UEFA Champions League: 'ಫುಟ್ಬಾಲ್ ಸ್ಟೇಡಿಯಂಗೆ ಬರುವ ಎಲ್ಲರನ್ನೂ ಕೊಲ್ಲಿ' ISIS ಉಗ್ರರ ಬೆದರಿಕೆ

ಐಸಿಸ್ ಉಗ್ರಗಾಮಿ ಸಂಘಟನೆಯ ಬೆದರಿಕೆಯ ಹೊರತಾಗಿಯೂ ಇಂದು ನಡೆಯಲಿರುವ ಅರ್ಸನೆಲ್ ಹಾಗೂ ಬೆರ್ಯೆನ್ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ISIS issue terrorist attack threat on Arsenal vs Bayern Munich Champions League clash kvn

ಬೆಂಗಳೂರು: ಇಸ್ಮಾಮಿಕ್ ಸ್ಟೇಟ್‌ನ ಉಗ್ರಗಾಮಿ ಸಂಘಟನೆಯಾಗಿರುವ ಐಸಿಸ್ ಇದೀಗ ಯೂರೋಪಿಯನ್ ಫುಟ್ಬಾಲ್ ಟೂರ್ನಿಗೆ ಬಾಂಬ್ ಹಾಕುವ ಬೆದರಿಕೆಯೊಡ್ಡಿದೆ. UEFA ಚಾಂಪಿಯನ್ಸ್ ಲೀಗ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿರುವ ನಾಲ್ಕು ಸ್ಟೇಡಿಯಂಗಳ ಮೇಲೆ ಬಾಂಬ್ ಹಾಕುವುದಾಗಿ ಐಸಿಸಿ ಉಗ್ರಗಾಮಿ ಸಂಘಟನೆ ಬೆದರಿಕೆಯೊಡ್ಡಿದೆ ಎಂದು ವರದಿಯಾಗಿದೆ. 

ಐಸಿಸಿ ಮುಖವಾಣಿ ಎಂದೇ ಬಿಂಬಿತವಾಗಿರುವ ಅಲ್ ಅಝೀಂ ಫೌಂಡೇಶನ್ ಕೆಲವೊಂದು ಫೋಟೋಗ್ರಾಫ್ ಹಾಗೂ ಸುದ್ದಿಯನ್ನು ಪ್ರಕಟಿಸಿದ್ದು, ಯೂರೋ ಲೀಗ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿರುವ ಪಾರ್ಕ್ ಡೆಸ್ ಪ್ರಿನ್ಸಸ್, ದ ಸ್ಯಾಂಟಿಯಾಗೋ ಬೆರ್ನಾಬ್ಯೂ, ದಿ ಮೆಟ್ರೋಪಾಲಿಟಿಯನ್ ಹಾಗೂ ಎಮಿರೇಟ್ಸ್‌ ಸ್ಟೇಡಿಯಂ ಮೇಲೆ ಬಾಂಬ್ ಹಾಕುವುದಾಗಿ ಬೆದರಿಸಿದ್ದು ಮಾತ್ರವಲ್ಲದೇ, ಬಂದರನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಪ್ರೀತಿಯ ಮಡದಿಗಾಗಿ ದಿಢೀರ್ ನಿವೃತ್ತಿ ತಗೊಂಡ್ರಾ ಧೋನಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇನ್ನು ಡೇಲಿ ಮೇಲ್ ವರದಿಯ ಪ್ರಕಾರ, ಐಸಿಸ್ ಕೃಪಪೋಷಿತ ಮಾಧ್ಯಮ ಸಂಸ್ಥೆಯಾದ ಸಾರ್ ಅಲ್ ಖಲೀಫಾ ವರದಿಯ ಪ್ರಕಾರ, ಮಾರ್ಚ್‌ 30 ರಂದು ಮ್ಯೂನಿಚ್ vs ಬೋರ್‌ಸ್ಸಿಯ ನಡುವಿನ ಪಂದ್ಯದ ವೇಳೆ ಉಗ್ರಗಾಮಿ ದಾಳಿ ನಡೆಸುವ ಯೋಜನೆ ಹಾಕಿಕೊಂಡಿತ್ತು ಎಂದು ವರದಿಯಾಗಿದೆ.

ಐಸಿಸಿ ಉಗ್ರಗಾಮಿ ಸಂಘಟನೆ ಕೊನೆಯ ಬಾರಿಗೆ ಕಳೆದ ಮಾರ್ಚ್ 22ರಂದು ಮಾಸ್ಕೋದಲ್ಲಿ ಕ್ರೋಕಸ್‌ ಸಿಟಿ ಹಾಲ್‌ನಲ್ಲಿ ದಾಳಿ ನಡೆಸಿ ಹಲವು ನಾಗರೀಕರ ಬಲಿ ಪಡೆದಿತ್ತು. ಕ್ರೋಕಸ್‌ ಸಿಟಿ ಹಾಲ್‌ ರಷ್ಯಾದ ರಾಜಧಾನಿ ಮಾಸ್ಕೋದ ಅತಿದೊಡ್ಡ ಹಾಲ್‌ಗಳಲ್ಲಿ ಒಂದು ಎನಿಸಿಕೊಂಡಿದೆ.

ಸ್ಟೇಡಿಯಂನಲ್ಲಿ ಕಂಡ ಸುಂದರ ಹುಡುಗಿ ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡ್ಬಹುದು ಅಂತ ಕಾದಿದ್ರಂತೆ ಶ್ರೇಯಸ್ ಅಯ್ಯರ್..!

ಇನ್ನು ಐಸಿಸ್ ಉಗ್ರಗಾಮಿ ಸಂಘಟನೆಯ ಬೆದರಿಕೆಯ ಹೊರತಾಗಿಯೂ ಇಂದು ನಡೆಯಲಿರುವ ಅರ್ಸನೆಲ್ ಹಾಗೂ ಬೆರ್ಯೆನ್ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಐಸಿಸಿ ಉಗ್ರರು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಸ್ಪಾನೀಷ್ ಪೋಲಿಸರು UEFA ಚಾಂಪಿಯನ್‌ಶಿಪ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುವ ಸ್ಟೇಡಿಯಂ ಸುತ್ತಾಮುತ್ತ ಬಿಗಿ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಹಿತಕರ ಸಂಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.
 

Latest Videos
Follow Us:
Download App:
  • android
  • ios