ಎರಡನೇ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ತಂಡಕ್ಕೆ ನೆದರ್‌ಲೆಂಡ್ಸ್ ಸವಾಲುಸತತ 19 ಪಂದ್ಯಗಳಲ್ಲಿ ಸೋಲನ್ನೇ ಕಾಣದ ನೆದರ್‌ಲೆಂಡ್‌್ಸ2014ರ ಬಳಿಕ ಮತ್ತೆ ಕ್ವಾರ್ಟರ್‌ಗೇರಲು ಮೆಸ್ಸಿ ಪಡೆ ಕಾತರ 

ಲುಸೈಲ್‌(ಡಿ.09): ಬಹುತೇಕ ಕೊನೆಯ ವಿಶ್ವಕಪ್‌ ಆಡುತ್ತಿರುವ ದಿಗ್ಗಜ ಲಿಯೋನೆಲ್‌ ಮೆಸ್ಸಿ ನಿವೃತ್ತಿಗೂ ಮೊದಲು ವಿಶ್ವಕಪ್‌ ಟ್ರೋಫಿ ಎತ್ತಿಹಿಡಿಯುವ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಕಾತರಿಸುತ್ತಿದ್ದು, ಶುಕ್ರವಾರ ರಾತ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 2010ರ ರನ್ನರ್‌-ಅಪ್‌ ನೆದರ್‌ಲೆಂಡ್‌್ಸ ವಿರುದ್ಧ ಸೆಣಸಲಿದೆ.

ಅನುಭವಿ ಕೋಚ್‌ ಲೂಯಿ ವಾನ್‌ ಗಾಲ್‌ ಮಾರ್ಗದರ್ಶನದ ಡಚ್‌ ಪಡೆ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕ ವಿರುದ್ಧ ಸುಲಭ ಗೆಲುವು ಸಾಧಿಸಿದರೆ, ಆಸ್ಪ್ರೇಲಿಯಾ ವಿರುದ್ಧ ಅರ್ಜೆಂಟೀನಾ ರೋಚಕ ಗೆಲುವು ಸಂಪಾದಿಸಿತ್ತು. 2010, 2014ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ನೆದರ್‌ಲೆಂಡ್‌್ಸ, 2018ರ ವಿಶ್ವಕಪ್‌ಗೆ ಅರ್ಹತೆ ಪಡೆಯದೆ ಅಚ್ಚರಿ ಮೂಡಿಸಿತ್ತು. ಈ ವರ್ಷ ತನ್ನ ಆಕರ್ಷಕ ಆಟದ ಮೂಲಕ ಡಚ್‌ ಪಡೆ ಗಮನ ಸೆಳೆಯುತ್ತಿದೆ. ತಂಡ ಕಳೆದ 19 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದು, ಈ ಪಂದ್ಯದಲ್ಲಿ ಆ ದಾಖಲೆ ಪತನಗೊಳ್ಳಬಹುದು.

ತಮ್ಮ 1000ನೇ ಪಂದ್ಯದಲ್ಲಿ ಗೋಲು ಬಾರಿಸಿ, ವಿಶ್ವಕಪ್‌ ನಾಕೌಟ್‌ ಪಂದ್ಯದಲ್ಲಿ ಚೊಚ್ಚಲ ಗೋಲು ದಾಖಲಿಸಿದ ಮೆಸ್ಸಿ, ತಮ್ಮೆಲ್ಲಾ ಕೌಶಲ್ಯಗಳನ್ನು ಪ್ರದರ್ಶಿಸಿ ಗೆಲ್ಲಲು ಪ್ರಯತ್ನಿಸಲಿದ್ದಾರೆ. ಮೆಸ್ಸಿಯನ್ನು ತಡೆಯುವುದು ಮಾತ್ರವಲ್ಲ, ಡಚ್‌ ಡಿಫೆಂಡರ್‌ಗಳು ಯುವ ಆಟಗಾರರಾದ ಯೂಲಿಯಾನ್‌ ಆಲ್ವರೆಜ್‌, ಪಪು ಗೊಮೆಜ್‌, ಮ್ಯಾಕ್‌ ಅಲಿಸ್ಟರ್‌ರಂತಹ ಪ್ರತಿಭಾನ್ವಿತರನ್ನೂ ನಿಯಂತ್ರಿಸಬೇಕಾದ ಒತ್ತಡವಿರಲಿದೆ.

FIFA World Cup: ಕ್ರೊವೇಷಿಯಾ ಸವಾಲು ಗೆಲ್ಲುತ್ತಾ ಬಲಿಷ್ಠ ಬ್ರೆಜಿಲ್?

ಅರ್ಜೆಂಟೀನಾದ ಅನುಭವಿ ರಕ್ಷಣಾ ಪಡೆಗೆ ಡಚ್‌ನ ಕೊಡಿ ಗಾಕ್ಪೊ, ಮೆಂಫಿಸ್‌ ಡೀಪೆ, ಡೇಲಿ ಬ್ಲೈಂಡ್‌, ಡೆನ್ಜೆಲ್‌ ಡಂಫ್ರೈಸ್‌ರಿಂದ ಸವಾಲು ಎದುರಾಗಲಿದೆ. ಈ ಆಟಗಾರರು ಹಿಂದಿನ ಪಂದ್ಯಗಳಲ್ಲಿ ಗೋಲು ಬಾರಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಸತತ 13 ಪಂದ್ಯದಲ್ಲಿ ಗೋಲು: ದಕ್ಷಿಣ ಅಮೆರಿಕ ಚಾಂಪಿಯನ್‌ ಅರ್ಜೆಂಟೀನಾ ಈ ವರ್ಷ ಆಡಿರುವ 13 ಪಂದ್ಯಗಳಲ್ಲೂ ಗೋಲು ಬಾರಿಸಿದೆ. ದಕ್ಷಿಣ ಅಮೆರಿಕ ಹಾಗೂ ಯುರೋಪಿಯನ್‌ ಫುಟ್ಬಾಲ್‌ ಒಕ್ಕೂಟಗಳ ನಡುವೆ ನಡೆಯುವ ಕಪ್‌ ಆಫ್‌ ಚಾಂಪಿಯನ್ಸ್‌ ಟೂರ್ನಿಯಲ್ಲೂ ಪ್ರಶಸ್ತಿ ಜಯಿಸಿತ್ತು. ಈ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದನ್ನು ಹೊರತುಪಡಿಸಿ ಅರ್ಜೆಂಟೀನಾ ಈ ವರ್ಷ ಸೋಲು ಕಂಡಿಲ್ಲ.

ಅರ್ಜೆಂಟೀನಾ ಕ್ವಾರ್ಟರ್‌ ಹಾದಿ

ಗುಂಪು ಹಂತ

ಸೌದಿ ವಿರುದ್ಧ 1-2ರ ಸೋಲು

ಮೆಕ್ಸಿಕೋ ವಿರುದ್ಧ 2-0 ಜಯ

ಪೋಲೆಂಡ್‌ ವಿರುದ್ಧ 2-0 ಜಯ

ಪ್ರಿ ಕ್ವಾರ್ಟರ್‌ ಫೈನಲ್‌

ಆಸ್ಪ್ರೇಲಿಯಾ ವಿರುದ್ಧ 2-1 ಜಯ

ನೆದರ್‌ಲೆಂಡ್‌್ಸ ಕ್ವಾರ್ಟರ್‌ ಹಾದಿ

ಗುಂಪು ಹಂತ

ಸೆನೆಗಲ್‌ ವಿರುದ್ಧ 2-0 ಜಯ

ಈಕ್ವೆಡಾರ್‌ ವಿರುದ್ಧ 1-1 ಡ್ರಾ

ಕತಾರ್‌ ವಿರುದ್ಧ 2-0 ಜಯ

ಪ್ರಿ ಕ್ವಾರ್ಟರ್‌ ಫೈನಲ್‌

ಅಮೆರಿಕ ವಿರುದ್ಧ 3-1 ಜಯ