ಬಿಎಫ್‌ಸಿ ಸದ್ಯ 9 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದು 7 ಅಂಕಗಳೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅತ್ತ ಮುಂಬೈ ಸಿಟಿ ಎಫ್‌ಸಿ 6 ಪಂದ್ಯಗಳಲ್ಲಿ 4ನೇ ಜಯದೊಂದಿಗೆ 14 ಅಂಕ ಸಂಪಾದಿಸಿದೆ.

ಬೆಂಗಳೂರು(ಡಿ.08): 10ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ 4ನೇ ಸೋಲು ಅನುಭವಿಸಿದೆ. ಶುಕ್ರವಾರ ನಗರದ ಕಂಠೀರವ ಸ್ಟೇಡಿಯನಲ್ಲಿ ನಡೆದ ಮುಂಬೈ ಸಿಟಿ ಎಫ್‌ಸಿ ವಿರುದ್ದದ ಪಂದ್ಯದಲ್ಲಿ 0-4 ಅಂಕಗಳಿಂದ ಪರಾಭವಗೊಂಡಿತು.

ಬಿಎಫ್‌ಸಿ ಸದ್ಯ 9 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದು 7 ಅಂಕಗಳೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅತ್ತ ಮುಂಬೈ ಸಿಟಿ ಎಫ್‌ಸಿ 6 ಪಂದ್ಯಗಳಲ್ಲಿ 4ನೇ ಜಯದೊಂದಿಗೆ 14 ಅಂಕ ಸಂಪಾದಿಸಿದೆ.

ಕ್ಲಬ್‌ ವಾಲಿಬಾಲ್‌: ಸೋತು ಹೊರಬಿದ್ದ ಅಹ್ಮದಾಬಾದ್‌!

ಬೆಂಗಳೂರು: ಚೊಚ್ಚಲ ಬಾರಿ ಭಾರತದಲ್ಲಿ ನಡೆದ ಕ್ಲಬ್‌ ವಿಶ್ವ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಏಕೈಕ ತಂಡ ಅಹಮದಾಬಾದ್ ಡಿಫೆಂಡರ್ಸ್‌ನ ಸೆಮಿಫೈನಲ್‌ ಕನಸು ಭಗ್ನಗೊಂಡಿದೆ. ಶುಕ್ರವಾರ ನಗರದ ಕೋರಮಂಗಲದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಟಲಿಯ ಸರ್‌ ಸಿಕೊಮಾ ಪೆರುಗಿಯಾ ವಿರುದ್ಧ ಅಭೂತಪೂರ್ವ ಆಟ ಪ್ರದರ್ಶಿಸಿದ ಹೊರತಾಗಿಯೂ 0-3(18-25, 19-25, 11-25) ಅಂತರದಲ್ಲಿ ಪರಾಭವಗೊಂಡಿತು. ಇದು ಅಹ್ಮದಾಬಾದ್‌ಗೆ ಸತತ 2ನೇ ಸೋಲು. ಸಿಕೋಮಾ ಸತತ 2ನೇ ಜಯದೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮೀಸ್‌ಗೇರಿತು.

ಗೌತಮ್ ಗಂಭೀರ್‌ ವಿರುದ್ಧ ಟೀಕೆ: ಶ್ರೀಶಾಂತ್‌ಗೆ ನೋಟಿಸ್‌!

ಇದಕ್ಕೂ ಮುನ್ನ ಶುಕ್ರವಾರದ ಮೊದಲ ಪಂದ್ಯದಲ್ಲಿ ಬ್ರೆಜಿಲ್‌ನ ಸಡಾ ಕ್ರೊಜೈರಿಯೊ ವಿರುದ್ಧ 3-0 ಅಂತರದಲ್ಲಿ ಗೆದ್ದ ಟರ್ಕಿಯ ಹಾಲ್ಕ್‌ಬ್ಯಾಂಕ್‌ ಸ್ಪೊರ್‌ ಕುಲುಬು ತಂಡ ‘ಬಿ’ ಗುಂಪಿನಿಂದ 2ನೇ ಸ್ಥಾನಿಯಾಗಿ ಸೆಮೀಸ್‌ ಪ್ರವೇಶಿಸಿತು.

ಜ.7ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಕ್ರಾಸ್‌ ಕಂಟ್ರಿ ಕೂಟ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯು 2024ರ ಜನವರಿ 7ರಂದು ಹುಬ್ಬಳ್ಳಿಯಲ್ಲಿ 58ನೇ ರಾಜ್ಯ ಮಟ್ಟದ ಕ್ರಾಸ್‌ ಕಂಟ್ರಿ ಚಾಂಪಿಯನ್‌ಶಿಪ್‌ ಆಯೋಜಿಸಲಿದೆ. ಅಂಡರ್‌-16, ಅಂಡರ್‌-18 ಹಾಗೈ ಅಂಡರ್‌-20 ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಇದು ಬಿಹಾರದಲ್ಲಿ ಜ.15ರಂದು ನಡೆಯಲಿರುವ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಚಾಂಪಿಯನ್‌ಶಿಪ್‌ಗೆ ಆಯ್ಕೆ ಟ್ರಯಲ್ಸ್‌ ಆಗಿರಲಿದೆ ಎಂದು ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆ ತಿಳಿಸಿದೆ.

ಆ್ಯಂಕರ್ ಮದ್ವೆಯಾದ ಜಸ್ಪ್ರೀತ್ ಬುಮ್ರಾ ಮಡದಿ ಮಿಸ್ ಇಂಡಿಯಾ ಫೈನಲಿಸ್ಟ್!

ಬ್ಯಾಡ್ಮಿಂಟನ್‌: ರಾಜ್ಯದ ಪಲ್ಲವಿ, ಮಂಜುಗೆ ಪದಕ

ಬ್ಯಾಂಕಾಕ್‌(ಥಾಯ್ಲೆಂಡ್‌): ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ವರ್ಲ್ಡ್‌ ಎಬಿಲಿಟಿ ಕ್ರೀಡಾಕೂಟದಲ್ಲಿ ಕರ್ನಾಟಕದ ಪಲ್ಲವಿ ಹಾಗೂ ಮಂಜುನಾಥ ಚಿಕ್ಕಯ್ಯ ಪದಕ ಸಾಧನೆ ಮಾಡಿದ್ದಾರೆ. ಮಹಿಳಾ ಡಬಲ್ಸ್‌ ಡಬ್ಲ್ಯುಎಚ್‌ ವಿಭಾಗದಲ್ಲಿ ಚಿನ್ನ, ಸಿಂಗಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪಲ್ಲವಿ ಕಂಚಿನ ಪದಕ ಪಡೆದರು. ಮಂಜುನಾಥ್‌ ಪುರುಷರ ಸಿಂಗಲ್ಸ್‌ ಹಾಗೂ ಡಬಲ್ಸ್‌ನ ಡಬ್ಲ್ಯುಎಚ್‌ ವಿಭಾಗದಲ್ಲಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.