ಕೊಚ್ಚಿ(ನ. 8): ಕೇರಳ ಬ್ಲಾಸ್ಟರ್ಸ್ ಗೆದ್ದೇ ಗೆಲ್ಲುತ್ತೆ ಅನ್ನೋ ಆತ್ಮವಿಶ್ವಾಸದಲ್ಲಿದ್ದ ಪಂಜಪಡಾ ಆರ್ಮಿಗೆ ನಿರಾಸೆಯಾಗಿದೆ. ಒಡಿಶಾ ವಿರುದ್ಧ ನಡೆದ ಪಂದ್ಯದಲ್ಲಿ ಕೇರಳ ಇನ್ನಿಲ್ಲದ ಕಸರತ್ತು ಮಾಡಿದರೂ ತವರಿನಲ್ಲಿ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯ ಗೋಲಿಲ್ಲದೆ 0-0 ಅಂತರದಲ್ಲಿ ಡ್ರಾಗೊಂಡಿತು.

ಇದನ್ನೂ ಓದಿ: U 17 ಮಹಿಳಾ ಫುಟ್ಬಾ​ಲ್‌ ವಿಶ್ವ​ಕಪ್‌ ಲೋಗೋ ಬಿಡು​ಗ​ಡೆ

ಮೊದಲೇ ಗಾಯದ ಸಮಸ್ಯೆಯೇ ಸುದ್ದಿಯಾಗಿರುವ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೆ ಮೂವರು ಗಾಯದ ಪಟ್ಟಿಗೆ ಸೇರಿದರು. ಕೇರಳದ ನಾಯಕ ಜೈರೋ ರೊಡ್ರಿಗಸ್  ಆರಂಭದಲ್ಲೆ ಗಾಯಗೊಂಡು ಅಂಗಣದಿಂದ ಹೊರ ನಡೆದಿರುವುದು ಕೇರಳದ ಶಕ್ತಿಯ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಈ ಫಲಿತಾಂಶದ ನಂತರ ಒಡಿಶಾ ಎಫ್ ಸಿ ಐದನೇ ಸ್ಥಾನ ತಲುಪಿದರೆ ಕೇರಳ ಎಫ್ ಸಿ ಆರನೇ ಸ್ಥಾನ ತಲುಪಿತು. 

ಇದನ್ನೂ ಓದಿ: ಗೆಲುವಿಲ್ಲ, ಸೋಲಿಲ್ಲ; ಸತತ 3ನೇ ಪಂದ್ಯ ಡ್ರಾ ಮಾಡಿಕೊಂಡ ಬೆಂಗಳೂರು FC !

ಪ್ರಥಮಾರ್ಧವೂ  ಗೋಳಿಲ್ಲದೆ ಅಂತ್ಯಗೊಂಡಿತ್ತು. ಕೇರಳ ಬ್ಲಾಸ್ಟರ್ಸ್ ತಂಡದ ವಿಚಿತ್ರ ದಾಖಲೆ ಮುಂದುವರಿದಿರುವುದು ಗಮನಾರ್ಹ.  ಕಳೆದ ಬಾರಿ ಎಟಿಕೆ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಎಟಿಕೆ ಸತತ  14  ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿತ್ತು. ಆ ಕಹಿ ನೆನಪು ಕೇರಳ ತಂಡವನ್ನು ಕಾಡದಿರದು. ಶೆಟ್ಟೋರಿ ಪಡೆಗೆ ಈಗ ಹಳೆ ಕಹಿ ನೆನಪು ದೂರವಾಗಬೇಕಾದರೆ ಇಲ್ಲೊಂದು ಜಯ ಗಳಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ತಂಡವನ್ನು ಮತ್ತೆ ಗಾಯದ ಸಮಸ್ಯೆ ಕಾಡಿರುವುದು ಈ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. 

ಇನ್ನೊಂದೆಡೆ  ಒಡಿಶಾ ತಂಡ ಕೇರಳಕ್ಕೆ ವಿರುದ್ಧವಾದ ದಿಕ್ಕಿನಲ್ಲಿದೆ, ಅಂದರೆ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ,  ಮುಂಬೈ ಸಿಟಿ  ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ  4-2  ಗೋಳುಗಳಿಂದ ಗೆದ್ದು ಚೇತರಿಕೆ ಕಂಡಿತ್ತು. ಆ ಆತ್ಮವಿಶ್ವಾಸ ಇಲ್ಲಿ ಪ್ರಯೋಜನಕ್ಕೆ ಬರಲಿಲ್ಲ.