Asianet Suvarna News Asianet Suvarna News

ISL 2019: ಒಡಿಶಾ ಹಾಗೂ ಎಟಿಕೆ ನಡುವಿನ ಪಂದ್ಯ ಡ್ರಾ!

ISL ಫುಟ್ಬಾಲ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಪಂದ್ಯ ಅಭಿಮಾನಿಗಳಿಗೆ ಮನರಂಜನೆ ನೀಡಿದೆ. ಈ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ, ರೋಚಕತೆಗೆ ಯಾವುದೇ ಕೊರತೆ ಇರಲಿಲ್ಲ. ಒಡಿಶಾ ಹಾಗೂ ಎಟಿಕೆ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Isl 2019 Odisha vs atk match ended with draw
Author
Bengaluru, First Published Nov 24, 2019, 9:57 PM IST

ಪುಣೆ(ನ.24): ಇಂಡಿಯನ್ ಸೂಪರ್ ಲೀಗ್ ನ 22 ನೇ ಪಂದ್ಯ ಗೋಲಿಲ್ಲದೆ ಡ್ರಾ ಗೊಂಡಿದೆ.  ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಒಡಿಶಾ ಎಫ್ ಸಿ ಹಾಗೂ ಎಟಿಕೆ ನಡುವಿನ ಪಂದ್ಯ ಗೋಲಿಲ್ಲದೇ ಸಮಬಲದಲ್ಲಿ ಕೊನೆಗೊಂಡಿತು. ಈ ಫಲಿತಾಂಶ ಉಭಯ ತಂಡದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ. ಎಟಿಕೆ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿತು. 

ಇದನ್ನೂ ಓದಿ: ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!

ಗೋಲು ದಾಖಲಾಗಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಉತ್ತಮ ಫುಟ್ಬಾಲ್ ಆಟಕ್ಕೆ ಇತ್ತಂಡಗಳು ಸಾಕ್ಷಿಯಾದವು. ಇತ್ತಂಡಗಳಿಗೂ ದ್ವಿತೀಯಾರ್ಧದಲ್ಲಿ ಸಮಬಲದ ಅವಕಾಶ ಸಿಕ್ಕಿತ್ತು. ರಾಯ್ ಕೃಷ್ಣ ಉತ್ತಮ ಅವಕಾಶವನ್ನು ಕೈ ಚೆಲ್ಲಿದರು. ಒಂದು ಉತ್ತಮ ಪಂದ್ಯ ಗೋಳಿಲ್ಲದೆ ಡ್ರಾದಲ್ಲಿ ಕೊನೆಗೊಂಡಿತು.

ಇದನ್ನೂ ಓದಿ: ISL 2019: ತವರಿನಲ್ಲಿ ಗೆಲವಿನ ಖಾತೆ ತೆರೆದ ಬೆಂಗಳೂರು FC

ಹಾಗೆ ನೋಡಿದರೆ ಒಡಿಶಾ ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿತ್ತು. ಒಂದೆರಡು ಅವಕಾಶ ಸಿಕ್ಕರೂ ಅದು ಗೋಲಾಗಿ ಪರಿವರ್ತನೆ ಆಗಲಿಲ್ಲ. ಮಾಜಿ ಚಾಂಪಿಯನ್ ಎಟಿಕೆಯ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಅರಿಂದಂ ಭಟ್ಟಾಚಾರ್ಯ ಹಾಗೂ ಅರ್ಶದೀಪ್ ಸಿಂಗ್ ಇತ್ತಂಡಗಳ ಸಮಬಲಕ್ಕೆ ಪ್ರಮುಖ ಕಾರಣರಾದರು.
 

Follow Us:
Download App:
  • android
  • ios