ಕಳೆದ ವರ್ಷ ಮೇ, ಜೂನ್ ವೇಳೆ ಭಾರತ ಕೆಲ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇದಕ್ಕೂ ಮುನ್ನ ಸ್ಟಿಮಾಕ್‌ ಜ್ಯೋತಿಷಿಯೊಂದಿಗೆ ಚರ್ಚೆ ನಡೆಸಿ, ಅವರ ಅನತಿಯಂತೆ ಆಟಗಾರರನ್ನು ಆಯ್ಕೆ ಮಾಡುತ್ತಿದ್ದರು. ಸ್ಟಿಮಾಕ್‌ ಆಟಗಾರರ ಪಟ್ಟಿಯನ್ನು ಜ್ಯೋತಿಷಿಗೆ ಕಳುಹಿಸಿ, ಬಳಿಕ ಅವರ ಬಗ್ಗೆ ಜ್ಯೋತಿಷ್ಯ ಕೇಳುತ್ತಿದ್ದರು. ಅಲ್ಲದೆ ಆಟಗಾರರ ಗಾಯದ ಸುದ್ದಿ, ಪರ್ಯಾಯ ತಂತ್ರಗಳ ಕುರಿತು ಸ್ಟಿಮಾಕ್ ಜ್ಯೋತಿಷಿಯೊಂದಿಗೆ ಚರ್ಚಿಸಿದ್ದರು ಎಂದು ಹೇಳಲಾಗುತ್ತಿದೆ.

ನವದೆಹಲಿ(ಸೆ.13): ಜ್ಯೋತಿಷಿಯ ಸಲಹೆ ಕೇಳಿದ ಬಳಿಕ ಭಾರತ ಫುಟ್ಬಾಲ್‌ ತಂಡದ ಮುಖ್ಯ ಕೋಚ್‌ ಇಗೊರ್‌ ಸ್ಟಿಮಾಕ್‌ ತಂಡವನ್ನು ಆಯ್ಕೆ ಮಾಡುತ್ತಿದ್ದರು ಎಂದು ಪ್ರಮುಖ ರಾಷ್ಟ್ರೀಯ ಮಾಧ್ಯಮವೊಂದು ವರದಿಮಾಡಿದೆ.

ಕಳೆದ ವರ್ಷ ಮೇ, ಜೂನ್ ವೇಳೆ ಭಾರತ ಕೆಲ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇದಕ್ಕೂ ಮುನ್ನ ಸ್ಟಿಮಾಕ್‌ ಜ್ಯೋತಿಷಿಯೊಂದಿಗೆ ಚರ್ಚೆ ನಡೆಸಿ, ಅವರ ಅನತಿಯಂತೆ ಆಟಗಾರರನ್ನು ಆಯ್ಕೆ ಮಾಡುತ್ತಿದ್ದರು. ಸ್ಟಿಮಾಕ್‌ ಆಟಗಾರರ ಪಟ್ಟಿಯನ್ನು ಜ್ಯೋತಿಷಿಗೆ ಕಳುಹಿಸಿ, ಬಳಿಕ ಅವರ ಬಗ್ಗೆ ಜ್ಯೋತಿಷ್ಯ ಕೇಳುತ್ತಿದ್ದರು. ಅಲ್ಲದೆ ಆಟಗಾರರ ಗಾಯದ ಸುದ್ದಿ, ಪರ್ಯಾಯ ತಂತ್ರಗಳ ಕುರಿತು ಸ್ಟಿಮಾಕ್ ಜ್ಯೋತಿಷಿಯೊಂದಿಗೆ ಚರ್ಚಿಸಿದ್ದರು ಎಂದು ಹೇಳಲಾಗುತ್ತಿದೆ. ಭಾರತೀಯ ಫುಟ್ಬಾಲ್ ಫೆಡರೇಶನ್‌ ಮಾಜಿ ಕಾರ್ಯದರ್ಶಿ ಕುಶಾಲ್‌ ದಾಸ್‌ ಅವರೇ ಸ್ಟಿಮಾಕ್‌ಗೆ ಜ್ಯೋತಿಷಿಯನ್ನು ಪರಿಚಯಿಸಿದ್ದು, ಅವರೇ ಜ್ಯೋತಿಷಿಗೆ ಹಣ ಸಂದಾಯ ಮಾಡುತ್ತಿದ್ದರು ಎಂದು ವರದಿಯಲ್ಲಿ ತಿಳಿಸಿದೆ.

ಏಷ್ಯಾಡ್‌ಗೆ ಚೆಟ್ರಿ, ಝಿಂಗನ್‌, ಸಂಧು ಅಲಭ್ಯ!

ನವದೆಹಲಿ: ಮುಂಬರುವ ಮಹತ್ವದ ಏಷ್ಯನ್‌ ಗೇಮ್ಸ್‌ಗೆ ತಾರಾ ಫುಟ್ಬಾಲಿಗರಾದ ಸುನಿಲ್‌ ಚೆಟ್ರಿ, ಸಂದೇಶ್‌ ಝಿಂಗನ್, ಗೋಲ್‌ಕೀಪರ್‌ ಗುರುಪ್ರೀತ್‌ ಸಂಧು ಸೇರಿದಂತೆ ಪ್ರಮುಖರು ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ. ಏಷ್ಯಾಡ್‌ನಲ್ಲಿ ಫುಟ್ಬಾಲ್‌ ಪಂದ್ಯಗಳು ಸೆ.19ರಿಂದ ಅ.7ರ ವರೆಗೂ ನಡೆಯಲಿದೆ. ಆದರೆ ಇದೇ ವೇಳೆ ಅಂದರೆ ಸೆ.21ರಿಂದ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಪಂದ್ಯಗಳು ಆರಂಭಗೊಳ್ಳಲಿದೆ.

'ಶಿಖರ್‌ ಭಾಯ್‌, 5G ಇಂಟರ್ನೆಟ್‌ ಯೂಸ್‌ ಮಾಡಿ..' ಸೋಶಿಯಲ್‌ ಮೀಡಿಯಾದಲ್ಲಿ ಧವನ್‌ ಫುಲ್‌ ಟ್ರೋಲ್‌!

ಏಷ್ಯಾಡ್‌ ಪಂದ್ಯಗಳು ಅಂತಾರಾಷ್ಟ್ರೀಯ ಪಂದ್ಯ ಎಂದು ಪರಿಗಣಿಸದ ಕಾರಣ ಐಎಸ್‌ಎಲ್‌ ಕ್ಲಬ್‌ಗಳಿಗೆ ಆಟಗಾರನ್ನು ರಾಷ್ಟ್ರೀಯ ತಂಡಕ್ಕೆ ಬಿಡುಗಡೆ ಮಾಡದಿರಲು ಅವಕಾಶವಿದೆ. ಹೀಗಾಗಿ ಸದ್ಯ ಕ್ಲಬ್‌ಗಳು ಆಟಗಾರರನ್ನು ಏಷ್ಯಾಡ್‌ಗೆ ಕಳುಹಿಸಲು ನಿರಾಕರಿಸುತ್ತಿದೆ. ಹೀಗಾಗಿ ಪ್ರಮುಖರು ಗೈರಾಗುವ ಏಷ್ಯಾಡ್‌ಗೆ ಗೈರಾಗುವ ಸಾಧ್ಯತೆ ಹೆಚ್ಚಿದ್ದು, ಭಾರತ ತಂಡವನ್ನು ಹೊಸದಾಗಿ ಪ್ರಕಟಿಸುವ ನಿರೀಕ್ಷೆಯಿದೆ.

ಒಲಿಂಪಿಕ್ಸ್‌ ಹಾಕಿ ಅರ್ಹತಾ ಟೂರ್ನಿ ಪಾಕ್‌ನಿಂದ ಔಟ್‌

ಲಾಹೋರ್‌: ಪಾಕಿಸ್ತಾನದಲ್ಲಿ 2024ರ ಜನವರಿಯಲ್ಲಿ ನಿಗದಿಯಾಗಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ ಹಾಕಿ ಅರ್ಹತಾ ಟೂರ್ನಿ ಎತ್ತಂಗಡಿಯಾಗಿದೆ. ಮಂಗಳವಾರ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಟೂರ್ನಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಗೊಳಿಸಲು ನಿರ್ಧರಿಸಿತು. ಪಾಕಿಸ್ತಾನ ಹಾಕಿ ಫೆಡರೇಶನ್‌(ಪಿಎಚ್‌ಎಫ್‌)ನ ಚಟುವಟಿಕೆಗಳ ಮೇಲೆ ಅಲ್ಲಿನ ಸರ್ಕಾರದ ಹಸ್ತಕ್ಷೇಪ ಹಿನ್ನೆಲೆಯಲ್ಲಿ ಎಫ್‌ಐಎಚ್‌ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ಪಾಕ್‌ ಕ್ರೀಡಾ ಮಂಡಳಿ ಪಿಎಚ್‌ಎಫ್‌ಅನ್ನು ಅಮಾನತುಗೊಳಿಸಿತ್ತು. ಕಳೆದ ಜುಲೈನಲ್ಲಿ ಎಫ್‌ಐಎಚ್‌ ಅರ್ಹತಾ ಟೂರ್ನಿಯನ್ನು ಚೀನಾ, ಪಾಕ್‌ ಹಾಗೂ ಸ್ಪೇನ್‌ನಲ್ಲಿ ಆಯೋಜಿಸುವುದಾಗಿ ಘೋಷಿಸಿತ್ತು.

US Open 2023: 24ನೇ ಗ್ರ್ಯಾನ್‌ ಸ್ಲಾಂ ಗೆದ್ದ ಸರ್ಬಿಯಾದ ಟೆನಿಸ್ ದೊರೆ ನೋವಾಕ್ ಜೋಕೋವಿಚ್

ಏಷ್ಯನ್‌ ಮಹಿಳಾ ಹಾಕಿ: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ ಮೊದಲ ಪಂದ್ಯ

ರಾಂಚಿ: ರಾಂಚಿಯಲ್ಲಿ ನಡೆಯಲಿರುವ ಮಹಿಳೆಯರ ಏಷ್ಯನ್‌ ಹಾಕಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅ.27ರಂದು ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಥಾಯ್ಲೆಂಡ್ ವಿರುದ್ಧ ಸೆಣಸಾಡಲಿದೆ. ಗುರುವಾರ ಹಾಕಿ ಇಂಡಿಯಾ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿತು. ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ 2ನೇ ಪಂದ್ಯದಲ್ಲಿ ಅ.28ಕ್ಕೆ ಥಾಯ್ಲೆಂಡ್‌, 30ಕ್ಕೆ ಚೀನಾ, 31ಕ್ಕೆ ಜಪಾನ್‌ ಹಾಗೂ ಕೊನೆ ಪಂದ್ಯದಲ್ಲಿ ನ.2ರಂದು ಕೊರಿಯಾವನ್ನು ಎದುರಿಸಲಿದೆ. ಲೀಗ್‌ ಹಂತದಲ್ಲಿ ಅಗ್ರ 4 ಸ್ಥಾನ ಪಡೆವ ತಂಡಗಳು ಸೆಮಿಫೈನಲ್‌ಗೇರಲಿದ್ದು, ನ.5ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ಭಾರತ ಈ ಮೊದಲು 2016ರಲ್ಲಿ ಚಾಂಪಿಯನ್‌ ಆಗಿದ್ದು, 2013, 2018ರಲ್ಲಿ ರನ್ನರ್‌-ಅಪ್‌ ಆಗಿತ್ತು.