ಅರ್ಸೆನಲ್ ಫುಟ್ಬಾಲ್ ಕ್ಲಬ್ ಮೇಲೆ ಕಣ್ಣಿಟ್ಟ ಮುಕೇಶ್ ಅಂಬಾನಿ..!

* ರಿಲಯನ್ಸ್‌ ಇಂಡಸ್ಟ್ರೀಸ್ ಸಂಸ್ಥೆ ಮುಕೇಶ್ ಅಂಬಾನಿ ಕುಟುಂಬ 
* ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ, ಅರ್ಸೆನಲ್ ತಂಡದ ದೊಡ್ಡ ಅಭಿಮಾನಿ
* ಲಿವರ್‌ಪೂಲ್‌ ಫುಟ್ಬಾಲ್‌ ತಂಡ ಖರೀದಿಗೆ ಅಂಬಾನಿ ಮಾತುಕತೆ ವದಂತಿ

Indian businessman Mukesh Ambani likely bid for Arsenal says Reports kvn

ಮುಂಬೈ(ಡಿ.13): ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರೆನಿಸಿಕೊಂಡಿರುವ ರಿಲಯನ್ಸ್‌ ಇಂಡಸ್ಟ್ರೀಸ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿ , ಲಂಡನ್‌ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಆಗಿರುವ ಅರ್ಸೆನಲ್ ಫುಟ್ಬಾಲ್ ಕ್ಲಬ್ ಖರೀದಿಸಲು ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಈ ಮೊದಲು ಮುಕೇಶ್ ಅಂಬಾನಿ, ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಲಿವರ್‌ಪೂಲ್‌ ತಂಡವನ್ನು ಖರೀದಿಸುತ್ತಾರೆ ಎಂದು ಕೂಡಾ ವರದಿಯಾಗಿತ್ತು.

"ಅಂಬಾನಿಯವರ ಪುತ್ರ, 31 ವರ್ಷದ ಆಕಾಶ್ ಅಂಬಾನಿ, ಅರ್ಸೆನಲ್ ತಂಡದ ಅತಿದೊಡ್ಡ ಫ್ಯಾನ್ಸ್‌ಗಳಲ್ಲಿ ಒಬ್ಬರಾಗಿದ್ದಾರೆ. ಕೆಲ ಮೂಲಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಫುಟ್ಬಾಲ್‌ಗೆ ಕಾಲಿಡುವುದಾದರೇ ಅರ್ಸೆನಲ್ ತಂಡ ಮೂಲಕ ವಾಣಿಜ್ಯ ವ್ಯವಹಾರಗಳನ್ನು ವಿಸ್ತರಿಸುವ ಒಲವನ್ನು ಅಂಬಾನಿ ಕುಟುಂಬ ಹೊಂದಿದೆ" ಎಂದು ವರದಿಯಾಗಿದೆ.

ಭಾರತದ ಪ್ರಖ್ಯಾತ ಉದ್ಯಮಿಯಾಗಿರುವ ಮುಕೇಶ್ ಅಂಬಾನಿ, ಪೋರ್ಬ್ಸ್‌ ನಿಯತಕಾಲಿಕೆಯ ವರದಿಯ ಪ್ರಕಾರ ಅವರು ಜಗತ್ತಿನ 10ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮುಕೇಶ್ ಅಂಬಾನಿ 90.7 ಬಿಲಿಯನ್ ಡಾಲರ್ ಒಡೆಯರಾಗಿದ್ದಾರೆ. ಈಗಾಗಲೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲಿಕತ್ವ ಹೊಂದಿರುವ ಅಂಬಾನಿ ಕುಟುಂಬ ಇದೀಗ ಇಂಗ್ಲೆಂಡ್‌ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ ಮಾಲಿಕರೆನಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ ಎನ್ನಲಾಗುತ್ತಿದೆ.

ಅದಾನಿ, ಅಂಬಾನಿ, ಧಮಾನಿ ಟಾಪ್‌ 3 ಶ್ರೀಮಂತರು

ಫೋರ್ಬ್ಸ್ ನಿಯತಕಾಲಿಕೆ ಭಾರತದ ಟಾಪ್‌ 100 ಶ್ರೀಮಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅದಾನಿ ಸಮೂಹದ ಗೌತಮ್‌ ಅದಾನಿ 12 ಲಕ್ಷ ಕೋಟಿ ರು. ಅಸ್ತಿಯೊಂದಿಗೆ ಮೊದಲ ಸ್ಥಾನ, 7 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್‌ ಅಂಬಾನಿ 2ನೇ ಸ್ಥಾನ ಮತ್ತು ಡಿ ಮಾರ್ಚ್‌ ಮಾಲೀಕ ರಾಧಾಕೃಷ್ಣ ಧಮಾನಿ 2.2 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.

ಲಿವರ್‌ಪೂಲ್‌ ಫುಟ್ಬಾಲ್‌ ತಂಡ ಖರೀದಿಗೆ ಅಂಬಾನಿ ಮಾತುಕತೆ?

ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡ, ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಲೀಗ್‌ ಮಾಲೀಕತ್ವ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್‌ ಅಂಬಾನಿ,  ವಿಶ್ವದ ಅತ್ಯಂತ ಹಳೆಯ ಮತ್ತು ಖ್ಯಾತನಾಮ ಫುಟ್ಬಾಲ್‌ ತಂಡವಾದ ಲಿವರ್‌ಪೂಲ್‌ ಎಫ್‌ಸಿ ಖರೀದಿಗೆ ಮುಂದಾಗಿದ್ದಾರೆ ಎಂದು ವರದಿಯಾಗಿತ್ತು.

FIFA World Cup: ಇಂದು ಅರ್ಜೆಂಟೀನಾ vs ಕ್ರೊವೇಷಿಯಾ ಸೆಮೀಸ್ ಕದನ

ಫೆನ್‌ವೇ ಸ್ಪೋರ್ಟ್ಸ್ ಗ್ರೂಪ್‌ (ಎಫ್‌ಎಸ್‌ಜಿ) ಒಡೆತನದ ಲಿವರ್‌ಪೂಲ್‌ ಎಫ್‌ಸಿಯನ್ನು 4 ಬಿಲಿಯನ್‌ ಬ್ರಿಟಿಷ್‌ ಪೌಂಡ್‌ (38 ಸಾವಿರ ಕೋಟಿ ರು.)ಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲಿವರ್‌ಪೂಲ್‌ ಎಫ್‌ಸಿ ಖರೀದಿ ಬಗ್ಗೆ ಮುಕೇಶ್‌ ಅಂಬಾನಿ ಮಾತುಕತೆ ನಡೆಸಿದ್ದಾರೆ ಎಂದು ‘ದ ಮಿರರ್‌’ ವರದಿ ಮಾಡಿತ್ತು. ಈ ಒಪ್ಪಂದ ಕುದುರಿದರೆ ಜಗತ್ತಿನ ಪ್ರಮುಖ ಇಂಗ್ಲೀಷ್‌ ಫುಟ್‌ಬಾಲ್‌ ಕ್ಲಬ್‌ವೊಂದು ಭಾರತೀಯನ ತೆಕ್ಕೆಗೆ ಬರಲಿದೆ ಎಂದು ವರದಿಯಾಗಿತ್ತು.

Latest Videos
Follow Us:
Download App:
  • android
  • ios