ತಮ್ಮ ಬೋಲ್ಡ್‌ ಹಾಗೂ ಫ್ಯಾಶನ್‌ಗಳಿಗೆ ಇಂಗ್ಲೆಂಡ್‌ ಫುಟ್‌ಬಾಲ್‌ ತಂಡದ ಆಟಗಾರರ ಪತ್ನಿಯರು ಹಾಗೂ ಗರ್ಲ್‌ಫ್ರೆಂಡ್‌ (ವ್ಯಾಗ್ಸ್‌-ವೈವ್ಸ್‌ ಆಂಡ್‌ ಗರ್ಲ್‌ಫ್ರೆಂಡ್ಸ್‌) ಹೆಸರುವಾಸಿ. ಆದರೆ, ಕತಾರ್‌ಗೆ ತೆರಳಿರುವ ಅವರಿಗೆ ನಿಮ್ಮ ಬಟ್ಟೆಗಳು ಸಂಪ್ರದಾಯಬದ್ಧವಾಗಿರಬೇಕು ಎಂದು ಸಲಹೆ ನೀಡಲಾಗಿದೆ. 

ದೋಹಾ (ನ.21): ಜಗತ್ತಿನ ಅತ್ಯಂತ ಪ್ರಸಿದ್ಧ ಕ್ರೀಡೋತ್ಸವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಮುಸ್ಲಿಂ ಸಂಪ್ರದಾಯವಾದಿ ದೇಶ ಕತಾರ್‌ನಲ್ಲಿ ಚಾಲನೆ ಸಿಕ್ಕಿದೆ. 2020ರ ಯುರೋಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲಿಸ್ಟ್‌ ತಂಡ ಇಂಗ್ಲೆಂಡ್‌ ಸೋಮವಾರ ತನ್ನ ಮೊದಲ ಪಂದ್ಯದಲ್ಲಿ ಇರಾನ್‌ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್‌ ತಂಡ ಫುಟ್‌ಬಾಲ್‌ನಲ್ಲಿ ಎಷ್ಟು ಹೆಸರುವಾಸಿಯೋ, ಇಂಗ್ಲೆಂಡ್‌ ತಂಡದ ಆಟಗಾರರ [ತ್ನಿಯರು ಹಾಗೂ ಗರ್ಲ್‌ಫ್ರೆಂಡ್‌ಗಳು ಅಷ್ಟೇ ಹೆಸರುವಾಸಿ. ಒಮ್ಮೆಮ್ಮೆ ಇಂಗ್ಲೆಂಡ್‌ ತಂಡದ ಪ್ಲೇಯರ್‌ಗಳನ್ನು ಅವರ ಪತ್ನಿಯರ ಮೂಲಕವೇ ಗುರುತಿಸಲಾಗುತ್ತದೆ. ತಮ್ಮ ಫ್ಯಾಶನ್‌ ಹಾಗೂ ಬೋಲ್ಡ್‌ ಟ್ರೆಂಡ್‌ಗಳಿಗೆ ಇಂಗ್ಲೆಂಡ್‌ ಟೀಮ್‌ನ ವ್ಯಾಗ್ಸ್ ಹೆಸರುವಾಸಿಯಾಗಿದ್ದಾರೆ. ಇಂಗ್ಲೆಂಡ್‌ ತಂಡ ತನ್ನ ಮೊದಲ ಪಂದ್ಯ ಆಡುವ ವೇಳೆಯಲ್ಲಿ ತಂಡದ ಬಹುತೇಕ ಎಲ್ಲಾ ಆಟಗಾರರ ಪತ್ನಿ ಹಾಗೂ ಗರ್ಲ್‌ಫ್ರೆಂಡ್‌ಗಳು ದೋಹಾಗೆ ಆಗಮಿಸಿದ್ದಾರೆ. ದೋಹಾದ ವಿಲಾಸಿ ಕ್ರೂಸ್‌ ಶಿಪ್‌ನಲ್ಲಿ ಇವರೆಲ್ಲರೂ ತಂಗಲಿದ್ದಾರೆ. ಇದೆಲ್ಲದರ ನಡುವೆ ಪಂದ್ಯ ನೋಡಲು ಮೈದಾನಕ್ಕೆ ಆಗಮಿಸುವ ವೇಳೆ, ವ್ಯಾಗ್ಸ್‌ಗಳಿಗೆ ಅಲ್ಲಿನ ಫುಟ್‌ಬಾಲ್‌ ಸಂಸ್ಥೆ ಸ್ಪಷ್ಟ ಸೂಚನೆಯೊಂದನ್ನು ರವಾನೆ ಮಾಡಿದೆ.

ತಮ್ಮ ಬೋಲ್ಡ್‌, ಗ್ಲಾಮ್‌ ಔಟ್‌ಫಿಟ್‌ಗಳು ಹಾಗೂ ಅಚ್ಚರಿ ಬೀಳಿಸುವಂಥ ಫ್ಯಾಶನ್‌ ಚಾಯ್ಸ್‌ಗೆ ಈ ವ್ಯಾಗ್ಸ್‌ಗಳು ಹೆಸರುವಾದಿ. ಆದರೆ, ಕತಾರ್‌ ದೇಶ ಹಾಗಲ್ಲ. ಕಟ್ಟುನಿಟ್ಟಿನಿ ಇಸ್ಲಾಮಿಕ್‌ ರಾಷ್ಟ್ರ. ಕತಾರ್‌ನಲ್ಲಿ ಸಾರ್ವಜನಿಕವಾಗಿ ತಿರುಗಾಡುವಾಗ, ಗ್ಲಾಮರಸ್‌ ಅಲ್ಲದ, ಮೈಪೂರ್ತಿ ಮುಚ್ಚಿಕೊಳ್ಳುವಂಥ ಬಟ್ಟೆ ಧರಿಸಿ ಎನ್ನುವ ಸೂಚನೆ ನೀಡಿದೆ. ಲೋ ಕಟ್‌ ಟಾಪ್‌ಗಳು, ಚಿಕ್ಕ ಚಿಕ್ಕ ಸ್ಕರ್ಟ್‌ಗಳು, ಬಿಕಿನಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಹಾಕಬೇಡಿ ಎಂದು ಸಲಹೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆದಷ್ಟು ಉದ್ದನೆಯ ಡ್ರೆಸ್‌ಗಳನ್ನು ಧರಿಸಬೇಕು. ನಿಮ್ಮ ಕೈಗಳು ಪೂರ್ತಿಯಾಗಿ ಮುಚ್ಚಿರಬೇಕು, ಉದ್ದನೆಯ ಪ್ಯಾಂಟ್‌ಗಳು, ಒಳಉಡುಪುಗಳು ಕಾಣದೇ ಇರುವ ರೀತಿಯ ಬಟ್ಟೆಗಳನ್ನು ಧರಿಸಿ ಎಂದು ಹೇಳಿದೆ.

ವರದಿಗಳ ಪ್ರಕಾರ, ಇಂಗ್ಲೆಂಡ್‌ ತಂಡದ ಮೂವರು ಪ್ರಖ್ಯಾತ ವ್ಯಾಗ್ಸ್‌ಗಳು 31 ವರ್ಷದ ಸ್ಟೈಲಿಸ್ಟ್‌ ಕೊನ್ನಿ ಕೋನ್ಸ್‌ ಅವರನ್ನು ತಮ್ಮೊಂದಿಗೆ ದೋಹಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಮ್ಯಾಂಚೆಸ್ಟರ್‌ನ ಪ್ರಸಿದ್ಧ ಈ ಡಿಸೈನರ್‌, ದೋಹಾದಲ್ಲಿ ಅಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಇವರ ಡ್ರೆಸ್‌ಗಳನ್ನು ವಿನ್ಯಾಸ ಮಾಡಲಿದ್ದಾರೆ. ಕತಾರ್‌ನ ನೀತಿ ನಿಯಮಗಳು, ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ಬಟ್ಟೆಗಳನ್ನು ವಿನ್ಯಾಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಇಂಗ್ಲಿಷ್ ಫುಟ್‌ಬಾಲ್ ಆಟಗಾರ ಲ್ಯೂಕ್ ಶಾ ಅವರ ಪತ್ನಿ ಅನೌಸ್ಕಾ ಸ್ಯಾಂಟೋಸ್, ಜಾನ್ ಸ್ಟೋನ್ಸ್ ಅವರ ಪತ್ನಿ ಲಿವ್ ನೈಲರ್ ಮತ್ತು ಮಾರ್ಕಸ್ ರಾಶ್‌ಫೋರ್ಡ್ ಅವರ ನಿಶ್ಚಿತ ವಧು ಲೂಸಿಯಾ ಲೋಯಿ ಅವರು ಸ್ಟೈಲಿಸ್ಟ್‌ನಿಂದ ಸಹಾಯವನ್ನು ಕೋರಿದ್ದಾರೆ ಎಂದು ಇಂಗ್ಲೆಂಡ್‌ನ ಪತ್ರಿಕೆ ಡೇಲಿ ಮೇಲ್‌ ವರದಿ ಮಾಡಿದೆ.

ಫಿಫಾ ವಿಶ್ವಕಪ್‌ನಲ್ಲಿ 'ಗೇ' ಸಂಬಂಧಕ್ಕೆ ಉಘೇ, ಕತಾರ್‌ಗೆ ಆರಂಭವಾಯ್ತು ದಗೆ!

ಬಿಗಿಯಾದ ಸ್ಕಿಂಪಿ ಟಾಪ್‌ಗಳು, ಲೋ-ಕಟ್ ಟಾಪ್‌ಗಳನ್ನು ನಿಷೇಧಿಸಲಾಗಿದೆ, ವ್ಯಾಗ್ಸ್‌ಗಳು ಸ್ಕಾರ್ಫ್ ಅನ್ನು ಪರಿಗಣಿಸಬೇಕು. ಗುಕ್ಕಿ ಮತ್ತು ಹರ್ಮ್ಸ್ ಕಂಪನಿಗಳೇ ಸ್ಕಾರ್ಫ್‌ಅನ್ನು ಧರಿಸದರೂ ಅಭ್ಯಂತರವಿಲ್ಲ. ತಮ್ಮ ತಲೆ ಹಾಗೂ ಕುತ್ತಿಗೆಯ ಸುತ್ತ ಇವವುಗಳನ್ನು ಧರಿಸಬೇಕು ಎಂದು ಹೇಳಲಾಗಿದ್ದು, ಇದರ ಮೊತ್ತವನ್ನು ಬಹಿರಂಗಪಡಿಸದೇ ಇರುವಂತೆ ಸೂಚಿಸಲಾಗಿದೆ' ಎಂದು ಪತ್ರಿಕೆ ಬರೆದಿದೆ. ಅದರೊಂದಿಗೆ ಇಂಗ್ಲೆಂಡ್‌ ಆಟಗಾರರ ವ್ಯಾಗ್ಸ್‌ಗಳು ವಿವಾದಕ್ಕೀಡಾಗುವ ಸ್ಲೋಗನ್‌ಗಳು ಇರುವ ಬಟ್ಟೆಗಳನ್ನು ಧರಿಸಬೇಡಿ ಎಂದೂ ಹೇಳಲಾಗಿದೆ.

ಜಗತ್ತಿನ ಶೇ.10ರಷ್ಟು ಜನಸಂಖ್ಯೆ ಈಗ ಕ್ರಿಶ್ಚಿಯಾನೋ ರೊನಾಲ್ಡೋ ಫಾಲೋವರ್ಸ್‌!

ಇಂಗ್ಲೆಂಡ್‌ ತಂಡದ ವ್ಯಾಗ್ಸ್‌ಗಳು ಬ್ರಿಟಿಷ್‌ ಏರ್‌ವೇಸ್‌ನ ಚಾರ್ಟೆಡ್‌ ಫ್ಲೈಟ್‌ ಮೂಲಕ ದೋಹಾಕ್ಕೆ ತಲುಪಿದ್ದು, ಸಾಕಷ್ಟು ಲಗೇಜ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ದೋಹಾದ ಸಮುದ್ರದಲ್ಲಿ ನಿಂತಿರುವ ಎಂಎಸ್‌ಸಿ ವರ್ಲ್ಡ್‌ ಯುರೋಪಾ ಎನ್ನುವ ವಿಲಾಸಿ ಕ್ರೂಸ್‌ನಲ್ಲಿ ಇವರು ತಂಗಲಿದ್ದು, ಸಂಪೂರ್ಣ ಐಷಾರಾಮಿ ವ್ಯವಸ್ಥೆಗಳು ಈ ಕ್ರೂಸ್‌ ಶಿಪ್‌ನಲ್ಲಿದೆ.