ಇಂಡಿಯನ್ ಸೂಪರ್ ಲೀಗ್ ಟೂರ್ನಿಯಿಂದ ಮರಳಿದ ಬೆಂಗಳೂರು ಎಫ್‌ಸಿ ತಂಡದ ನಾಯಕ ಸುನಿಲ್ ಚೆಟ್ರಿಗೆ ಕೊರೋನಾ ತಗುಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

ಬೆಂಗಳೂರು(ಮಾ.11): ಟೀಂ ಇಂಡಿಯಾ ಫುಟ್ಬಾಲ್ ನಾಯಕ ಸುನಿಲ್ ಚೆಟ್ರಿಗೆ ಕೊರೋನಾ ತಗುಲಿರುವುದು ದೃಢಪಟ್ಟಿದೆ. ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಮುನ್ನಡೆಸಿದ ಚೆಟ್ರಿ, ಇದೀಗ ಕೊರೋನಾದಿಂದ ವಿಶ್ರಾಂತಿಗೆ ಜಾರಿದ್ದಾರೆ.

ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

ISL ಫುಟ್ಬಾಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಎಫ್‍ಸಿ ಪ್ಲೇ ಆಫ್ ಹಂತ ಪ್ರವೇಶಿಸದೇ ನಿರ್ಗಮಿಸಿತ್ತು. ಲೀಗ್ ಹಂತ ಮುಗಿಸಿ ತವರಿಗೆ ವಾಪಾಸ್ಸಾದ ಚೆಟ್ರಿಗೆ ಕೊರೋನಾ ಗುಣಲಕ್ಷಣ ಕಾಣಿಸಿಕೊಂಡಿದೆ. ಇದೀಗ ಪರೀಕ್ಷೆಯಲ್ಲಿ ಕೊರೋನಾ ಪಾಸಿಟೀವ್ ರಿಪೋರ್ಟ್ ಬಂದಿದೆ.

Scroll to load tweet…

ಕೋಚ್‌ ಮಗಳು ಎಂದು ಗೊತ್ತಿಲ್ಲದೆ ಮದುವೆಯಾದ ಪುಟ್‌ಬಾಲ್‌ ನಾಯಕನ ಪ್ರೇಮಕಥೆ!.

ಈ ವಿಚಾರ ಹಂಚಿಕೊಳ್ಳಲು ಸಂತೋವಿಲ್ಲ. ನನಗೆ ಕೊರೋನಾ ತಗುಲಿದೆ. ಶೀಘ್ರದಲ್ಲೇ ವೈರಸ್‌ನಿಂದ ಚೇತರಿಸಿಕೊಂಡು ಮೈದಾನಕ್ಕಿಳಿಯುತ್ತೇನೆ. ಈ ಸಂದರ್ಭದಲ್ಲಿ ಎಲ್ಲರೂ ಕೋವಿಡ್ ಸುರಕ್ಷತೆ ಹಾಗೂ ಮುನ್ನಚ್ಚೆರಿಕೆ ವಹಿಸಬೇಕು ಎಂದು ಸುನಿಲ್ ಚೆಟ್ರಿ ಟ್ವೀಟ್ ಮಾಡಿದ್ದಾರೆ.