ಕಂಠೀರವ ಕ್ರೀಡಾಂಗಣದಲ್ಲಿ ಹೈದ್ರಾಬಾದ್ ವಿರುದ್ಧ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ತಂಡ ಭರ್ಜರಿ ಜಯಭೇರಿ ಬಾರಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬೆಂಗಳೂರು(ಜ.31): ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ, 8ನೇ ಗೆಲುವು ದಾಖಲಿಸಿದೆ. 

ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ, ಹೈದ್ರಾಬಾದ್‌ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಜಯಿಸಿತು. ಬಿಎಫ್‌ಸಿ 28 ಅಂಕಗಳಿಂದ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಹೈದ್ರಾಬಾದ್‌ ಕೊನೆ ಸ್ಥಾನದಲ್ಲೇ ಉಳಿದಿದೆ. 

Scroll to load tweet…

ಪಂದ್ಯದ ಆರಂಭದಲ್ಲಿ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಸುನಿಲ್‌ ಚೆಟ್ರಿ ಪಡೆ, ಹೈದ್ರಾಬಾದ್‌ ಮೇಲೆ ಸವಾರಿ ಮಾಡಿತು. 7ನೇ ನಿಮಿಷದಲ್ಲಿ ನಿಶು ಕುಮಾರ್‌ ಆಕರ್ಷಕ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. ಆ ಬಳಿಕ ಹೈದ್ರಾಬಾದ್ ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿತಾದರೂ ಯಶಸ್ವಿಯಾಗಲಿಲ್ಲ.