ಮಿಲಾನ್‌(ಡಿ.07): ಮೂರು ಫಿಫಾ ವಿಶ್ವಕಪ್‌ ವಿಜೇತ ಫುಟ್ಬಾಲ್‌ ದಂತಕತೆ ಪೀಲೆ ಕಡೆಯದಾಗಿ ಧರಿಸಿದ್ದ ಬ್ರೆಜಿಲ್‌ ಜೆರ್ಸಿ 30,000 ಯೂರೋ (23.72 ಲಕ್ಷ ರುಪಾಯಿ) ದುಬಾರಿ ಮೊತ್ತಕ್ಕೆ ಇಟಲಿಯಲ್ಲಿ ಮಾರಾಟವಾಗಿದೆ. 

ಫುಟ್ಬಾಲ್ ದಿಗ್ಗಜ ಪೀಲೆ ಆಸ್ಪತ್ರೆ ದಾಖಲು- ಆತಂಕದಲ್ಲಿ ಬ್ರೆಜಿಲ್!

ಜುಲೈ 1971ರಲ್ಲಿ ಬ್ರೆಜಿಲ್‌ ಪರ ರಿಯೋ ಡಿ ಜನೈರೋದಲ್ಲಿ ಯುಗೋಸ್ಲಾವಿಯಾ ವಿರುದ್ಧ ಕೊನೆಯ ಪಂದ್ಯ ಆಡಿದ್ದಾಗ ಪೀಲೆ ಹಳದಿ ಜೆರ್ಸಿಯನ್ನು ಧರಿಸಿದ್ದರು. ಗುರುವಾರ ಟ್ಯೂರಿನ್‌ನ ಬೊಲಾಫಿ ಆಕ್ಷನ್‌ ಹೌಸ್‌ನಲ್ಲಿ ಹರಾಜು ನಡೆದಿತ್ತು. 92 ಪಂದ್ಯಗಳಲ್ಲಿ ಬ್ರೆಜಿಲ್‌ ಪ್ರತಿನಿಧಿಸಿದ್ದ ಪೀಲೆ 77 ಗೋಲುಗಳನ್ನು ಹೊಡೆದಿದ್ದರು.

ಅರ್ಧಶತಕ ಸಿಡಿಸಿ ರೋಹಿತ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಇನ್ನು ಇಟಲಿಯ ಸೈಕ್ಲಿಸ್ಟ್ ಫಾಸ್ಟೋ ಕೊಪ್ಪಿ ಧರಿಸಿದ್ದ ಹಳದಿ ಜೆರ್ಸಿ 25,000 ಯೂರೋ ಡಾಲರ್’ಗೆ ಹರಾಜಾದರೆ, ಯುವೆಂಟಸ್ ತಂಡದ ಡಿಫೆಂಡರ್ ಲೂಸಿಯಾನೋ ಸ್ಪೈನೋಶಿ ಧರಿಸಿದ್ದ ನೀಲಿ ಜೆರ್ಸಿ 9,400 ಯೂರೋ ಡಾಲರ್’ಗೆ ಬಿಕರಿಯಾಯಿತು. ಅರ್ಜೀಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ 1989-90ರಲ್ಲಿ ನಾಪೋಲಿ ತಂಡದ ಪರ ಆಡುವಾಗ ಧರಿಸಿದ್ದ ಜೆರ್ಸಿ 7,500 ಡಾಲರ್’ಗೆ ಹರಾಜಾಯಿತು.