ಅಜೇಯ ಬೆಂಗಳೂರಿಗೆ ಮೊದಲ ಸೋಲಿನ ಆಘಾತ!
ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಜೇಯ ಓಟ ಮುಂದುವರಿಸಿದ್ದ ಬೆಂಗಳೂರು ಎಫ್‌ಸಿಗೆ ಸೋಲಿನ ಆಘಾತ ಎದುರಾಗಿದೆ . ಈ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಡಿಸೆಂಬರ್ 21: ಡೇವಿಡ್ ವಿಲಿಯಮ್ಸ್ (33ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದ ಹಾಲಿ ಚಾಂಪಿಯನ್ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 36ನೇ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಜೆಮ್ಶೆಡ್‌ಪುರ ಎಫ್‌ಸಿಗೆ 1-0 ಗೆಲುವು
ಸಮಾನ ಆಂಕಗಳನ್ನು ಹೊಂದಿದ್ದರೂ ಗೋಲುಗಳ ಸರಾಸರಿಯಲ್ಲಿ ಮುಂಬೈ ಸಿಟಿ ಎಫ್ ಅಗ್ರ ಸ್ಥಾನದಲ್ಲಿ ಉಳಿಯಿತು.. ಇದುವರೆಗೂ ಸೋಲೇ ಕಾಣದ ಬೆಂಗಳೂರು ತಂಡ ಋತುವಿನಲ್ಲಿ ಮೊದಲ ಬಾರಿ ಸೋಲುಂಡಿತು. ಮೊದಲ ಸೋಲುಂಡ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಲ್ಲೇ ಉಳಿಯಿತು.
ಮೇಲುಗೈ ಸಾಧಿಸಿದ ಎಟಿಕೆಎಂಬಿ: 33ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಗಳಿಸಿದ ಗೋಲಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಸಿತು. ಆರಂಭದಿಂದಲೂ ಎಟಿಕೆಎಂಬಿ ಆಕ್ರಮಣಕಾರಿ ಆಟವನ್ನೇ ಮುಂದುವರಿಸಿತು. ಬೆಂಗಳೂರಿನ ಡಿಫೆನ್ಸ್ ವಿಭಾಗವನ್ನು ಉತ್ತಮ ರೀತಿಯಲ್ಲಿ ನಿಯಂತ್ರಸಿತು. 30 ನಿಮಿಷಗಳ ವರೆಗೂ ಇತ್ತಂಡಗಳಿಗೆ ಉತ್ತಮವಾದ ಅವಕಾಶವೇ ಸಿಗಲಿಲ್ಲ.
ಒಂದು ನಿಮಿಷಗಳ ವಿಶ್ರಾಂತಿಯ ನಂತರ ಆಸ್ಟ್ರೇಲಿಯಾ ಸಂಜಾತ ಡೇವಿಡ್ ವಿಲಿಯಮ್ಸ್ ತಮಗೆ ದೊರೆತ ಪಾಸನ್ನು ಬೆಂಗಳೂರಿನ ಗೋಲ್ ಬಾಕ್ಸ್ ಕಡೆಗೆ ಕೊಂಡೊಯದ್ದರು. ಬೆಂಗಳೂರಿನ ಗೋಲ್ ಕೀಪರ್ ಸಂದೂಗೆ ಯವುದೇ ರೀತಿಯಲ್ಲಿ ಚೆಂಡನ್ನು ತಡೆಯಲಾಗಲಿಲ್ಲ. ಹಾಲಿ ಚಾಂಪಿಯನ್ ಕೋಲ್ಕೊತಾ ತನ್ನ ಆಟದ ಶೈಲಿಗೆ ತಕ್ಕಂತೆ ಮೇಲುಗೈ ಸಾಧಸಿ ವಿಶ್ರಾಂತಿ ಪಡೆಯಿತು. ದ್ವಿತಿಯಾರ್ಧದಲ್ಲಿ ಬೆಂಗಳೂರಿನ ನಾಯಕ ಸುನಿಲ್ ಛೆಟ್ರಿ ಅವಕಾಶವನ್ನು ಯಾವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತರೆ ಎಂಬುದು ಕುತೂಹಲದ ನಿರೀಕ್ಷೆಯಾಯಿತು.