Asianet Suvarna News Asianet Suvarna News

ಫಿಫಾ ವಿಶ್ವಕಪ್‌‌ನಲ್ಲಿ ಮತ್ತೊಂದು ವಿವಾದ, ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್!

ಖತಾರ್‌ನಲ್ಲಿ ಆಯೋಜಿಸಿರುವ ಫಿಫಾ ವಿಶ್ವಕಪ್ ಟೂರ್ನಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಬಿಯರ್ ನಿಷೇಧ, ಗೇಗಳಿಗೆ ಬೆಂಬಲ ವಿವಾದ ನಡುವೆ ಇದೀಗ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ವಿವಾದ ತಲೆದೋರಿದೆ. ಈ ವಿವಾದ ಇಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲ. ಆದರೆ ಇರಾನ್ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿದೆ. ಇದರಿಂದ ಇರಾನ್ ಆಟಗಾರರು ತವರಿಗೆ ವಾಪಾಸ್ಸಾಗುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.

Fifa World cup 2022 Iran Team refuse to sing national anthem to support Hijab ban protest against Government ckm
Author
First Published Nov 21, 2022, 7:09 PM IST

ಖತಾರ್(ನ.21): ಪ್ರತಿ ಫಿಫಾ ವಿಶ್ವಕಪ್ ಟೂರ್ನಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿದೆ. ಆನ್‌ಫೀಲ್ಡ್‌ನಲ್ಲಿನ ಕೆಲ ವಿವಾದ, ಜೊತೆ ಸಣ್ಣ ಪುಟ್ಟ ವಿವಾದಗಳು ಇದ್ದೇ ಇರುತ್ತೆ. ಆದರೆ ಈ ಬಾರಿಯ ಫಿಫಾ ವಿಶ್ವಕಪ್ ಆಯೋಜನೆ, ಫುಟ್ಬಾಲ್ ಮಂಡಲಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಅರಬ್ ರಾಷ್ಟ್ರ ಖತಾರ್‌ನಲ್ಲಿ ಆಯೋಜಿಸಿರುವ ಫುಟ್ಬಾಲ್ ವಿಶ್ವಕಪ್ ಒಮ್ಮೆ ಮುಗಿದರೆ ಸಾಕು ಅನ್ನುವಂತಾಗಿದೆ. ಒಂದರ ಮೇಲೊದಂರಂತೆ ವಿವಾದಲ್ಲಿ ಸಿಲುಕಿರುವ ಖತಾರ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇದೀಗ ಹೊಸ ವಿವಾದ ತಲೆದೋರಿದೆ. ಇಂಗ್ಲೆಂಡ್ ಹಾಗೂ ಇರಾನ್ ನಡುವಿನ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ವಿವಾದ ಹುಟ್ಟಿಕೊಂಡಿದೆ. ಇರಾನ್ ಆಟಾಗರರು ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಾರೆ. 

ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ದ ಪ್ರತಿಭಟನೆ ಬೆಂಬಲಿಸಿರುವ ಇರಾನ್ ಫುಟ್ಬಾಲ್ ತಂಡ ಈ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಫುಟ್ಬಾಲ್ ನಾಯಕ ಅಲಿರೆಜಾ ಜಹಾನ್‌ಬಕ್ಷ್, ನಾವು ರಾಷ್ಟ್ರಗೀತೆ ಹಾಡದಿರಲು ನಿರ್ಧರಿಸಿದ್ದೇವೆ. ಇರಾನ್‌ನನಲ್ಲಿ ನಡೆಯತ್ತಿರುವ ಪ್ರತಿಭಟನೆ ಬೆಂಬಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅಲಿರೆಜಾ ಹೇಳಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ 'ಗೇ' ಸಂಬಂಧಕ್ಕೆ ಉಘೇ, ಕತಾರ್‌ಗೆ ಆರಂಭವಾಯ್ತು ದಗೆ!

ಖತಾರ್ ಹಾಗೂ ಇರಾನ್ ಕಟ್ಟಾ ಇಸ್ಲಾಮಿಕ್ ರಾಷ್ಟ್ರಗಳು. ಈ ಎರಡು ರಾಷ್ಟ್ರಗಳು ಉಳಿದೆಲ್ಲಾ ವಿಚಾರಕ್ಕಿಂತ ಇಸ್ಲಾಂ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹೆಚ್ಚಿನ ಒತ್ತು ನೀಡಿದೆ. ಇದೇ ಕಾರಣಕ್ಕೆ ಕ್ರೀಡಾಂಗಣದಲ್ಲಿ ಬಿಯರ್ ನಿಷೇಧಕ್ಕೆ ಆದೇಶ ನೀಡಿದೆ. ಇದೀಗ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ಧದ ಪ್ರತಿಭಟನೆಗೆ ಆಟಗಾರರು ರಾಷ್ಟ್ರಗೀತೆ ಹಾಡದೆ ಪ್ರತಿಭಟನೆ ಮಾಡಿದರೆ ಖತಾರ್ ಬೆಂಬಲಿಸಿದ ರೀತಿ ಆಗಲಿದೆ. ಈ ಜಟಾಪಟಿಯಿಂದ ಫಿಫಾ ಆಡಳಿತ ಮಂಡಳಿಗೆ ತಲೆನೋವು ಹೆಚ್ಚಿಸಿದೆ. ಇರಾನ್ ಆಟಗಾರರಿಗೆ ಹೆಚ್ಚಿನ ಭದ್ರತೆ ನೀಡುವ ಜವಾಬ್ದಾರಿ ಇದೀಗ ಫಿಫಾ ಮೇಲಿದೆ. 

ಸ್ಟೇಡಿಯಂಗಳಲ್ಲಿ ಬಿಯರ್‌ ಮಾರಾಟಕ್ಕೆ ಕತಾರ್‌ ತಡೆ!
ಕ್ರೀಡಾಂಗಣಗಳಲ್ಲಿ ಬಿಯರ್‌ ಮಾರಾಟ ಹಾಗೂ ಸೇವನೆಗೆ ನಿರ್ಬಂಧ ಹೇರಿದೆ. 2010ರಲ್ಲಿ ಆತಿಥ್ಯ ಹಕ್ಕು ಪಡೆಯುವ ಸಮಯದಲ್ಲಿ ಬಿಯರ್‌ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡುವುದಾಗಿ ಕತಾರ್‌ ಒಪ್ಪಿಕೊಂಡಿತ್ತು. ಈ ವರ್ಷ ಸೆಪ್ಟೆಂಬರ್‌ನಲ್ಲೂ ತಾನು ಫಿಫಾ ಜೊತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಬದ್ಧ ಎಂದು ಕತಾರ್‌ ಪುನರುಚ್ಚರಿಸಿತ್ತು. ಆದರೆ ಇದೀಗ ತನ್ನ ನಿರ್ಧಾರ ಬದಲಿಸುವುದರಿಂದ ಫಿಫಾದ ಪ್ರಮುಖ ಪ್ರಾಯೋಜಕರಲ್ಲಿ ಒಂದಾದ ಬೆಲ್ಜಿಯಂ ಮೂಲದ ಎಬಿ-ಇನ್‌ಬೆವ್‌(ಬಡ್‌ವೈಸರ್‌ನ ಮಾತೃ ಸಂಸ್ಥೆ)ಗೆ ಭಾರೀ ನಷ್ಟಉಂಟಾಗಲಿದೆ. 1985ರಿಂದ ಪ್ರಾಯೋಜಕತ್ವ ನೀಡುತ್ತಿರುವ ಎಬಿ-ಇನ್‌ಬೆವ್‌ 4 ವರ್ಷಗಳಿಗೊಮ್ಮೆ ಫಿಫಾಗೆ 75 ಮಿಲಿಯನ್‌ ಡಾಲರ್‌(ಈಗಿನ ಡಾಲರ್‌ ಮೌಲ್ಯದಲ್ಲಿ 61 ಕೋಟಿ ರು.) ಪಾವತಿಸಲಿದೆ. ಇದೀಗ ಕತಾರ್‌ನ ನಿರ್ಧಾರದಿಂದ ಫಿಫಾ ದೊಡ್ಡ ಮೊತ್ತವನ್ನು ಇನ್‌ಬೆವ್‌ ಸಂಸ್ಥೆಗೆ ಹಿಂದಿರುಗಿಸಬೇಕಾಗಬಹುದು.

ಇಂಗ್ಲೆಂಡ್‌ ಆಟಗಾರರ ಪತ್ನಿಯರಿಗೆ 'ವಾರ್ಡ್‌ರೋಬ್‌' ಸಲಹೆ ನೀಡಿದ ಫುಟ್‌ಬಾಲ್‌ ಸಂಸ್ಥೆ!

ಭದ್ರತೆಗೆ ಹಲವು ದೇಶಗಳ ನೆರವು

ವಿಶ್ವಕಪ್‌ ವೇಳೆ ಭದ್ರತಾ ಲೋಪವಾಗಬಾರದು ಎನ್ನುವ ಕಾರಣಕ್ಕೆ ಕತಾರ್‌ ಹಲವು ದೇಶಗಳಿಂದ ನೆರವು ಪಡೆದಿದೆ. ಬ್ರಿಟನ್‌ನ ರಾಯಲ್‌ ಏರ್‌ಫೋರ್ಸ್‌ ಕ್ರೀಡಾಂಗಣದ ಸುತ್ತ ತನ್ನ ವಿಮಾನಗಳ ಹಾರಾಟ ನಡೆಸಲಿದೆ. ಅಮೆರಿಕ ಗುಪ್ತಚರ ಹಾಗೂ ಭದ್ರತಾ ನೆರವು ನೀಡಿದೆ. ಟರ್ಕಿ ತನ್ನ ಪೊಲೀಸ್‌ ಸಿಬ್ಬಂದಿಯನ್ನು ಕಳುಹಿಸಿದ್ದು, ಪಾಕಿಸ್ತಾನದ ಸಾವಿರಾರು ಸೈನಿಕರು ಕತಾರ್‌ಗೆ ತೆರಳಿದ್ದಾರೆ. ಒಟ್ಟು ಸರ್ಕಾರಿ ಹಾಗೂ ಖಾಸಗಿ ಸೇರಿ ಒಟ್ಟು 50000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Follow Us:
Download App:
  • android
  • ios