BYJU'S ಜಾಗತಿಕ ರಾಯಭಾರಿಯಾಗಿ ಲಿಯೋನೆಲ್ ಮೆಸ್ಸಿ ನೇಮಕ
ಬೈಜೂಸ್ ಜತೆ ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಒಪ್ಪಂದ
ಬೈಜೂಸ್ ಜಾಗತಿಕ ರಾಯಭಾರಿಯಾಗಿ ಮೆಸ್ಸಿ ನೇಮಕ
ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬೈಜೂಸ್ ಆ್ಯಪ್
ಬೆಂಗಳೂರು(ನ.04): ಭಾರತದ ಜನಪ್ರಿಯ ಶೈಕ್ಷಣಿಕ ಆ್ಯಪ್ ಬೈಜೂಸ್, ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರನ್ನು ತನ್ನ ಮೊದಲ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿದೆ. ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಮೆಸ್ಸಿ, ಬೈಜೂಸ್ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಸಮಾನ ಶಿಕ್ಷಣದ ಅವಕಾಶಗಳ ಕುರಿತಂತೆ ಫುಟ್ಬಾಲ್ ದಂತಕಥೆ ಪ್ರಚಾರ ಮಾಡಲಿದ್ದಾರೆ.
ನಾವು ಲಿಯೋನೆಲ್ ಮೆಸ್ಸಿಯವರೊಂದಿಗೆ ಸಹಭಾಗಿತ್ವವನ್ನು ಹೊಂದಿ, ಜಾಗತಿಕ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದು, ಒಂದು ಗೌರವದ ವಿಷಯ. ಅವರು ಬೇರುಮಟ್ಟದಿಂದ ಬೆಳೆದು ಈಗ ಜಗತ್ತಿನ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೇ ರೀತಿಯ ಅವಕಾಶವನ್ನು ಬೈಜೂಸ್ ಸಂಸ್ಥೆಯು ಶಿಕ್ಷಣ ಎಲ್ಲರಿಗಾಗಿ ಎನ್ನುವ ತತ್ವದೊಂದಿಗೆ ಸುಮಾರು 5.5 ಮಿಲಿಯನ್ ಮಕ್ಕಳಿಗೆ ಆಸರೆಯಾಗಿದೆ. ಅದೇ ರೀತಿ ಲಿಯೋನೆಲ್ ಮೆಸ್ಸಿ ಅವರಿಗಿಂತ ಮಾನವ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಮತ್ತೊಬ್ಬ ವ್ಯಕ್ತಿ ಇನ್ನೊಬ್ಬರಿರಲು ಸಾಧ್ಯವಿಲ್ಲ ಎಂದು ಬೈಜೂಸ್ ಸಹ ಸಂಸ್ಥಾಪಕಿ ದಿವ್ಯ ಗೋಕುಲ್‌ನಾಥ್ ಹೇಳಿದ್ದಾರೆ.
ಜಗತ್ತಿನಾದ್ಯಂತ ಸುಮಾರು 3.5 ಬಿಲಿಯನ್(350 ಕೋಟಿ) ಮಂದಿ ಫುಟ್ಬಾಲ್ ಅಭಿಮಾನಿಗಳಿದ್ದಾರೆ. ಇದೀಗ ಮೆಸ್ಸಿಯವರೊಂದಿಗೆ ಬೈಜೂಸ್ ಒಪ್ಪಂದ ಮಾಡಿಕೊಂಡಿರುವುದರಿಂದ, ಜಗತ್ತಿನಾದ್ಯಂತ ಬೈಜೂಸ್ ತನ್ನ ವ್ಯವಹಾರ ವಿಸ್ತರಿಸಲು ನೆರವಾಗಲಿದೆ. ಇದಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಲಿಯೋನೆಲ್ ಮೆಸ್ಸಿಯವರನ್ನು 450 ಮಿಲಿಯನ್ ಮಂದಿ(4.5 ಕೋಟಿ) ಫಾಲೋವರ್ಸ್ ಹೊಂದಿರುವುದು, ಬೈಜೂಸ್ ಪಾಲಿಗೆ ಪ್ಲಸ್ ಪಾಯಿಂಟ್ ಎನಿಸಲಿದೆ.
Indian Super League ಬಿಎಫ್‌ಸಿ-ಚೆನ್ನೈಯಿನ್ ರೋಚಕ ಡ್ರಾನಲ್ಲಿ ಅಂತ್ಯ
ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿಕೊಂಡಿರುವವರು ಸಾರ್ವಕಾಲಿನ ಶ್ರೇಷ್ಠ ಕಲಿಕೆದಾರಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಈ ಒಪ್ಪಂದದಿಂದಾಗಿ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರಿಗೆ ದೊಡ್ಡ ಕನಸನ್ನು ಕಾಣಲು ಹಾಗೂ ಉತ್ತಮವಾಗಿ ಕಲಿಯಲು ಪ್ರೇರೇಪಿಸಲಿದೆ ಎನ್ನುವುದರ ಬಗ್ಗೆ ನನಗೆ ಖಾತ್ರಿಯಿದೆ ಎಂದು ದಿವ್ಯ ಗೋಕುಲ್‌ನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಬೈಜೂಸ್ ಜತೆಗಿನ ಒಪ್ಪಂದದ ಕುರಿತಂತೆ ಮಾತನಾಡಿರುವ ಲಿಯೋನೆಲ್ ಮೆಸ್ಸಿ, ಉತ್ತಮ ಶಿಕ್ಷಣವು, ಜನರ ಜೀವನ ಮಟ್ಟವನ್ನು ಸುಧಾರಿಸಲಿದೆ. ಅದೇ ರೀತಿ ಬೈಜೂಸ್ ಜಗತ್ತಿನಾದ್ಯಂತ ಇರುವ ಲಕ್ಷಾಂತರ ವಿದ್ಯಾರ್ಥಿಗಳ ವೃತ್ತಿಬದುಕನ್ನು ರೂಪಿಸಿದೆ. ಇದೀಗ ಯುವ ಕಲಿಕೆದಾರರಿಗೆ ಬೈಜೂಸ್ ಪ್ರೇರಕ ಶಕ್ತಿಯಾಗುವ ವಿಶ್ವಾಸವಿದೆ ಎಂದು ಅರ್ಜಿಂಟೀನಾ ನಾಯಕ ಮೆಸ್ಸಿ ಹೇಳಿದ್ದಾರೆ.
ಇದಕ್ಕೂ ಮೊದಲ ಇದೇ ವರ್ಷ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಬೈಜೂಸ್ ಅಧಿಕೃತ ಪ್ರಾಯೋಜಕತ್ವವನ್ನು ಪಡೆದಿದೆ. ಇದೀಗ ಲಿಯೋನೆಲ್ ಮೆಸ್ಸಿ ಜತೆಗೆ ಒಪ್ಪಂದ ಮಾಡಿಕೊಂಡಿರುವುದು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.