,862 ಎತ್ತರದಲ್ಲಿ ಮ್ಯಾರಥಾನ್‌ ನಡೆಯಲಿದ್ದು, ಲುಕುಂಗ್‌ನಲ್ಲಿ ಓಟ ಪ್ರಾರಂಭವಾಗಿ ಭಾರತದ ಕಡೆಯ ಗ್ರಾಮ ಮಾನಾದಲ್ಲಿ ಅಂತ್ಯಗೊಳ್ಳಲಿದೆ. 21 ಕಿ.ಮೀ ಉದ್ದದ ಮ್ಯಾರಥಾನ್‌ ಇದಾಗಿದೆ. ಭಾರತ ಹಾಗೂ ವಿದೇಶದಿಂದ ಆಯ್ದ 75 ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ..

ಒಳಾಂಗ​ಣ ಅಥ್ಲೆ​ಟಿ​ಕ್ಸ್‌: ಭಾರ​ತಕ್ಕೆ 4 ಪದಕ

ಅಸ್ತಾ​ನ​(​ಕ​ಜ​ಕ​ಸ್ತಾ​ನ​): 2023ರ ಏಷ್ಯನ್‌ ಒಳಾಂಗ​ಣ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಭಾರ​ತ ಪದಕ ಬೇಟೆ ಆರಂಭಿ​ಸಿದ್ದು, ಮೊದಲ ದಿನವೇ 1 ಚಿನ್ನ ಸೇರಿ 4 ಪದಕ ಜಯಿಸಿದೆ. ಪುರು​ಷರ ಶಾಟ್‌​ಪು​ಟ್‌​ನಲ್ಲಿ ತೇಜಿಂದರ್‌ಪಾಲ್‌ ಸಿಂಗ್‌ ತೂರ್‌ 19.49 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದ​ರೆ, ಕರ​ಣ್‌​ವೀರ್‌ ಸಿಂಗ್‌​(19.37 ಮೀ.) ಬೆಳ್ಳಿ ಪಡೆ​ದ​ರು. ಮಹಿ​ಳೆ​ಯರ ಪೆಂಟಾ​ಥ್ಲಾ​ನ್‌​ನಲ್ಲಿ ಸ್ವಪ್ನಾ ಬರ್ಮನ್‌ ಬೆಳ್ಳಿ ಜಯಿ​ಸಿ​ದರು. ಪುರು​ಷರ ಟ್ರಿ​ಪಲ್‌ ಜಂಪ್‌​ನಲ್ಲಿ ಪ್ರವೀಣ್‌ ಚಿತ್ರ​ವೇಲು 16.98 ಮೀ. ದೂರ ಜಿಗಿದು ಬೆಳ್ಳಿ ಗೆದ್ದರು.

Latest Videos
Follow Us:
Download App:
  • android
  • ios