ಏಷ್ಯನ್‌ ಗೇಮ್ಸ್‌ಗೆ ಪಾಲ್ಗೊಳ್ಳಲಿರುವ ಭಾರತ ಫುಟ್ಬಾಲ್‌ ತಂಡದಲ್ಲಿಲ್ಲ ಸುನಿಲ್ ಚೆಟ್ರಿಗೆ ಸ್ಥಾನ?ಸಂಭಾವ್ಯ 22 ಆಟಗಾರರನ್ನೊಳಗೊಂಡ ಭಾರತ ತಂಡದಲ್ಲಿ ಸುನಿಲ್ ಚೆಟ್ರಿ ಇಲ್ಲ?ಭಾರತೀಯ ಫುಟ್ಬಾಲ್‌ ಫೆಡರೇಶನ್‌ನ ಎಡವಟ್ಟು?

ನವದೆಹಲಿ(ಜು.30): ಏಷ್ಯನ್‌ ಗೇಮ್ಸ್‌ಗೆ ಆಯ್ಕೆಯಾಗಿರುವ ಭಾರತ ಫುಟ್ಬಾಲ್‌ ತಂಡದಲ್ಲಿಲ್ಲ ನಾಯಕ ಸುನಿಲ್‌ ಚೆಟ್ರಿ, ಹಿರಿಯ ಡಿಫೆಂಡರ್‌ ಸಂದೇಶ್‌ ಝಿಂಗನ್‌, ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್‌ ಹೆಸರಿಲ್ಲ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಏಷ್ಯಾಡ್‌ನಲ್ಲಿ ಅಂಡರ್‌-23 ತಂಡಗಳು ಕಣಕ್ಕಿಳಿಯಲಿದ್ದು, 3 ಆಟಗಾರರು 23ಕ್ಕಿಂತ ಹೆಚ್ಚಿನ ವಯಸ್ಸಿನವರು ಇರಬಹುದು. ಈ ಮೂವರು ಹಿರಿಯ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿತ್ತಾದರೂ, ಭಾರತೀಯ ಫುಟ್ಬಾಲ್‌ ಫೆಡರೇಶನ್‌ನ ಎಡವಟ್ಟಿನಿಂದ ಈ ಮೂವರ ಹೆಸರು ಆಯೋಜಕರಿಗೆ ಸಲ್ಲಿಕೆಯಾಗಿಲ್ಲ.

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಪಾಕ್‌ಗೆ ಅನುಮತಿ

ಕರಾಚಿ: ಆ.3ರಿಂದ ಚೆನ್ನೈನಲ್ಲಿ ನಡೆಯಲಿರುವ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡಕ್ಕೆ ಅನುಮತಿ ದೊರೆತಿದೆ. ತಂಡವು ಮಂಗಳವಾರ ಭಾರತಕ್ಕೆ ಆಗಮಿಸಲಿದೆ. ಆಂತರಿಕ ವ್ಯವಹಾರಗಳ ಸಚಿವಾಲಯವು ಅನುಮತಿ ನೀಡಿದೆ ಎಂದು ಖಚಿತಪಡಿಸಿರುವ ಪಾಕಿಸ್ತಾನ ಹಾಕಿ ಫೆಡರೇಶನ್‌ ಕಾರ್ಯದರ್ಶಿ ಹೈದರ್‌ ಹುಸೇನ್‌, ‘ಮಂಗಳವಾರ ತಂಡವು ರಸ್ತೆ ಮಾರ್ಗವಾಗಿ ವಾಘಾ ಗಡಿ ಮೂಲಕ ಅಮೃತ್‌ಸರ ತಲುಪಲಿದೆ. ಅಲ್ಲಿಂದ ಚೆನ್ನೈಗೆ ವಿಮಾನದಲ್ಲಿ ಪ್ರಯಾಣಿಸಲಿದೆ’ ಎಂದಿದ್ದಾರೆ. ಟೂರ್ನಿಯಲ್ಲಿ 6 ತಂಡಗಳು ಸ್ಪರ್ಧಿಸಲಿದ್ದು, ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಆ.9ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ?

ಹಾಕಿ: ಭಾರತ ಮಹಿಳಾ ತಂಡಕ್ಕೆ 3-0 ಗೆಲುವು

ಬಾರ್ಸಿಲೋನಾ: ಸ್ಪ್ಯಾನಿಶ್‌ ಹಾಕಿ ಫೆಡರೇಶನ್‌ನ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಆಹ್ವಾನಿತ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಶನಿವಾರ ಇಂಗ್ಲೆಂಡ್‌ ವಿರುದ್ಧ 3-0 ಗೋಲುಗಳ ಜಯ ಸಾಧಿಸಿತು. ತಾರಾ ಸ್ಟ್ರೈಕರ್‌ ಲಾಲ್ರೆಮ್ಸಿಯಾಮಿ ಹ್ಯಾಟ್ರಿಕ್‌ ಗೋಲು ಬಾರಿಸಿದರು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 1-1ರಲ್ಲಿ ಡ್ತಾ ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ 2-2ರಲ್ಲಿ ಡ್ರಾ ಸಾಧಿಸಲು ಯಶಸ್ವಿಯಾಗಿತ್ತು. ಪ್ರವಾಸದ ಅಂತಿಮ ಪಂದ್ಯವನ್ನು ಭಾನುವಾರ ಸ್ಪೇನ್‌ ವಿರುದ್ಧ ಆಡಲಿದೆ.

ಏಕದಿನ ವಿಶ್ವಕಪ್‌ಗೆ ಈ ನಾಲ್ವರ ಪೈಕಿ ಯಾರಾಗಲಿದ್ದಾರೆ ಟೀಂ ಇಂಡಿಯಾ ವಿಕೆಟ್ ಕೀಪರ್?

ನಿಷೇಧ ಅವಧಿ ಮುಕ್ತಾಯ: ಪೂವಮ್ಮ ಮತ್ತೆ ಕಣಕ್ಕೆ

ಕೊಲಂಬೊ: 2021ರಲ್ಲಿ ಡೋಪಿಂಗ್‌ ಪರೀಕ್ಷೆಯಲ್ಲಿ ಫೇಲಾಗಿ ನಾಡಾದಿಂದ 2 ವರ್ಷ ನಿಷೇಧಕ್ಕೊಳಗಾಗಿದ್ದ ಭಾರತದ ಹಿರಿಯ ಅಥ್ಲೀಟ್‌, ಕರ್ನಾಟಕದ ಎಂ.ಆರ್‌.ಪೂವಮ್ಮ ಮತ್ತೆ ಸ್ಪರ್ಧಿಸಲು ಆರಂಭಿಸಿದ್ದಾರೆ. ನಿಷೇಧ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಅವರು ಶ್ರೀಲಂಕಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಖಾಸಗಿ ಅಥ್ಲೀಟ್‌ ಆಗಿ ಸ್ಪರ್ಧಿಸಿ, 400 ಮೀ. ಓಟದಲ್ಲಿ 7ನೇ ಸ್ಥಾನ ಪಡೆದರು.

ಜಪಾನ್‌ ಓಪನ್‌: ಸೆಮೀಸ್‌ನಲ್ಲಿ ಸೋತ ಲಕ್ಷ್ಯ ಸೆನ್‌

ಟೋಕಿಯೋ: ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಜಪಾನ್‌ ಓಪನ್‌ ಸೂಪರ್‌ 750 ಟೂರ್ನಿಯ ಪುರುಷರ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.9, ಹಾಲಿ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಇಂಡೋನೇಷ್ಯಾದ ಜೋನಾಥನ್‌ ಕ್ರಿಸ್ಟಿ ವಿರುದ್ಧ 15-21, 21-13, 16-21 ಗೇಮ್‌ಗಳಲ್ಲಿ ಸೋಲುಂಡರು.

ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ಆಟಗಾರರ ನಡುವೆ ಪ್ರತಿ ಅಂಕಕ್ಕೂ ಪೈಪೋಟಿ ಏರ್ಪಟ್ಟಿತ್ತು. ಸೇನ್‌ನ ಪ್ರಬಲ ಸ್ಮ್ಯಾಶ್‌ಗಳು ಹಾಗೂ ಆಕ್ರಮಣಕಾರಿ ಆಟವನ್ನು ಸಮರ್ಥವಾಗಿ ಎದುರಿಸಿದ ಕ್ರಿಸ್ಟಿ, ಉತ್ಕೃಷ್ಟ ಗುಣಮಟ್ಟದ ಆಟ ಪ್ರದರ್ಶಿಸಿ ಜಯ ಸಾಧಿಸಿದರು.