ಭಾರತ ಹಾಗೂ ಒಮನ್‌ ನಡುವಿನ ಫುಟ್ಬಾಲ್‌ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಮಾ.26): ಕೋವಿಡ್‌ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಭಾರತ ಫುಟ್ಬಾಲ್‌ ತಂಡ, ಒಮಾನ್‌ ವಿರುದ್ಧ ಗುರುವಾರ ಇಲ್ಲಿ ನಡೆದ ಪಂದ್ಯವನ್ನು 1-1ರಲ್ಲಿ ಡ್ರಾ ಮಾಡಿಕೊಂಡಿತು. 

ಈ ವರ್ಷ ಜೂನ್‌ನಲ್ಲಿ ನಡೆಯಲಿರುವ 2023ರ ಏಷ್ಯನ್‌ ಕಪ್‌ನ ಅರ್ಹತಾ ಸುತ್ತಿನ ಪಂದ್ಯಕ್ಕೆ ಅಭ್ಯಾಸ ನಡೆಸುವ ಸಲುವಾಗಿ 2 ಸ್ನೇಹಾರ್ಥ ಪಂದ್ಯಗಳನ್ನು ಆಡಲು ದುಬೈಗೆ ತೆರಳಿರುವ ಭಾರತ ತಂಡ, ಮೊದಲ ಪಂದ್ಯದಲ್ಲಿ ಬಲಿಷ್ಠ ಒಮಾನ್‌ ವಿರುದ್ಧ ಉತ್ತಮ ಆಟವಾಡಿತು. 

Scroll to load tweet…

ATK ಮೋಹನ್ ಬಗಾನ್ ಮಣಿಸಿ ಚೊಚ್ಚಲ ISL ಚಾಂಪಿಯನ್ ಪಟ್ಟ ಗೆದ್ದ ಮುಂಬೈ ಸಿಟಿ!

ಪಂದ್ಯದ 43ನೇ ನಿಮಿಷದಲ್ಲಿ ಸ್ವಂತ ಗೋಲು ಬಾರಿಸಿದ ಚಿಂಗ್ಲೆನ್ಸಾನ ಸಿಂಗ್‌ ಒಮಾನ್‌ ಮುನ್ನಡೆ ಪಡೆಯಲು ಕಾರಣರಾದರು. ಆದರೆ 55ನೇ ನಿಮಿಷದಲ್ಲಿ ಮನ್ವೀರ್‌ ಸಿಂಗ್‌ ಗೋಲು ಬಾರಿಸಿ ಸಮಬಲ ಸಾಧಿಸಲು ನೆರವಾದರು. ಭಾರತದ ರಕ್ಷಣಾ ಪಡೆ ಅತ್ಯುತ್ತಮ ಪ್ರದರ್ಶನ ತೋರಿ, ಒಮಾನ್‌ ಸ್ಟ್ರೈಕರ್‌ಗಳು ಗೋಲು ಬಾರಿಸದಂತೆ ತಡೆಯುವಲ್ಲಿ ಯಶಸ್ವಿಯಾಯಿತು.