ಗೋವಾ(ಜ.25):  ಹ್ಯೂಗೋ ಬೌಮಾಸ್ (26 ಮತ್ತು 83ನೇ ನಿಮಿಷ) ಮತ್ತು ಜಾಕಿಚಾಂದ್ ಸಿಂಗ್ (45ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು  3-2 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.  ಕೇರಳ ಬ್ಲಾಸ್ಟರ್ಸ್ ಪರ ಮೆಸ್ಸಿ ಬೌಲಿ (53ನೇ ನಿಮಿಷ) ಹಾಗೂ ಬಾರ್ಥಲೋಮ್ಯೋ ಒಗ್ಬಚೆ (69ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಸೋಲಿನೊಂದಿಗೆ ಕೇರಳದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಯಿತು.

ಐಎಸ್‌ಎಲ್‌: ಬಿಎಫ್‌ಸಿಗೆ 2-0 ಜಯ

ಪ್ರಥಮಾರ್ಥದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಎಫ್ ಸಿ ಗೋವಾ ತಂಡ ಮನೆಯಂಗಣದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮೇಲುಗೈ ಸಾಧಿಸಿತು. 26ನೇ ನಿಮಿಷದಲ್ಲಿ ಹ್ಯೂಗೋ ಬೌಮಾಸ್ ತಂಡದ ಪರ ಮೊದಲ ಗೋಲು ಗಳಿಸಿದರೆ, ಜಾಕಿಚಾಂದ್ ಸಿಂಗ್ ಪ್ರಥಮಾರ್ಧದ ಕೊನೆಯ ಕ್ಷಣ ಅಂದರೆ 45ನೇ ನಿಮಿಷದಲ್ಲಿ ಗಳಿಸಿದ ಗೋಲು ಆತಿಥೇಯ ತಂಡ 2-0 ಅಂತರದಲ್ಲಿ ಮೈಲುಗೈ ಸಾಧಿಸಿತು. 

ಗೋವಾ ತಂಡ ಪಂದ್ಯದ ಪ್ರತಿಯೊಂದು ಹಂತದಲ್ಲೂ ಮೇಲುಗೈ ಸಾಧಿಸಿತು. ಕೇರಳ ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸಿದರೂ ಗೋಲ್ ಗಳಿಸುವ ಅವಕಾಶ ನಿರ್ಮಿಸಿಲ್ಲ. ಗೋವಾ ನಿರಂತರವಾಗಿ ಆಕ್ರಮಣಕಾರಿ ಆಟವನ್ನೇ ಮುಂದುವರಿಸಿತು. ಕೇರಳಕ್ಕೆ ಬಾರ್ಥಲೋಮ್ಯೋ ಒಗ್ಬಚೆ ಮುನ್ನಡೆ ಕಾಣುವ ಅವಕಾಶ ಸಿಕ್ಕತ್ತು, ಆದರೆ ಗುರಿ ಗೋಲ್ ಬಾಕ್ಸ್ ಕಡೆಗೆ ಇರಲಿಲ್ಲ. ಗೋವಾ ಆಕ್ರಮಣಕಾರಿ ಆಟ ಮುಂದುವರಿಸಿತು. 45ನೇ ನಿಮಿಷದಲ್ಲಿ ಜಾಕಿಚಾಂದ್ ಸಿಂಗ್ ಗಳಿಸಿದ ಗೋಲು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿತ್ತು, ಗೆಲ್ಲಲೇಬೇಕಾದ ಪಂದ್ಯದ ಪ್ರಥಮಾರ್ಧದಲ್ಲೇ ಕೇರಳ ಹಿನ್ನಡೆ ಕಂಡಿರುವುದರಿಂದ ದ್ವಿತಿಯಾರ್ಧದಲ್ಲಿ ಒತ್ತಡದಲ್ಲಿ ಆಡಬೇಕಾದ ಅನಿವಾರ್ಯತೆಗೆ ಸಿಲುಕಿತು.