ISL 7: ಕೊರೋನಾದಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆ ಮತ್ತೆ ಆರಂಭ!
ಕೊರೋನಾ ವೈರಸ್ ಕಾರಣ ಕಳೆದ ಆವೃತ್ತಿ ಫೈನಲ್ ಪಂದ್ಯ ಅಭಿಮಾನಿಗಳಿಲ್ಲದೆ ಆಯೋಜಿಸಲಾಗಿತ್ತು. ಇದೇ ಕೊನೆಯ ಪಂದ್ಯವಾಗಿತ್ತು. ಬಳಿಕ ಕೊರೋನಾ, ಲಾಕ್‌ಡೌನ್ ಕಾರಣ ಎಲ್ಲಾ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿತು. ಇದೀಗ 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಕ್ರೀಡಾ ಹಬ್ಬ ನಡೆಯುತ್ತಿದೆ.
ಪಣಜಿ(ನ.19): ಕಳೆದ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ಪಂದ್ಯದಲ್ಲಿ ಎಟಿಕೆ ಮತ್ತು ಚೆನ್ನೈಯಿನ್ ಎಫ್ ಸಿ ತಂಡಗಳು ಮುಖಾಮುಖಿಯಾದಾಗ ಕೊರೋನಾ ಸೋಂಕು ಭಾರತಕ್ಕೆ ಕಾಲಿಟ್ಟಿತು. ಅಭಿಮಾನಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿ ಫೈನಲ್ ಪಂದ್ಯ ಆಯೋಜಿಸಲಾಗಿತ್ತು. ಇದು ಭಾರತದಲ್ಲಿ ನಡೆದ ಕೊನಯ ಫೈನಲ್ ಕ್ರೀಡಾ ಪಂದ್ಯವಾಗಿದೆ.
ಶುರುವಾಗುತ್ತಿದೆ ISL ಟೂರ್ನಿ, 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಕ್ರೀಡಾ ಸಂಭ್ರಮ!.
ಶುಕ್ರವಾರ ಬೊಲಿಮ್ ನ JMC ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗುವುದರೊಂದಿಗೆ ದೇಶದಲ್ಲಿ ಎಂಟು ತಿಂಗಳ ನಂತರ ಪ್ರಮುಖ ಕ್ರೀಡಾ ಹಬ್ಬಕ್ಕೆ ಚಾಲನೆ ದೊಯಲಿದೆ. ಆದರೆ ಪ್ರೇಕ್ಷಕರಿಲ್ಲದೆ ನಡೆಯುವ ಈ ಲೀಗ್ ನಲ್ಲಿ ತಂಡಗಳಿಗೆ ಜೈವಿಕ ಭದ್ರತೆಯ ಮೂಲಕ ರಕ್ಷಣೆ ದೊರೆಯಲಿದೆ. ಇದರ ಹೊರತಾಗಿ ಈ ಋತುವಿನಲ್ಲಿ ಹೆಚ್ಚಿನ ಬದಲಾಣೆ ಇಲ್ಲ ಎಂದು ತಿಳಿಯುವಂತಿಲ್ಲ.
ಈ ಋತುವಿನಲ್ಲ ಆರಂಭ ಕಾಣುತ್ತಿರುವವರಿಗೆ ಇದು ಅತ್ಯಂತ ದೊಡ್ಡ ಐಎಸ್ ಎಲ್ ಎನಿಸಲಿದೆ. 2000-21ರ ಋತುವಿನಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ಸೇರುವ ಮೂಲಕ ತಂಡಗಳ ಸಂಖ್ಯೆ 11ಕ್ಕೆ ಏರಿದೆ. ಕಳೆದ ಋತುವಿನಲ್ಲಿ95 ಪಂದ್ಯಗಳಿದ್ದು ಈ ಬಾರಿ 115 ಪಂದ್ಯಗಳು ನಡೆಯಲಿವೆ.
ಈಸ್ಟ್ ಬೆಂಗಾಲ್ ತಂಡದ ಪ್ರವೇಶ ಮತ್ತು ಮೋಹನ್ ಬಾಗನ್ ತಂಡದೊಂದಿಗೆ ಎಟಿಕೆ ವಿಲೀನವಾಗಿರುವುದು ಐಎಸ್ ಎಲ್ ನಲ್ಲಿ ಮೊದಲ ಬಾರಿಗೆ ದೇಶದ ಎರಡು ಬದ್ಧ ಎದುರಾಳಿ ಕ್ಲಬ್ ಗಳು ಮುಖಾಮುಖಿಯಾದಂತಾಗಿದೆ. ನವೆಂಬರ್ 27ರಂದು ನಡೆಯುವ ಕೊಲ್ಕತಾ ಡರ್ಬಿಯ ಕುತೂಹಲವನ್ನು ವೀಕ್ಷಿಸಲು ಪ್ರೇಕ್ಷಕರು ಕುತೂಹಲಿಗಳಾಗಿದ್ದಾರೆ
"ವೇಳಾಪಟ್ಟಿ ಪ್ರಕಟವಾದ ನಂತರ ನಮಗೆ ಡರ್ಬಿಯ ಬಗ್ಗೆ ಹೇಳಿದರು ಮತ್ತು ಡರ್ಬಿ ಎಷ್ಟು ಬೃಹತ್ ಆಗಿರುತ್ತದೆ ಎಂಬುದರ ಬಘಗೆಯೂ ತಿಳಿಸಿದರು," ಎಂದು ಈಸ್ಟ್ ಬೆಂಗಾಲ್ ತಂಡದ ನೂತನ ಹಾಗೂ ನಾರ್ವಿಚ್ ಸಿಟಿ ಆಟಗಾರ ಆಂಟೊನಿ ಪಿಲ್ಕಿಂಗ್ಟನ್ ಹೇಳಿದ್ದು, "ಋತುವಿನ ಆರಂಭಕೆ ನಾನು ಉತ್ಸುಕನಾಗಿದ್ದೇನೆ, ಇದು ನಿಜವಾಗಿಯೂ ಅತ್ಯಂತ ರೋಚಕವಾಗಿರುತ್ತದೆ ಎಂಬ ನಂಬಿಕೆ ನನಗಿದೆ," ಎಂದು ಅವರು ಹೇಳಿದರು.
"ಟೆಲಿವಿಜನ್ ಪರದೆಯ ಮೇಲೆ ಫುಟ್ಬಾಲ್ ಸಂಭ್ರಮವನ್ನು ಸವಿಯಲು ಫುಟ್ಬಾಲ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ರೇಡಿಂಗ್ ನ ಮಾಜಿ ಸ್ಟ್ರೈಕರ್ ಆಡಂ ಲೀ ಫಾಂಡರ್ ಮತ್ತು ನ್ಯೂ ಕ್ಯಾಸ್ಟಲ್ ಯುನೈಟೆಡ್ ನ ಡಿಫೆಂಡರ್ ಸ್ಟೀವನ್ ಟೇಲರ್ ಅವರ ಭಾರತದ ಪ್ರವಾಸಕ್ಕೆ ಹೊಸ ಅಧ್ಯಾಯ ಕಾಣಲಿದೆ. ನಿರಿಜಸ್ ವಾಸ್ಕೀಸ್, ಸಂದೇಶ್ ಜಿಂಗಾನ್ ಅವರ ಆಟ ನೋಡಲು ಫುಟ್ಬಾಲ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಫಟೋರ್ಡಾದಲ್ಲಿರುವ ಜವಹರಲಾಲ್ ನೆಹರು ಕ್ರೀಡಾಂಗಣ, ಬಾಂಬೊಲಿಮ್ ನಲ್ಲಿರುವ ಜಿಎಂಸಿ ಕ್ರೀಡಾಂಗಣ, ವಾಸ್ಕೊದಲ್ಲಿರುವ ತಿಲಕ್ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.