ಜತೆಗಾರ್ತಿಯ ಬರ್ತ್‌ಡೇಗೆ 80 ಲಕ್ಷ ರುಪಾಯಿ ಮೌಲ್ಯದ ವಾಚ್ ಗಿಫ್ಟ್ ಕೊಟ್ಟ ಕ್ರಿಸ್ಟಿಯಾನೋ ರೊನಾಲ್ಡೋ..!
ಕ್ರಿಸ್ಟಿಯಾನೋ ರೊನಾಲ್ಡೋ ಪ್ರೇಯಸಿ ಜಾರ್ಜಿನಾ ರೋಡ್ರಿಗ್ಸ್ ಕಳೆದ ಜನವರಿ 27ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ರೊನಾಲ್ಡೋ ನೀಡಿದ ವಾಚ್ ಬೆಲ್ಟ್ ಗುಲಾಬಿ ಬಣ್ಣದ್ದಾಗಿದ್ದು, ವಾಚ್‌ನ ಸುತ್ತಲು ವಜ್ರದ ಹರಳುಗಳನ್ನು ಪೋಣಿಸಲಾಗಿದೆ.
ಬೆಂಗಳೂರು(ಫೆ.02): ಪೋರ್ಚುಗೀಸ್ ಸೂಪರ್‌ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಗೆಳತಿ ಜಾರ್ಜಿನಾ ರೋಡ್ರಿಗ್ಸ್ ಹುಟ್ಟುಹಬ್ಬಕ್ಕೆ ಐಶಾರಾಮಿ ವಾಚ್ ಗಿಫ್ಟ್ ನೀಡಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ ಉಡುಗೊರೆಯಾಗಿ ನೀಡಿರುವ ಜೇಕೊಬ್ & ಕಂಪನಿಯ ಸುಮಾರು 83 ಲಕ್ಷ ರುಪಾಯಿ ಮೌಲ್ಯದ ವಾಚ್ ಅನ್ನು ಗೆಳತಿ ಜಾರ್ಜಿನಾ ರೋಡ್ರಿಗ್ಸ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೋ ಪ್ರೇಯಸಿ ಜಾರ್ಜಿನಾ ರೋಡ್ರಿಗ್ಸ್ ಕಳೆದ ಜನವರಿ 27ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ರೊನಾಲ್ಡೋ ನೀಡಿದ ವಾಚ್ ಬೆಲ್ಟ್ ಗುಲಾಬಿ ಬಣ್ಣದ್ದಾಗಿದ್ದು, ವಾಚ್‌ನ ಸುತ್ತಲು ವಜ್ರದ ಹರಳುಗಳನ್ನು ಪೋಣಿಸಲಾಗಿದೆ. ಈ ವಾಚ್‌ನ ಮೌಲ್ಯ ಸುಮಾರು ಒಂದು ಲಕ್ಷ ಡಾಲರ್‌ಗಳು. ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 83 ಲಕ್ಷ ರುಪಾಯಿಗೂ ಹೆಚ್ಚು.
Celebrating love in timeless style! Ronaldo gifts his girlfriend an 83 lakh watch on her birthday, because every moment with her is priceless.#ronaldo #georginarodriguez #football #trending pic.twitter.com/Qwdmys9toT
— The Filmy Charcha (@thefilmycharcha) February 2, 2024
Jacob and Co ಎನ್ನುವ ಆಭರಣ ಮತ್ತು ಕೈಗಡಿಯಾರದ ಕಂಪನಿಯನ್ನು ಡಿಸೈನರ್ ಜಾಕೋಬ್ ಅರ್ಬೊ ಎನ್ನುವವರು 1986ರಲ್ಲಿ ಸ್ಥಾಪಿಸಿದರು. ಈ ಕಂಪನಿಯೂ ಅಲ್-ನಸ್ರ್ ಐಕಾನ್ ಫುಟ್ಬಾಲಿಗ ರೊನಾಲ್ಡೋ ಜತೆ ಉತ್ತಮ ಸಹಯೋಗ ಹೊಂದಿದ್ದಾರೆ.
5 ಮಕ್ಕಳ ತಾಯಿ ಜಾರ್ಜಿನಾ ರೋಡ್ರಿಗ್ಸ್ ಆದ್ರೂ ಮದುವೆಯಾಗಿಲ್ಲ: ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಜಾರ್ಜಿನಾ ರೋಡ್ರಿಗ್ಸ್ 2016ರಿಂದಲೂ ಒಟ್ಟಿಗೆ ಸಹಜೀವನ ನಡೆಸುತ್ತಿದ್ದಾರೆ. ಇವರಿಬ್ಬರಿಗೆ 5 ಮಕ್ಕಳಿದ್ದಾರೆ. ಆದರೆ ರೊನಾಲ್ಡೋ ಹಾಗೂ ಜಾರ್ಜಿನಾ ರೋಡ್ರಿಗ್ಸ್ ಇದುವರೆಗೂ ಮದುವೆಯಾಗಿಲ್ಲ ಎನ್ನುವುದು ವಿಶೇಷ.
ವಿಶ್ವ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರೆನಿಸಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಕಳೆದ ವರ್ಷವಷ್ಟೇ ಏಷ್ಯಾ ಫುಟ್ಬಾಲ್‌ಗೆ ಕಾಲಿಟ್ಟಿದ್ದು, ಸೌದಿ ಅರೇಬಿಯಾದ ಅಲ್-ನಸ್ರ್ ಕ್ಲಬ್ ಜೊತೆ 2025ರ ವರೆಗೂ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರೊನಾಲ್ಡೋಗೆ ವಾರ್ಷಿಕ 200 ಮಿಲಿಯನ್ ಯುರೋ(ಅಂದಾಜು 1775 ಕೋಟಿ ರು.) ವೇತನ ದೊರೆಯಲಿದೆ. ಇದರೊಂದಿಗೆ ವಿಶ್ವದ ಅತಿ ದುಬಾರಿ ಫುಟ್ಬಾಲಿಗ ಎನ್ನುವ ದಾಖಲೆಯನ್ನು 37 ವರ್ಷದ ರೊನಾಲ್ಡೋ ಬರೆದಿದ್ದಾರೆ.