ಭಾರತಕ್ಕೆ ಫುಟ್ಬಾಲ್ ಆಡಲು ಬರುತ್ತಿದ್ದಾರೆ ಲಿಯೋನೆಲ್ ಮೆಸ್ಸಿ! ಇಲ್ಲಿದೆ ಡೀಟೈಲ್ಸ್
ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ, ಫುಟ್ಬಾಲ್ ಪಂದ್ಯವನ್ನಾಡಲು ಭಾರತ ಬರುವ ವಿಚಾರವನ್ನು ಕೇರಳ ಕ್ರೀಡಾಸಚಿವರು ಖಚಿತಪಡಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ತಿರುವನಂತಪುರಂ: ಫುಟ್ಬಾಲ್ ದಂತಕಥೆ, ಅರ್ಜಿಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಪಂದ್ಯವನ್ನಾಡಲು ಭಾರತಕ್ಕೆ ಬರುತ್ತಿದ್ದಾರೆ. ಬುಧವಾರ(ನ.20) ಹೀಗಂತ ವಿಶ್ವಾಸ ವ್ಯಕ್ತಪಡಿಸಿದ್ದು, ಕೇರಳ ಕ್ರೀಡಾಸಚಿವ ವಿ ಅಬ್ದುರೆಹಮಾನ್. ಅಂತರಾಷ್ಟ್ರೀಯ ಪಂದ್ಯವನ್ನಾಡಲು ಮೆಸ್ಸಿ ಮುಂದಿನ ವರ್ಷ ಭಾರತಕ್ಕೆ ಬರಲಿದ್ದಾರೆ. ಈ ಪಂದ್ಯವನ್ನು ಕೇರಳ ಸರ್ಕಾರವೇ ಮೇಲುಸ್ತುವಾರಿ ನೋಡಿಕೊಳ್ಳಲಿದೆ ಎಂದು ಕೇರಳ ಕ್ರೀಡಾ ಸಚಿವರು ಹೇಳಿದ್ದಾರೆ.
ಲಿಯೋನೆಲ್ ಮೆಸ್ಸಿ 2011ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ಫುಟ್ಬಾಲ್ ಪಂದ್ಯವನ್ನು ಆಡಿದ್ದರು. ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಸ್ನೇಹಾರ್ಥ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ವೆನುಜುಯೆಲಾ ತಂಡಗಳು ಕಾದಾಡಿದ್ದು. ಈ ಪಂದ್ಯವು ಗೋಲು ರಹಿತ ಡ್ರಾನಲ್ಲಿ ಅಂತ್ಯವಾಗಿತ್ತು. ಜಾಗತಿಕ ಫುಟ್ಬಾಲ್ ಐಕಾನ್ ಆಗಿರುವ ಲಿಯೋನೆಲ್ ಮೆಸ್ಸಿಗೆ ಭಾರತದಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ.
IPL ಹರಾಜಿನಲ್ಲಿ ರಾಹುಲ್‌ಗಾಗಿ ಈ 2 ತಂಡಗಳ ನಡುವೆ ಪೈಪೋಟಿ ಎಂದ ಸನ್ನಿ!
ಭಾರತದಲ್ಲಿ ಕ್ರಿಕೆಟ್ ಅನ್ನು ಒಂದು ಧರ್ಮದಂತೆ ಆರಾಧಿಸುವ ವರ್ಗವೇ ಇದೆ. ಹೀಗಿದ್ದೂ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯ ಫುಟ್ಬಾಲ್ ಅಭಿಮಾನಿಗಳಿದ್ದಾರೆ. ಅದರಲ್ಲೂ ಕೇರಳದಲ್ಲಂತೂ ಮೆಸ್ಸಿ ಮೇನಿಯಾವೇ ಇದೆ. ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಕಳೆದ ವರ್ಷ ಪ್ಯಾರಿಸ್ ಸೈಂಟ್ ಜರ್ಮೈನ್ ಕ್ಲಬ್ ತೊರೆದು ಮೇಜರ್ ಲೀಗ್ ಸಾಕರ್ ಸೇರಿಕೊಂಡಿದ್ದರು. ಸಾವಿರಾರು ಮೈಲುಗಳ ದೂರದಲ್ಲಿ ಮೇಜರ್ ಲೀಗ್ ಸಾಕರ್ ಟೂರ್ನಿ ನಡೆದರೂ, ಭಾರತೀಯ ಫುಟ್ಬಾಲ್ ಪ್ರೇಮಿಗಳು ಎವೆಯಿಕ್ಕದೇ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಾ ಬಂದಿದ್ದಾರೆ. ಕೇರಳದಲ್ಲಿ ಫುಟ್ಬಾಲ್ ಹಾಗೂ ಲಿಯೋನೆಲ್ ಮೆಸ್ಸಿ ಅವರನ್ನು ಆರಾಧಿಸುವ ವರ್ಗವೇ ಇದೆ.
ಫಿಫಾ ಫುಟ್ಬಾಲ್ ಗೆಲ್ಲುವ ಮೆಸ್ಸಿ ಕನಸು ನನಸು:
ಫುಟ್ಬಾಲ್ ಲೀಗ್‌ಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಲಿಯೋನೆಲ್ ಮೆಸ್ಸಿಗೆ ಫಿಫಾ ವಿಶ್ವಕಪ್ ಗೆಲ್ಲಬೇಕೆನ್ನುವ ಕನಸು ಸಾಕಷ್ಟು ವರ್ಷಗಳಿಂದ ಕನಸಾಗಿಯೇ ಉಳಿದಿತ್ತು. ಆದರೆ 2022ರಲ್ಲಿ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸುವ ಮೂಲಕ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರೊಂದಿಗೆ ಮೆಸ್ಸಿಯ ಬಹುಕಾಲದ ಕನಸು ನನಸಾಗಿತ್ತು. ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಗೆಲ್ಲುವಲ್ಲಿ ಲಿಯೋನೆಲ್ ಮೆಸ್ಸಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತೀಯ ಚೆಸ್ ಪ್ಲೇಯರ್ ಕಾಲು ಮುಟ್ಟಿ ನಮಸ್ಕರಿಸಿದಾಗ ಕಕ್ಕಾಬಿಕ್ಕಿಯಾದ ಮ್ಯಾಗ್ನಸ್ ಕಾರ್ಲಸನ್, ವಿಡಿಯೋ ವೈರಲ್
ಇನ್ನು ಫಿಫಾ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ ಹೇಳಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದೀಗ ಲಿಯೋನೆಲ್ ಮೆಸ್ಸಿ 2028ರ ಫಿಫಾ ವಿಶ್ವಕಪ್‌ಗೆ ತಂಡವನ್ನು ಅರ್ಹತೆ ಪಡೆಯುವಂತೆ ಮಾಡಲು ಮೈದಾನಕ್ಕಿಳಿದಿದ್ದಾರೆ. 2028ರ ಫಿಫಾ ವಿಶ್ವಕಪ್ ಟೂರ್ನಿಯು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಲಿಯೋನೆಲ್ ಮೆಸ್ಸಿ ಇದುವರೆಗೂ ಬರೋಬ್ಬರಿ 8 ಬಾರಿ ಪ್ರತಿಷ್ಠಿತ ಬಾಲನ್ 'ಡಿ' ಓರ್ ಪ್ರಶಸ್ತಿ ಜಯಿಸಿದ್ದಾರೆ.