ಕೊಚ್ಚಿ(ನ.30):  ನೆಹರು ಕ್ರೀಡಾಂಗಣದಲ್ಲಿ  ಭಾನುವಾರ(ಡಿ.01) ಎಫ್ ಸಿ ಗೋವಾ ವಿರುದ್ಧ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ  ಕೇರಳ ಬ್ಲಾಸ್ಟರ್ಸ್ ಕೋಚ್ ಎಲ್ಕೋ ಶೆಟ್ಟೋರಿ  ಮೂರು ಅಂಕ ಗಳಿಸುವ ಗುರಿ ಹೊಂದಿದ್ದಾರೆ. 

ಅಂಗಣದಲ್ಲಿ ತಮ್ಮ ತಂಡದ ನಿರಂತರ ವೈಫಲ್ಯಕ್ಕೆ ಕೊನೆ ಹಾಡಬೇಕು ಎಂಬುದು ಡಚ್ ಕೋಚ್ ಗುರಿಯಾಗಿದೆ. ಹಳದಿ ಸೇನೆಯು ಕಳೆದ ನಾಲ್ಕು  ಪಂದ್ಯಗಳಲ್ಲಿ ಜಯ ಕಾಣಲು ವಿಫಲವಾಗಿದೆ. ಎಟಿಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಕೇರಳ ಜಯದ ಹಾದಿ ಕಂಡಿರಲಿಲ್ಲ. ಡಿಫೆನ್ಸ್ ವಿಭಾಗದಲ್ಲಿ ಅನೇಕ ಆಟಗಾರರು ಗಾಯಗೊಂಡಿದ್ದು ಶೆಟೋರಿ ಪಡೆಯ ಶಕ್ತಿ ಕುಂದಲು ಪ್ರಮುಖ ಕಾರಣವಾಗಿತ್ತು.

ಇದನ್ನೂ ಓದಿ: ಐಎಸ್‌ಎಲ್‌: ಬಿಎಫ್‌ಸಿ-ಹೈದ್ರಾಬಾದ್‌ ಪಂದ್ಯ ಡ್ರಾನಲ್ಲಿ ಅಂತ್ಯ

ಭಾರತಕ್ಕೆ ಬಂದಾಗಿನಿಂದ ಮಿಡ್ ಫೀಲ್ಡರ್  ಮಾರಿಯೋ ಆರ್ಕ್ಯೂಸ್ ಇನ್ನೂ ಒಂದು ಪಂದ್ಯವನ್ನೂ ಆಡಿರಲಿಲ್ಲ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತದ್ದು, ತರಬೇತಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಸಂದೇಶ್ ಜಿಂಗನ್  ಹಾಗೂ ಜೈರೋ ರೊಡ್ರಿಗಸ್ ಗಾಯಗೊಂಡಿದ್ದು, ಅವರ ಸ್ಥಾನದಲ್ಲೂ  ಬದಲಾವಣೆ ಆಗಿದೆ. ಈಗ ತಂಡದಲ್ಲಿ ಬದಲಾವಣೆಗೆ ಸಿಕ್ಕಿರುವುದು ಮೆಸಿಡೋನಿಯನ್ ಆಟಗಾರ ವಿಲಟ್ಕೋ ಡ್ರಾಬರೊಯ್ ಮಾತ್ರ. 

ಇದನ್ನೂ ಓದಿ: ISL 2019: ಒಡಿಶಾ ಹಾಗೂ ಎಟಿಕೆ ನಡುವಿನ ಪಂದ್ಯ ಡ್ರಾ!

ಹಿಂದಿನ ಐಎಸ್ ಎಲ್ ನಲ್ಲಿ ಮಿಂಚಿದ್ದ ಬಾರ್ತಲೋಮಿಯೋ ಓಗ್ಬ್ಯಾಚೆ ಇದುವರೆಗೂ ಗಳಿಸಿದ್ದು ಕೇವಲ ಒಂದು ಗೋಲು, ಮೊದಲ ಪಂದ್ಯದಲ್ಲಿ ಈ  ಗೋಲ್ ದಾಖಲಾದ ನಂತರ ಅವರು ಮತ್ತೆ ತಂಡಕ್ಕೆ ಕೊಡುಗೆ ನೀಡಿರಲಿಲ್ಲ. ಇದು ಕೇರಳ ಬ್ಲಾಸ್ಟರ್ಸ್ ನ ಹಿನ್ನಡೆಗೆ ಪ್ರಮುಖ ಕಾರಣವಾಯಿತು.  ಮತ್ತೊಬ್ಬ ಆಟಗಾರ ಸರ್ಗಿಯೊ ಸಿದೊಂಚಾ ಅವರ ಮೇಲೆ ತಂಡ ಹೆಚ್ಚು ಆಧರಿಸಿದ್ದು ಅಟ್ಯಾಕ್ ವಿಭಾಗದಲ್ಲಿ ಕೇರಳಕ್ಕೆ ಇವರ ನೈಜ ಆಟದ ಅಗತ್ಯ ಇದೆ. 

ಸೆರ್ಗಿಯೋ ಲೊಬೆರಾ ಅವರ ಪಡೆ,  ಇದುವರೆಗೂ ಕೇವಲ ಒಂದು ಕ್ಲೀನ್ ಶೀಟ್ ಸಾಧನೆ ಹೊರತುಪಡಿಸಿದರೆ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರುತ್ತಿಲ್ಲ. ಋತುವಿನ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ  ಗೆದ್ದ ನಂತರ ಗೋವಾ ಮತ್ತೆಲ್ಲೂ ಕ್ಲೀನ್ ಶೀಟ್ ಸಾಧನೆ ಮಾಡಿಲ್ಲ. ಗಾಯದ ಸಮಸ್ಯೆ ಹಾಗೂ ಅಮಾನತುಗಳ ನಡುವೆ ಫರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ತಂಡ ಆಡುತ್ತಿದೆ. 

ಈಗಿನ ತಂಡದ ಸ್ಥಿತಿ ಹಾಗೂ ಹಿಂದಿನ ಹೋರಾಟದ ಫಲಿತಾಂಶ ಇವುಗಳು ಲೊಬೆರಾ ಅವರಲ್ಲಿ ತೃಪ್ತಿಯನ್ನು ತಂದಿದೆ.  ಆಡಿರುವ ಹತ್ತು ಪಂದ್ಯಗಳಲ್ಲಿ ಗೋವಾ ಏಳು ಪಂದ್ಯಗಳನ್ನು ಗೆದ್ದು ಪ್ರಭುತ್ವ ಸಾಧಿಸಿತ್ತು.  ಎರಡು ತಂಡಗಳ ನಡುವೆ  ಒಟ್ಟು  25  ಗೋಲುಗಳು ದಾಖಲಾಗಿತ್ತು.  ಕಳೆದ ಋತುವಿನಲ್ಲಿ ಗೋವಾ ತಂಡ ಕೇರಳವನ್ನು ಮನೆಯಂಗಣದಲ್ಲಿ  3-0  ಮತ್ತು  3-1  ಅಂತರದಲ್ಲಿ ಗೆದ್ದು ಕೊಚ್ಚಿಯಲ್ಲಿ ಪ್ರಭುತ್ವ ಸಾಧಿಸಿತ್ತು. 

ಕೊಚ್ಚಿ ಅಂಗಣದಲ್ಲಿ ಪ್ರೇಕ್ಷಕರ ಬಗ್ಗೆ  ಲೊಬೆರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯಂಗಣದಲ್ಲಿ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೋ ಅದೇ ರೀತಿ ಕೇರಳದಲ್ಲಿ ಸಿಕ್ಕಿದೆ ಎನ್ನುತ್ತಾರೆ '' ಕೇರಳದಲ್ಲಿ  ಆಡುವುದೆಂದರೆ ಅದ್ಭುತ,  ಅಂತ ವಾತಾವರದಲ್ಲಿ  ಎಲ್ಲ ಅಂತಾರಾಷ್ಟ್ರೀಯ ಆಟಗಾರರು ಇಲ್ಲಿ ಆಡಲು ಇಷ್ಟಪಡುತ್ತಾರೆ.  ಇಂತಾ ವಾತಾವರದಲ್ಲಿ ನಾನು ಪ್ರತಿಯೊಂದು ಪಂದ್ಯಗಳನ್ನು ಆಡಬಯಸುತ್ತೇನೆ,'' ಎಂದು ಲೊಬೆರಾ ಹೇಳಿದರು.