Asianet Suvarna News Asianet Suvarna News

ಚೆನ್ನೈಯಿನ್ FC ಗೋಲ್ ಮಳೆಗೆ ಕೊಚ್ಚಿಹೋದ ಕೇರಳ

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದ್ದ ಚೆನ್ನೈ ತಂಡ ಅದ್ಭುತ ಗೆಲುವಿನೊಂದಿಗೆ ಇದೀಗ ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ. ಕೇರಳ ವಿರುದ್ಧ ಗೋಲು ಮಳೆ ಸುರಿಸಿದ ಚೆನ್ನೈ ಭರ್ಜರಿ ಅಂತರದ ಗೆಲುವು ಸಾಧಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ. 

ISL 2020 chennaiyin fc beat kerala by 6-3 goals
Author
Bengaluru, First Published Feb 1, 2020, 9:59 PM IST

ಕೊಚ್ಚಿ(ಫೆ.01):  ರಫಾಯಲ್ ಕ್ರೆವೆಲ್ಲರೋ (39 ಮತ್ತು 45+ನೇ ನಿಮಿಷ), ನಿರಿಜುಸ್ ವಾಸ್ಕಿಸ್ (45 ಮತ್ತು 90ನೇ ನಿಮಿಷ), ಮತ್ತು ಲಾಲ್ರಿಯಾನಗಜುವಾಲಾ ಚಾಂಗ್ಟೆ (59 ಮತ್ತು 80ನೇ ನಿಮಿಷ) ತಲಾ ಎರಡು ಗೋಲುಗಳನ್ನು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನಲ್ಲಿ ಚೆನ್ನೈಯಿನ್ ಎಫ್ ಸಿ ತಂಡ 6-3 ಗೋಲುಗಳ ಅಂತರದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯ ಗಳಿಸಿ ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. 

ಇದನ್ನೂ ಓದಿ: ISL ಫುಟ್ಬಾಲ್: 2ನೇ ಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ.

ಕೇರಳ ಬ್ಲಾಸ್ಟರ್ಸ್ ಪರ ನಾಯಕ ಯಾರ್ಥಲೋಮ್ಯೋ ಒಗ್ಬಚೆ (48, 65 ಮತ್ತು 76ನೇ ನಿಮಿಷ) ಹ್ಯಾಟ್ರಿಕ್ ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ರಫಾಯಲ್ ಕ್ರೆವೆಲ್ಲರೋ (39 ಮತ್ತು 45+ನೇ ನಿಮಿಷ) ಮತ್ತು ನೆರಿಜುಸ್ ವಾಸ್ಕಿಸ್ (45ನೇ ನಿಮಿಷ) ಗಳಿಸಿದ ಮೂರು ಗೋಲುಗಳ ನೆರವಿನಿಂದ ಚೆನ್ನೈಯಿನ್ ಎಫ್ ಸಿ ತಂಡ ಕೇರಳ ಬ್ನಾಸ್ಟರ್ಸ್ ವಿರುದ್ಧ ಪ್ರಥಮಾರ್ಧದಲ್ಲಿ 3-0 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. ಆಟದಲ್ಲಿ ಸ್ಥಿರತೆ ಇಲ್ಲದಿದ್ದಾಗ, ಕೊನೆಯ ಕ್ಷಣದವರೆಗೂ ಹೋರಾಟ ನೀಡುವಲ್ಲಿ ವಿಫಲವಾದರೆ ಕೇರಳದ ಸ್ಥಿತಿ ಅನುಭವಿಸಬೇಕಾಗುತ್ತದೆ. 

ಇದನ್ನೂ ಓದಿ:ISL 2020: ಅಂತಿಮ ಕ್ಷಣದ ಗೋಲಿನಿಂದ ಅಗ್ರ ಸ್ಥಾನಕ್ಕೇರಿದ ATK

39ನೇ ನಿಮಿಷದವರೆಗೂ ಕೇರಳ ಉತ್ತಮ ರೀತಿಯಲ್ಲಿ ಪೈಪೂಟಿ ನೀಡಿದ್ದ ಕೇರಳ 39ನೇ ನಿಮಿಷದ ನಂತರ ನಿಯಂತ್ರಣ ಕಳೆದುಕೊಂಡಿತು. ರಫಾಯಲ್ ಕ್ರವೆಲ್ಲರೋ 39ನೇ ನಿಮಿಷದಲ್ಲಿ ಗಳಿಸಿದ ಗೋಲು ಚೆನ್ನೈಯಿನ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ತಲುಪಿದ್ದ ಚೆನ್ನೈಯಿನ್ ತಂಡ ಫಿನಿಕ್ಸ್ ನಂತೆ ಎದ್ದು ಈಗ ಅಂತಿಮ ನಾಲ್ಕರ ಹಂತವನ್ನು ತಲುಪುವಲ್ಲಿ ಉತ್ಸುಕವಾಗಿದೆ.

 45ನೇ ನಿಮಿಷದಲ್ಲಿ ನೆರಿಜುಸ್ ವಾಸ್ಕಿಸ್ ಗಳಿಸಿದ ಗೋಲು ಪ್ರವಾಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿತು. ಮಿಂಚಿನ ಆಟ ಪ್ರದರ್ಶಿಸಿದ ಚೆನ್ನೈಯಿನ್ ತಂಡಕ್ಕೆ ಪ್ರಥಮಾರ್ಧದ ಗಾಯಾಳು ಸಮಯದಲ್ಲಿ 45ನೇ ನಿಮಿಷದ ನಂತರ ರಫಾಯಲ್ ಕ್ರೆವೆಲ್ಲರೋ ತಂಡಕ್ಕೆ 3-0 ಮುನ್ನಡೆ ಕಲ್ಪಿಸಿದರು.

Follow Us:
Download App:
  • android
  • ios