ಗೋವಾ(ಫೆ.28):  ಎಟಿಕೆ ಮೋಹನ್ ಬಾಗನ್ ತಂಡವನ್ನು 2-0 ಗೋಲಿನಿಂದ ಮಣಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಲೀಗ್ ವಿನ್ನರ್ಸ್ ಪಟ್ಟ ತನ್ನದಾಗಿಸಿಕೊಂಡು ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದೆ. ಮೌರ್ಥದಾ ಫಾಲ್ (7ನೇ ನಿಮಿಷ) ಹಾಗೂ ಬಾರ್ಥಲೋಮ್ಯೊ ಒಗ್ಬಚೆ (39ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೇರಲು ವಿಫಲವಾದ ಬೆಂಗಳೂರು FC!

ಮುನ್ನಡೆ ಕಂಡ ಮುಂಬೈ: 
ಮೌರ್ಥದಾ ಫಾಲ್ (7ನೇ ನಿಮಿಷ) ಹಾಗೂ ಬಾರ್ಥಲೋಮ್ಯೋ ಒಗ್ಬಚೆ (39ನೇ ನಿಮಿಷ) ಗಳಿಸಿದ ಗೋಲುಗಳ ನೆರವನಿಂದ ಮುಂಬೈ ಸಿಟಿ ಎಫ್ ಸಿ ಪ್ರಥಮಾರ್ಧದಲ್ಲೇ ಜಯಕ್ಕೆ ಬೇಕಾಗಿರುವ ವೇದಿಕೆ ನಿರ್ಮಿಸಿಕೊಂಡು ಮುನ್ನಡೆ ಕಂಡುಕೊಂಡಿತು. ಇಲ್ಲಿ ಜಯಕ್ಕಿಂತ ಮುಖ್ಯವಾಗಿ ಮುಂಬೈ ಲೀಗ್ ಚಾಂಪಿಯನ್ ಪಟ್ಟಕ್ಕೆ ಅಗತ್ಯವಿರುಗ  ಅಂಕ ಗಳಿಸಿಕೊಂಡಿತು. 

ಅಹಮದ್ ಜೊಹುವಾ ಅವರು ನೀಡಿದ ಫ್ರೀ ಕಿಕ್ ಗೆ ಹೆಡರ್ ಮೂಲಕ ಫಾಲ್ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಸಂದೇಶ್ ಜಿಂಗಾನ್ ಪ್ರಥಮಾರ್ಧದಲ್ಲಿ ಗಾಯಗೊಂಡಿದ್ದು ಮೆರಿನರ್ಸ್ ಖ್ಯಾತಿಯ ಬಾಗನ್ ತಂಡಕ್ಕೆ ತುಂಬಲಾರದ ನಷ್ಟವಾಯಿತು. 39ನೇ ನಿಮಿಷದಲ್ಲಿ ಹೆರ್ನಾನ್ ಸ್ಯಾಂಟಸಾ ನೀಡಿದ ಫ್ರೀಕಿಕ್ ಗೆ ಬಾರ್ಥಲೋಮ್ಯೋ ಒಗ್ಬಚೆ ಹೆಡರ್ ಮೂಲಕ ಗೋಲು ಗಳಿಸಿದರು. ದ್ವಿತಿಯಾರ್ಧದಲ್ಲಿ ಮೋಹನ್ ಬಾಗನ್ ತನ್ನ ನೈಜ ಸಾಮರ್ಥ್ಯ ತೋರಿ ಸಮಬಲ ಸಾಧಿಸಬೇಕಾಗಿದೆ.