ಮಲಪುರಂ(ಡಿ.30): ಪಶ್ಚಿಮ ಬಂಗಾಳ ಮೊಹನ್‌ ಬಗಾನ್ ತಂಡದ ಸ್ಟಾರ್ ಆಟಗಾರನಾಗಿದ್ದ ಕೇರಳದ ಆರ್ ಧನರಾಜನ್ ಪಂದ್ಯ ಆಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ನಡೆದ ಪಿರಿಂದಲಮನ್ನ ಹಾಗ ಸಷ್ಠ ತ್ರಿಶೂರ್ ನಡುವಿನ ಪಂದ್ಯದಲ್ಲಿ ಈ ದುರ್ಘಟನೆ ನಡಿದಿದೆ. ಈ ಘಟನೆ ಫುಟ್ಬಾಲ್ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್ ನೀಡಿದ ಮುಂಬೈ FC

ಪಂದ್ಯ ಆರಂಭಗೊಂಡ 27ನೇ ನಿಮಿಷದಲ್ಲಿ ಡಿಫೆಂಡರ್ ಆರ್ ಧನರಾಜನ್ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಧನರಾಜನ್ ಪ್ರಾಣ ಪಕ್ಷಿ ಹಾರಿಹೋಗಿತ್ತು. 39 ವರ್ಷದ ಧನರಾಜನ್‌ಗೆ ಅಭಿಮಾನಿಗಳು ಧನಾ ಎಂದು ಕರೆಯುತ್ತಿದ್ದರು. 

ಇದನ್ನೂ ಓದಿ: ಫಿಫಾ ಕಿರಿಯರ ವಿಶ್ವಕಪ್‌: ಅಹಮದಾಬಾದ್‌ ಆತಿಥ್ಯ

ಭಾರತದ ಪ್ರಸಿದ್ಧ ಮೋಹನ್ ಬಗಾನ್ ತಂಡ 2011ರಲ್ಲಿ ಪ್ರತಿಷ್ಠಿತ ಸಂತೋಷ್ ಟ್ರೋಫಿ ಗೆಲುವಿನಲ್ಲಿ ಇದೇ ಆರ್ ಧನರಾಜನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆರ್ ಧನರಾಜನ್ ಭಾರತದ ಪ್ರಖ್ಯಾತ ಫುಟ್ಬಾಲ್ ಕ್ಲಬ್‌ಗಳಾದ ಮೊಹಮ್ಮದನ್ಸ್, ವಿವಾ ಕೇರಳ, ಚಿರಾಕ್ ಯುನೈಟೆಡ್ ತಂಡ ಪ್ರತಿನಿದಿಸಿದ್ದರು.