FIFA World Cup 8ರ ಸುತ್ತಿಗೆ ಪೋರ್ಚುಗಲ್‌ ಲಗ್ಗೆ, ಸ್ವಿಟ್ಜರ್‌ಲೆಂಡ್‌ ಎದುರು ಭರ್ಜರಿ ಜಯಭೇರಿ

ಫಿಫಿ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಪೋರ್ಚುಗಲ್ ಪ್ರವೇಶ
ಸ್ವಿಟ್ಜರ್‌ಲೆಂಡ್ ಎದುರು ಭರ್ಜರಿ ಜಯಭೇರಿ
2006ರ ಬಳಿಕ ಮೊದಲ ಬಾರಿಗೆ ಪೋರ್ಚುಗಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶ

FIFA World Cup 2022 Portugal crush Switzerland and storm into quarter finals kvn

ಲುಸೈಲ್‌(ಡಿ.08): ಮೊದಲ ಬಾರಿಗೆ ಪೋರ್ಚುಗಲ್‌ ತಂಡದ ಆರಂಭಿಕ ಹನ್ನೊಂದರಲ್ಲಿ ಸ್ಥಾನ ಪಡೆದ ಗೋನ್ಸಾಲೋ ರಾಮೋಸ್‌ ವಿಶ್ವಕಪ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ ವಿರುದ್ಧ ಹ್ಯಾಟ್ರಿಕ್‌ ಗೋಲು ಬಾರಿಸಿ, ತಮ್ಮ ತಂಡ 6-1 ಗೋಲುಗಳಲ್ಲಿ ಗೆಲ್ಲಲು ಕಾರಣರಾದರು. ರೊನಾಲ್ಡೋ ಆಡದಿದ್ದರೂ ಪೋರ್ಚುಗಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

21 ವರ್ಷದ ರಾಮೋಸ್‌, ದಿಗ್ಗಜ ರೊನಾಲ್ಡೋ ಬದಲಿಗೆ ಕಣಕ್ಕಿಳಿದು ಅಚ್ಚರಿ ಮೂಡಿಸಿದರು. 17, 51 ಹಾಗೂ 67ನೇ ನಿಮಿಷದಲ್ಲಿ ರಾಮೋಸ್‌ ಗೋಲುಗಳನ್ನು ದಾಖಲಿಸಿದರು. ಹಿರಿಯ ಆಟಗಾರ ಪೆಪೆ 33ನೇ ನಿಮಿಷದಲ್ಲಿ ಗೋಲು ಹೊಡೆದರೆ, 55ನೇ ನಿಮಿಷದಲ್ಲಿ ರಫೇಲ್‌ ಗೆರೆರ್ರೊ, 92ನೇ ನಿಮಿಷದಲ್ಲಿ ರಾಫೆಲ್‌ ಲಿಯೋ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಲು ಯಶಸ್ವಿಯಾದರು. ಸ್ವಿಜರ್‌ಲೆಂಡ್‌ ಪರ 58ನೇ ನಿಮಿಷದಲ್ಲಿ ಮ್ಯಾನುಯೆಲ್‌ ಅಕಾಂಜಿ ಏಕೈಕ ಗೋಲು ಗಳಿಸಿದರು.

FIFA World Cup ಮೊರಾಕ್ಕೊ ಕಿಕ್‌ಗೆ ಸ್ಪೇನ್ ಔಟ್‌..! ಸ್ಪೇನಲ್ಲಿ ಹುಟ್ಟಿದ ಆಟಗಾರನಿಂದಲೇ ಸ್ಪೇನಿಗೆ ಶಾಕ್‌..!

ಪೋರ್ಚುಗಲ್‌ 2006ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಜೊತೆಗೆ ವಿಶ್ವಕಪ್‌ನ ನಾಕೌಟ್‌ ಹಂತದಲ್ಲಿ ಪೋರ್ಚುಗಲ್‌ ಮೊದಲ ಬಾರಿಗೆ 6 ಗೋಲು ದಾಖಲಿಸಿದೆ.

ರಾತ್ರೋರಾತ್ರಿ ರಾಮೋಸ್‌ ಸ್ಟಾರ್‌: ರೊನಾಲ್ಡೋ ಉತ್ತರಾಧಿಕಾರಿ?

ಮಂಗಳವಾರ ರಾತ್ರಿ ವರೆಗೂ ಬಹುತೇಕ ಫುಟ್ಬಾಲ್‌ ಅಭಿಮಾನಿಗಳಿಗೆ ಗೋನ್ಸಾಲೋ ರಾಮೋಸ್‌ ಹೆಸರೇ ಗೊತ್ತಿರಲಿಲ್ಲ. ಅವರು ಪೋರ್ಚುಗಲ್‌ ತಂಡದಲ್ಲಿ ಮೊದಲ ಬಾರಿ ಆಡಿದ್ದೇ ಈ ವಿಶ್ವಕಪ್‌ನಲ್ಲಿ. ಆರಂಭಿಕ ಹನ್ನೊಂದರಲ್ಲಿ ಮೊದಲ ಬಾರಿಗೆ ಅವರಿಗೆ ಸ್ಥಾನ ದೊರೆಯಿತು. ಗುಂಪು ಹಂತದ ಘಾನಾ ಹಾಗೂ ಉರುಗ್ವೆ ವಿರುದ್ಧದ ಪಂದ್ಯಗಳ ಕೊನೆ ಕೆಲ ನಿಮಿಷಗಳಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದಿದ್ದರು. 26 ಸದಸ್ಯರ ತಂಡದಲ್ಲಿ ರಾಮೋಸ್‌ಗೆ 26ನೇ ಸಂಖ್ಯೆಯ ಜೆರ್ಸಿ ನೀಡಲಾಗಿದೆ. ಅಂದರೆ ಅವರು ಕೊನೆ ಆಯ್ಕೆ. ಆದರೆ ಏಕಾಏಕಿ ರೊನಾಲ್ಡೋ ಜಾಗದಲ್ಲಿ ಆಡಿ ತಾರೆಯಾಗಿ ಗುರುತಿಸಿಕೊಂಡಿರುವ ರಾಮೋಸ್‌, ರೊನಾಲ್ಡೋ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿದ್ದಾರೆ.

ರೊನಾಲ್ಡೋರನ್ನು ತಂಡದಿಂದ ಕೋಚ್‌ ಹೊರಗಿಟ್ಟಿದ್ದು ಏಕೆ?

ಗುಂಪು ಹಂತದ ಅಂತಿಮ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಪೋರ್ಚುಗಲ್‌ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಕೋಚ್‌ ಫೆರ್ನಾಂಡೋ ಸ್ಯಾಂಟೊಸ್‌ ಸಿಟ್ಟಾಗಿದ್ದರು. ಪಂದ್ಯದಲ್ಲಿ ರೊನಾಲ್ಡೋ ಆಟದ ಬಗ್ಗೆ ಸ್ಯಾಂಟೋಸ್‌ ಅಸಮಾಧಾನಗೊಂಡಿದ್ದರು. ಇದೇ ಕಾರಣಕ್ಕೆ ಕ್ವಾರ್ಟರ್‌ ಫೈನಲ್‌ನಲ್ಲಿ ನಾಯಕನನ್ನೇ ಹೊರ ಕೂರಿಸಲು ಸ್ಯಾಂಟೊಸ್‌ ನಿರ್ಧರಿಸಿದರು.

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಹಜಾರ್ಡ್‌ ಗುಡ್‌ಬೈ!

ಬ್ರಸ್ಸೆಲ್ಸ್‌: ವಿಶ್ವಕಪ್‌ ಗುಂಪು ಹಂತದಲ್ಲೇ ತಮ್ಮ ತಂಡ ಹೊರಬಿದ್ದ ಪರಿಣಾಮ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ಬೆಲ್ಜಿಯಂನ ತಾರಾ ಆಟಗಾರ ಏಡನ್‌ ಹಜಾರ್ಡ್‌ ನಿವೃತ್ತಿ ಪಡೆದಿದ್ದಾರೆ. ಹಜಾರ್ಡ್‌ 2008ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 31ನೇ ವಯಸ್ಸಿಗೇ ನಿವೃತ್ತಿ ಪಡೆದಿರುವ ಅವರು ಬೆಲ್ಜಿಯಂ ಪರ 126 ಪಂದ್ಯಗಳನ್ನಾಡಿ 33 ಗೋಲುಗಳನ್ನು ಬಾರಿಸಿದ್ದಾರೆ. ತಮ್ಮ ನಿವೃತ್ತಿ ನಿರ್ಧಾರವನ್ನು ಹಜಾರ್ಡ್‌ ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿದರು. ಕ್ಲಬ್‌ ಫುಟ್ಬಾಲ್‌ನಲ್ಲಿ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios