ನಾರ್ಥ್ ಈಸ್ಟ್ ವಿರುದ್ಧ ಗೆಲುವಿಗಾಗಿ ATK ಮಾಸ್ಟರ್ ಪ್ಲಾನ್!
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎಟಿಕೆ ಹಾಗೂ ನಾರ್ಥ್ ಈಸ್ಟ್ ಮುಖಾಮುಖಿಯಾಗುತ್ತಿದೆ. ಗೆಲುವಿಲ್ಲದೆ ಕಂಗಾಲಾಗಿರುವ ನಾರ್ಥ್ ಈಸ್ಟ್ ಬಲಿಷ್ಠ ಎಟಿಕೆ ಮಣಿಸಲು ಸಜ್ಜಾಗಿದೆ. ಆದರೆ ಎಟಿಕೆ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.
ಕೋಲ್ಕೊತಾ(ಜ.26): ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿಸ್ಥಿರ ಪ್ರದರ್ಶನ ನೀಡುತ್ತಿರುವ ಎಟಿಕೆ ತಂಡ ನಾಳೆ ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ ಯಾವುದೇ ರೀತಿಯಲ್ಲಿ ಎಡವದಂತೆ ನೋಡಿಕೊಳ್ಳಬೇಕಾಗಿದೆ. ಸೋಮವಾರ ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಈಗಾಗಲೇ ಸಂಕಷ್ಟವನ್ನು ಎದುರಿಸುತ್ತಿರುವ ನಾರ್ಥ್ ಈಸ್ಟ್ ಸೆಟೆದು ನಿಲ್ಲುವ ಸಾಮರ್ಥ್ಯವನ್ನು ಹೊಂದಿರುವ ತಂಡವಾದ್ದರಿಂದ ಎಟಿಕೆ ಅತ್ಯಂತ ಎಚ್ಚರಿಕೆಯ ಆಟವಾಡಲು ಸಜ್ಜಾಗಿದೆ.
ಇದನ್ನೂ ಓದಿ: ಐಎಸ್‌ಎಲ್: ಮುಂಬೈ ಎಫ್‌ಸಿ ವಿರುದ್ಧ ಒಡಿಶಾಗೆ ಜಯ
ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಎಟಿಕೆ ತಂಡ ಎಫ್ ಸಿ ಗೋವಾ ತಂಡಕ್ಕಿಂತ ಮೂರು ಅಂಕ ಹಿಂದೆ ಇದ್ದು, ಬೆಂಗಳೂರು ಎಫ್ ಸಿ ಗಿಂತ ಒಂದು ಅಂಕ ಹಿಂದೆ ಬಿದ್ದಿದೆ. ಗೋವಾ ವಿರುದ್ಧ ಗೆಲ್ಲುವ ಮೂಲಕ ಎಟಿಕೆ ಆತ್ಮವಿಶ್ವಾಸವನ್ನು ಮರಳಿ ಪಡೆದರೆ, ನಾರ್ಥ್ ಈಸ್ಟ್ ಯುನೈಟೆಡ್ ಸತತ ಏಳು ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿದ್ದು, ಒಂಬತ್ತನೇ ಸ್ಥಾನದಲ್ಲಿದೆ.
ಮನೆಯಂಗಣದಲ್ಲಿ ಶಾಧ್ಯವಿರುವ 18 ಆಂಕಗಳಲ್ಲಿ 13 ಅಂಕಗಳನ್ನು ಗಳಿಸಿ, ಉತ್ತಮ ಪ್ರದರ್ಶನ ತೋರಿರುವ, ಎಟಿಕೆ, ತಾನು ಮನೆಯಂಗಣದಲ್ಲಿ ಫೇವರಿಟ್ ಎಂದೆನಿಸಿದ್ದು, ನಾರ್ಥ್ ಈಸ್ಟ್ ವಿರುದ್ಧ ಮೂರು ಅಂಕಗಳನ್ನು ಗಳಿಸುವ ಗುರಿ ಹೊಂದಿದೆ. ನಾರ್ಥ್ ಈಸ್ಟ್ ಯುನೈಟೆಡ್ ತಂಡ ಮನೆಯಂಗಣದ ಹೊರಗಡೆ ಗಳಿಸಿದ್ದು ಕೇವಲ ಮೂರು ಅಂಕ. ಆದ್ದರಿಂದ ತಂಡಕ್ಕೆ ಜಯದ ಹಾದಿ ಕಠಿಣ ಎನಿಸುವುದು ಸ್ಪಷ್ಟ.
ಇದನ್ನೂ ಓದಿ: ಐಎಸ್‌ಎಲ್: ಬಿಎಫ್‌ಸಿಗೆ 2-0 ಜಯ
ಎಟಿಕೆ ಪರ ಇದುವರೆಗೂ ಎಂಟು ಗೋಲುಗಳನ್ನು ಗಳಿಸಿರುವ ರಾಯ್ ಕೃಷ್ಣ ನಾರ್ಥ್ ಈಸ್ಟ್ ಪಾಲಿಗೆ ದೊಡ್ಡ ಆತಂಕ. ಅವರು ಉತ್ತಮ ಪ್ರದರ್ಶನ ತೋರಿದ ಪರಿಣಾಮ ಆ್ಯಂಟೋನಿಯೋ ಹಬ್ಬಾಸ್ ಪಡೆ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು. ಆದರೆ ಉತ್ತಮ ರೀತಿಯಲ್ಲಿ ಸಹಾಯ ಸಿಕ್ಕಿದರೂ ಕಳೆದ ನಾಲ್ಕು ಪಂದ್ಯಗಳಲ್ಲಿ ಆವರು ಗೋಲು ಗಳಿಸದಿರುವುದು ಗಮನಾರ್ಹ. ಈಗಾಗಲೇ ನಾರ್ಥ್ ಈಸ್ಟ್ ವಿರುದ್ಧ ಎರಡು ಗೋಲುಗಳನ್ನು ಗಳಿಸಿರುವ ರಾಯ್ ಕೃಷ್ಣ ಇದೀಗ ದಾಖಲೆ ಉತ್ತಮ ಪಡಿಸಿಕೊಳ್ಳಲು ರೆಡಿಯಾಗಿದ್ದಾರೆ.
‘’ನಮ್ಮ ಪಾಲಿಗೆ ಈ ಪಂದ್ಯ ನಿಜವಾಗಿಯೂ ಕ್ಲಿಷ್ಟವಾದ ಪಂದ್ಯವಾಗಿದೆ, ಏಕೆಂದರೆ ನಾರ್ಥ್ ಈಸ್ಟ್ ಉತ್ತಮ ಫುಟ್ಬಾಲ್ ಆಡಿದರೂ ಅವರು ಇರಬೇಕಾದ ಸ್ಥಾನದಲ್ಲಿ ಇಲ್ಲ. ಇಬ್ಬರು ಆಟಗಾರರಿಗೆ ಸಹಿ ಮಾಡಿರುವ ತೊಂಡ ಉತ್ತಮ ಫುಟ್ಬಾಲ್ ಆಡಿದೆ. ಇತರ ತಂಡಗಳಿಗಿಂತ ಎರಡು ಪಂದ್ಯ ಕಡಿಮೆ ಆಡಿದ್ದಾರೆ. ಅವರು ಉತ್ತಮ ಎದುರಾಳಿ ತಂಡ. ನಾವು ಕೂಡ ನಾಳೆಯ ಪಂದ್ಯಕ್ಕೆ ಉತ್ತಮ ರೀತಿಯಲ್ಲಿ ಸಿದ್ಧತೆ ನಡೆಸಬೇಕು,’’ ಎಂದು ಹಬ್ಬಾಸ್ ಹೇಳಿದ್ದಾರೆ.
ನಾರ್ಥ್ ಈಸ್ಟ್ ತಂಡದ ಬ್ಯಾಕ್ ಲೈನ್ ವಿಭಾಗವನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ನವೆಂಬರ್ ನಲ್ಲಿ ಜಯ ಗಳಿಸಿದ ನಂತರ ನಾರ್ಥ್ ಈಸ್ಟ್ ಮತ್ತೆ ಜಯದ ಹಾದಿ ಕಂಡಿರಲಿಲ್ಲ. ಮನೆಯಿಂದ ಹೊರಗಡೆ ಎರಡು ಪಂದ್ಯಗಳಲ್ಲಿ ತಂಡ ಡ್ರಾ ಸಾಧಿಸಿದೆ. ಜಯಕ್ಕಿಂತ ಹೊರತಾದ ಯಾವುದೇ ಫಲಿತಾಂಶವು ನಾರ್ಥ್ ಈಸ್ಟ್ ತಂಡವನ್ನು ಸಂಕಷ್ಟಕ್ಕೆ ಈಡುಮಾಡುವುದು ಸ್ಪಷ್ಟ. ರಾಬರ್ಟ್ ಜರ್ನಿ ಪಡೆ ಜಯ ಗಳಿಸಿದರೆ ಮಾತ್ರ ಪ್ಲೇ ಆಫ್ ಹಂತ ತಲಪುವ ಆಸೆಯನ್ನು ಜೀವಂತವಾಗಿರಿಸಕಿಕೊಳ್ಳಲಿದೆ.
‘’ಒಂದು ತಿಂಗಳಲ್ಲಿ ನಾವು ಏಳು ಪಂದ್ಯಗಳನ್ನು ಆಡಿದ್ದೇವೆ. ನಮಗೆ ಪರಿಸ್ಥಿತಿಯ ಅರಿವಿದೆ. ಪ್ರತಿಯೊಂದು ಹೋರಾಟದಲ್ಲೂ ನಿರೀಕ್ಷೆಯನ್ನು ಇಟ್ಟುಕೊಂಡೇ ಹೆಜ್ಜೆ ಹಾಕುತ್ತೇವೆ. ಪಂದ್ಯವನ್ನು ಗೆಲ್ಲಲು ನಾವು ಎಲ್ಲ ರೀತಿಯ ಪ್ರಯತ್ನ ನಡೆಸಲಿದ್ದೇವೆ, ಅದು ಯಾವ ರೀತಿಯಲ್ಲಿ ಎಂಬುದನ್ನು ಅಂಗಣದಲ್ಲಿ ನೋಡಿ,’’ ಎಂದು ಜೆರ್ನಿ ಹೇಳಿದರು.
ತಂಡಕ್ಕೆ ಹೊಸದಾಗಿ ಸೇರಿಕೊಂಡ ಆ್ಯಂಡಿ ಕೆಯೊಗ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ,. ಪ್ರೀಮಿಯರ್ ಲೀಗ್ ನಲ್ಲಿ ಆಡಿದ ಅನುಭವ ಹೊಂದಿರುವ ಕೆಯೊಗ್ ಇಲ್ಲಿ ಅಸಮೋಹ್ ಗ್ಯಾನ್ ಅವರ ಶೂ ಧರಿಸಬೇಕಾಗಿದೆ.