ISL 2020 ಬಿಎಫ್‌ಸಿಗಿಂದು ಗೋವಾ ಚಾಲೆಂಜ್

2020ನೇ ಸಾಲಿನ ಇಂಡಿಯನ್ ಸೂಪರ್ ಲೀಗ್‌ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ತಂಡವು ಗೋವಾ ಎಫ್‌ಸಿ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ISL 2020 BFC takes on Goa FC at Jawaharlal Nehru Stadium Fatorda kvn

ಮಾರ್ಗೋ(ನ.22): ನಾಯಕ ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ, ಗೋವಾ ಎಫ್‌ಸಿ ವಿರುದ್ಧ ಇಲ್ಲಿ ಭಾನುವಾರ ನಡೆಯಲಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) 7ನೇ ಆವೃತ್ತಿಯಲ್ಲಿ ಸೆಣಸಲಿದೆ. ಚೆಟ್ರಿ ಪಡೆ ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ಉತ್ಸಾಹದಲ್ಲಿದೆ. 

ಫತ್ರೋಡಾದ ನೆಹರು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಗೋವಾ ಎಫ್‌ಸಿಯ ಎದುರಿನ ಈ ಹಿಂದಿನ 7ಬಾರಿಯ ಮುಖಾಮುಖಿಯಲ್ಲಿ ಬೆಂಗಳೂರು ಎಫ್‌ಸಿ ಮೇಲುಗೈ ಸಾಧಿಸಿದೆ. ಒಮ್ಮೆ ಮಾತ್ರ ಗೋವಾ ಜಯ ಪಡೆದಿದೆ. ಹೀಗಾಗಿ ನಿರೀಕ್ಷೆಯಂತೆ ಬಿಎಫ್‌ಸಿ ತಂಡ ಪ್ರಬಲವಾಗಿದೆ.

ಬಲಿಷ್ಠ ಚೆಟ್ರಿ ಪಡೆ:

ಕಳೆದ ಬಾರಿ ಬಿಎಫ್‌ಸಿ ಪರ ಆಡಿದ್ದ ಬಹುತೇಕ ಆಟಗಾರರು ತಂಡದಲ್ಲಿಯೇ ಉಳಿದಿದ್ದಾರೆ. ದಿಮಾಸ್‌ ಡೆಲ್ಗಾಡೋ, ಎರಿಕ್‌ ಪಾರ್ಥಲು ಬಿಎಫ್‌ಸಿ ತಂಡದ ಶಕ್ತಿ ಎನಿಸಿದ್ದಾರೆ. ನಾರ್ವೆಯ ಕ್ರಿಸ್ಟಿಯನ್‌ ಆಪ್ಸೆತ್‌, ಬ್ರೆಜಿಲ್‌ನ ವಿಂಗರ್‌ ಕ್ಲೆಟಾನ್‌ ಸಿಲ್ವಾ ಬಿಎಫ್‌ಸಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿರುವ ಬಿಎಫ್‌ಸಿ ಅತ್ಯುತ್ತಮ ತಂಡವಾಗಿದೆ. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು, ಬಿಎಫ್‌ಸಿ ತಂಡದ ಪ್ರಮುಖ ಆಧಾರಸ್ತಂಭ ಎನಿಸಿದ್ದಾರೆ. ಸ್ಟ್ರೈಕರ್‌ ಸುನಿಲ್‌ ಚೆಟ್ರಿ, ಉದಾಂತ ಸಿಂಗ್‌ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ISL 7: ಮುಂಬೈಗೆ ಶಾಕ್ ನೀಡಿದ ನಾರ್ಥ್ ಈಸ್ಟ್; ಹೊಸ ಉತ್ಸಾಹದಲ್ಲಿ ತಂಡ!

ಇನ್ನು ಗೋವಾ ಎಫ್‌ಸಿ ಕೂಡಾ ಉತ್ತಮ ಆಟಗಾರರನ್ನು ಹೊಂದಿದೆ. ಮುಖ್ಯ ಕೋಚ್‌ ಜುವಾನ್‌ ಫೆರಾಂಡೋ ಗರಡಿಯಲ್ಲಿ ಪಳಗಿರುವ ತಂಡ ಉತ್ತಮ ಅನುಭವ ಹೊಂದಿರುವ ವಿದೇಶಿ ಆಟಗಾರರು ಮತ್ತು ಭಾರತೀಯ ಆಟಗಾರರಿಂದ ಬಲಿಷ್ಠವಾಗಿದೆ. ಎಡು ಬೇಡಿಯಾ, ಸ್ಪೇನ್‌ನ ಇಗೊರ್‌ ಆಂಗ್ಲೋ ಅವರಂತಹ ಅನುಭವಿ ಆಟಗಾರರು, ಬಿಎಫ್‌ಸಿ ತಂಡದ ಪ್ರಾಬಲ್ಯವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ.

ಸ್ಥಳ: ಪತ್ರೋಡಾ ಕ್ರೀಡಾಂಗಣ 
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
 

Latest Videos
Follow Us:
Download App:
  • android
  • ios