ಮೆಸ್ಸಿಗೆ ಮೊದಲ ಟ್ರೋಫಿ: ಕೋಪಾ ಕಪ್ ಗೆದ್ದ ಅರ್ಜೆಂಟೀನಾ
* ಕೋಪಾ ಅಮೆರಿಕ ಕಪ್ ಫೈನಲ್‌ನಲ್ಲಿ ಬ್ರೆಜಿಲ್ ಮಣಿಸಿದ ಅರ್ಜೆಂಟೀನಾ ಚಾಂಪಿಯನ್
* ದಿಗ್ಗಜ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿಗೆ ಒಲಿದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ
* ಬ್ರೆಜಿಲ್ ಎದುರು ಫೈನಲ್‌ನಲ್ಲಿ ಮೆಸ್ಸಿ ಪಡೆಗೆ 1-0 ಅಂತರದ ಗೆಲುವು
ರಿಯೋ ಡಿ ಜನೈರೊ(ಜು.12): ಕೋಪಾ ಅಮೆರಿಕ ಕಪ್ ಫೈನಲ್‌ನಲ್ಲಿ ಎರಡು ಬಹು ನಿರೀಕ್ಷಿತ ಕನಸುಗಳು ಈಡೇರಿದವು. ಮೊದಲನೇಯದ್ದು, ಅರ್ಜೆಂಟೀನಾ 1993ರ ಬಳಿಕ ಮೊದಲ ಮಹತ್ವದ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. ದಿಗ್ಗಜ ಲಿಯೋನೆಲ್ ಮೆಸ್ಸಿ ರಾಷ್ಟ್ರೀಯ ತಂಡದೊಂದಿಗೆ ಮೊದಲ ಟ್ರೋಫಿ ಜಯಿಸಿದರು.
ಇಲ್ಲಿನ ಮರಕಾನ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ ಅರ್ಜೆಂಟೀನಾ 1-0 ಗೋಲಿನಲ್ಲಿ ಗೆಲುವು ಸಾಧಿಸಿತು. 22ನೇ ನಿಮಿಷದಲ್ಲಿ ರೋಡ್ರಿಗೋ ಡಿ ಪಾಲ್ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ ಹಿರಿಯ ಆಟಗಾರ ಏಂಜೆಲ್ ಡಿ ಮರಿಯಾ, ಅರ್ಜೆಂಟೀನಾಗೆ ಮುನ್ನಡೆ ನೀಡಿದರು. ಪಂದ್ಯದಲ್ಲಿ ದಾಖಲಾಗಿದ್ದು ಇದೊಂದೇ ಗೋಲು. ಅರ್ಜೆಂಟೀನಾ ರಕ್ಷಣಾ ಪಡೆಯನ್ನು ಭೇದಿಸಲು ಬ್ರೆಜಿಲ್ ಆಟಗಾರರಿಗೆ ಸಾಧ್ಯವಾಗಲಿಲ್ಲ.
ಯುರೋ ಕಪ್ ಫೈನಲ್: ಇಟಲಿಯ 1 ಸಾವಿರ ಅಭಿಮಾನಿಗಳಿಗೆ ಅವಕಾಶ
ಮೆಸ್ಸಿ ನಿರಾಳ: 2007, 2015, 2016ರ ಕೋಪಾ ಅಮೆರಿಕ ಫೈನಲ್ ಪ್ರವೇಶಿಸಿದ್ದ ಅರ್ಜೆಂಟೀನಾ ತಂಡದಲ್ಲಿದ್ದ ಮೆಸ್ಸಿ, ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ವಿಫಲರಾಗಿದ್ದರು. ಅಲ್ಲದೇ 2014ರ ವಿಶ್ವಕಪ್ ಫೈನಲ್‌ನಲ್ಲೂ ಅರ್ಜೆಂಟೀನಾ ಎಡವಿತ್ತು. ಕೊನೆಗೂ ಮೆಸ್ಸಿ ಮಹತ್ವದ ಟೂರ್ನಿಯೊಂದನ್ನು ಗೆದ್ದು ಸಂಭ್ರಮಿಸಿದ್ದಾರೆ.