ಎಸ್‌ಡಿಪಿಐ ಧ್ವಜ ಎಂದುಕೊಂಡು ಪೋರ್ಚುಗಲ್‌ ಧ್ವಜ ಹರಿದ ವ್ಯಕ್ತಿ, ರೊನಾಲ್ಡೊ ಅಭಿಮಾನಿಗಳಿಂದ ಗೂಸಾ!

ಕತಾರ್‌ನಲ್ಲಿ ವಿಶ್ವಕಪ್‌ ಆರಂಭವಾಗಿರುವಂತೆ ಭಾರತದಲ್ಲೂ ಅದರ ಕ್ರೇಜ್‌ ಆರಂಭವಾಗಿದೆ. ಈ ನಡುವೆ ಕೇರಳದಲ್ಲಿ ಎಸ್‌ಡಿಪಿಐ ಧ್ವಜ ಎಂದುಕೊಂಡು ಪೋರ್ಚುಗಲ್‌ ತಂಡದ ಧ್ವಜವನ್ನು ಹರಿದ ವ್ಯಕ್ತಿಗೆ ಕ್ರಿಶ್ಚಿಯಾನೋ ರೊನಾಲ್ಡೊ ಅಭಿಮಾನಿಗಳು ಹಲ್ಲೆ ನಡೆದ ಘಟನೆ ನಡೆದಿದೆ.
 

Man from Kerala tears up Portugal flag ahead of FIFA World Cup  Christiano Ronaldo fans Beats him san

ಕೊಚ್ಚಿ (ನ.20): ಕತಾರ್‌ನಲ್ಲಿ ಮಾತ್ರವಲ್ಲ ಕೇರಳದಲ್ಲೂ ಕೂಡ ಫಿಫಾ ವಿಶ್ವಕಪ್‌ ಫೀವರ್‌ ಜೋರಾಗಿದೆ. ಕೇರಳದ ವಿವಿಧ ಜಿಲ್ಲೆಗಳಲ್ಲಿ ಆಯಾ ದೇಶಗಳನ್ನು ಬೆಂಬಲಿಸಿ, ಆದೇಶದ ಧ್ವಜಗಳನ್ನು ಹಾಕಿ ಅಭಿಮಾನಿಗಳು ಸಪೋರ್ಟ್‌ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಪೋರ್ಚುಗಲ್‌, ಅರ್ಜೆಂಟೀನಾ, ಬ್ರೆಜಿಲ್‌ ದೇಶಗಳಿಗೆ ಕೇರಳದಲ್ಲಿ ಬೆಂಬಲ ಹೆಚ್ಚು. ಈ ನಡುವೆ ಪೋರ್ಚುಗಲ್‌ ದೇಶದ ಧ್ವಜವನ್ನು ವಿವಾದಿತ ಇಸ್ಲಾಮಿಕ್‌ ಗುಂಪು ಎಸ್‌ಡಿಪಿಐನ ಧ್ವಜ ಎಂದು ಭಾವಿಸಿದ ವ್ಯಕ್ತಿಯೊಬ್ಬ ಇದನ್ನು ಹರಿದುಹಾಕಿದ್ದ. ಇದರಿಂದ ಕುಪಿತಗೊಂಡ ಕ್ರಿಶ್ಚಿಯಾನೋ ರೊನಾಲ್ಡೋ ಅಭಿಮಾನಿಗಳು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಧ್ವಜವನ್ನು ಹರಿದ ದೀಪಕ್‌ ಎಳನ್ಗೋಡ್‌ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೇರಳದ ಕಣ್ಣೂರಿನ ರಸ್ತೆ ಬದಿಯಲ್ಲಿ ಪೋರ್ಚುಗಲ್‌ ತಂಡಕ್ಕೆ ಬೆಂಬಲ ನೀಡಿ ಧ್ವಜಗಳನ್ನು ಹಾಕಲಾಗಿತ್ತು. ಕೆಂಪು ಹಾಗೂ ಹಸಿರು ಬಣ್ಣ ಹೊಂದಿರುವ ಈ ಧ್ವಜ, ನಿಷೇಧಿತ ಪಿಎಫ್‌ಐ ಸಂಘಟನೆಯ ಅಂಗಸಂಸ್ಥೆಯಾಗಿರುವ ಎಸ್‌ಡಿಪಿಐನ ಧ್ವಜವನ್ನೇ ಹೋಲುತ್ತದೆ. ಪೋರ್ಚುಗಲ್‌ ಧ್ವಜವನ್ನು ಎಸ್‌ಡಿಪಿಐ ಧ್ವಜ ಎಂದುಕೊಂಡ ದೀಪಕ್‌, ರಸ್ತೆಯ ಪಕ್ಕ ಹಾಕಿದ್ದ ಎಲ್ಲಾ ಧ್ವಜವನ್ನು ಹರಿದು ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೋರ್ಚುಗಲ್‌ ಹಾಗೂ ರೊನಾಲ್ಡೋ ಅಭಿಮಾನಿಗಳು ದೀಪಕ್‌ ಮೇಲೆ ಹಲ್ಲೆ ಮಾಡಿದ್ದಾರೆ.


ಕೇರಳದ ಪಾಣೂರಿನಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕ ಶಾಂತಿಯನ್ನು ಹಾಳು ಮಾಡಿದ ಕಾರಣಕ್ಕೆ ದೀಪಕ್‌ ಎಳನ್ಗೋಡ್‌ ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರಾದರೂ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪೋರ್ಚುಗಲ್‌ನ ಕೆಂಪು-ಹಸಿರು ಧ್ವಜವು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಧ್ವಜವನ್ನು ಹೋಲುತ್ತದೆ. ದೀಪಕ್‌ ಎಳನ್ಗೋಡ್‌ ಎಸ್‌ಡಿಪಿಐ ಕುರಿತಾಗಿ ಅಸಮಾಧಾನವನ್ನು ಹೊಂದಿದ್ದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

FIFA WORLD CUP 2022: ಫುಟ್‌ಬಾಲ್‌ ವಿಶ್ವಕಪ್‌ಗೆ ಅದ್ದೂರಿ ಆರಂಭ!

ಎಸ್‌ಡಿಪಿಐ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ವಿಭಾಗವಾಗಿದೆ, ಇದು ಇಸ್ಲಾಮಿಸ್ಟ್ ಚಳವಳಿಯ ಸಂಘಟನೆಯಾಗಿದೆ. ಭಯೋತ್ಪಾದಕ ಕೃತ್ಯಗಳಲ್ಲಿ ಸಂಬಂಧವಿದ್ದ ಕಾರಣಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಇದನ್ನು ನಿಷೇಧಿಸಲಾಗಿತ್ತು. ಆದರೆ, ಪಾಣೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐಗೆ ಇನ್ನೂ ದೊಡ್ಡ ಮಟ್ಟದ ಬೆಂಬಲವಿದೆ.

ಕ್ರಿಕೆಟ್‌ನ ಗೀಳಿಗೆ ಹೆಸರುವಾಸಿಯಾದ ಭಾರತದಲ್ಲಿ ಫುಟ್‌ಬಾಲ್‌ ಕ್ರೇಜ್‌ನ ವಿಚಾರವಾಗಿ ಬಂದಾಗ ಕೇರಳ, ಗೋವಾ ಹಾಗೂ ಕೋಲ್ಕತ್ತಾ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಪ್ರತಿ ನಾಲ್ಕು ವರ್ಷಕೊಮ್ಮೆ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ನೀಲಿ, ಚಿನ್ನದ ಬಣ್ಣದ ಜೆರ್ಸಿಗಳು ರಾರಾಜಿಸುತ್ತವೆ. ಫುಟ್‌ಬಾಲ್‌ ಪವರ್‌ಹೌಸ್‌ ಆಗಿರುವ ಹಾಗೂ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಬ್ರೆಜಿಲ್‌-ಅರ್ಜೆಂಟೀನಾಗೆ ದೊಡ್ಡ ಮಟ್ಟದ ಬೆಂಬಲ ಇಲ್ಲಿ ಕಂಡು ಬರುತ್ತದೆ.

FIFA World Cup 2022 Prize Money: ಫುಟ್‌ಬಾಲ್‌-ಕ್ರಿಕೆಟ್‌ ವಿಶ್ವಕಪ್‌ ಬಹುಮಾನ ಮೊತ್ತ ಅಜಗಜಾಂತರ!

ಇನ್ನು ಕ್ರಿಶ್ಚಿಯಾನೋ ರೊನಾಲ್ಡೊ ಸ್ಟಾರ್ ಪವರ್‌, ಕೇರಳದಲ್ಲಿ ಪೋರ್ಚುಗಲ್‌ ದೇಶದ ಅಭಿಮಾನಿ ಬಳಗವನ್ನೂ ಹೆಎಚ್ಚು ಮಾಡಿದೆ. ಸಾಮಾನ್ಯವಾಗಿ ಗೋವಾದಲ್ಲಿ ಪೋರ್ಚುಗಲ್‌ ತಂಡಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದ್ದವು. ಪೋರ್ಚುಗಲ್‌ನ ದೊಡ್ಡ ವಸಹಾತು ಪ್ರದೇಶವಾಗಿದ್ದ ಕಾರಣಕ್ಕೆ ಇಂದಿಗೂ ಗೋವಾದ ಸಂಸ್ಜೃತಿಯಲ್ಲಿ ಪೋರ್ಚುಗಲ್‌ನ ಛಾಯೆಯನ್ನು ಕಾಣಬಹುದಾಗಿದೆ. ಅಂತರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಕೇರಳದಲ್ಲಿ ಅದರ ಕ್ರೇಜ್‌ ಹೆಚ್ಚಿರುತ್ತದೆ. ಭಾನುವಾರ ಕತಾರ್‌ನಲ್ಲಿ ಆರಂಭವಾದ ಫಿಫಾ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ನೇಮರ್ ಜೂನಿಯರ್‌ನಂತಹ ತಾರೆಯರ ದೊಡ್ಡ ಕಟೌಟ್‌ಗಳನ್ನು ರಾಜ್ಯಾದ್ಯಂತ ಹಾಕಲಾಗಿದೆ. 

Latest Videos
Follow Us:
Download App:
  • android
  • ios