FIFA World Cup: ಕ್ವಾರ್ಟರ್‌ ಫೈನಲ್‌ಗೆ ನೆದರ್‌ಲೆಂಡ್ಸ್‌; ಬೈ ಬೈ ಅಮೆರಿಕ..!

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ನೆದರ್‌ಲೆಂಡ್ಸ್‌
ಅಮೆರಿಕ ಎದುರು ಭರ್ಜರಿ ಗೆಲುವು ಸಾಧಿಸಿದ ಡಚ್ ಪಡೆ
ನೆದರ್‌ಲೆಂಡ್ಸ್ ತಂಡಕ್ಕೆ ಅಮೆರಿಕ ವಿರುದ್ಧ 3-1 ಗೋಲುಗಳ ಭರ್ಜರಿ ಗೆಲುವು 

FIFA World Cup 2022 Clinical Netherlands Beat USA Book Quarter finals Spot kvn

ಅಲ್‌ ರಯ್ಯನ್‌: 2018ರಲ್ಲಿ ವಿಶ್ವಕಪ್‌ಗೆ ಅರ್ಹತೆ ಪಡೆಯದೆ ಮುಖಭಂಗಕ್ಕೊಳಗಾಗಿದ್ದ ನೆದರ್‌ಲೆಂಡ್‌್ಸ, 2022ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಶನಿವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕ ವಿರುದ್ಧ 3-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. ಯುವ ಪಡೆಯೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟಿದ್ದ ಅಮೆರಿಕ, ತನ್ನ ವೇಗ ಹಾಗೂ ಆಕ್ರಮಣಕಾರಿ ಆಟವನ್ನು ನೆದರ್‌ಲೆಂಡ್‌್ಸ ಎದುರು ಪ್ರದರ್ಶಿಸಲು ವಿಫಲವಾಯಿತು. ಅಮೆರಿಕದ ರಕ್ಷಣಾ ಪಡೆಯ ದೌರ್ಬಲ್ಯಗಳ ಲಾಭವೆತ್ತಿದ ನೆದರ್‌ಲೆಂಡ್‌್ಸ, ಯಾವ ಹಂತದಲ್ಲೂ ಮುನ್ನಡೆ ಬಿಟ್ಟುಕೊಡಲಿಲ್ಲ.

ಡಚ್‌ಗೆ ಹೋಲಿಸಿದರೆ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿ, ಹೆಚ್ಚು ಗೋಲು ಬಾರಿಸುವ ಅವಕಾಶಗಳನ್ನು ಸೃಷ್ಟಿಸಿದರೂ ಅಮೆರಿಕಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ನೆದರ್‌ಲೆಂಡ್‌್ಸ ನಿರಂತರವಾಗಿ ಹೇರಿದ ಒತ್ತಡವೂ ಕಾರಣ. ಆರಂಭದಲ್ಲೇ ಮುನ್ನಡೆ: 10ನೇ ನಿಮಿಷದಲ್ಲೇ ನೆದರ್‌ಲೆಂಡ್‌್ಸ ಗೋಲಿನ ಖಾತೆ ತೆರೆಯಿತು. ಮೆಮ್ಫಿಸ್‌ ಡಿಪೇ ಆಕರ್ಷಕ ಗೋಲು ಗಳಿಸಿದರು. ಮೊದಲಾರ್ಧ ಮುಕ್ತಾಯಗೊಳ್ಳುವ ಮೊದಲೇ (45+1ನೇ ನಿ.,) ಡೇಲಿ ಬ್ಲೈಂಡ್‌ ಮುನ್ನಡೆಯನ್ನು 2-0ಗೇರಿಸಿದರು.

FIFA World Cup ಬ್ರೆಜಿಲ್ ಹ್ಯಾಟ್ರಿಕ್‌ಗೆ ಕ್ಯಾಮರೊನ್ ಬ್ರೇಕ್..!

ಅಮೆರಿಕ ದ್ವಿತೀಯಾರ್ಧದಲ್ಲೂ ತನ್ನ ಪೂರ್ಣ ಪರಿಶ್ರಮ ವಹಿಸಿ ಗೋಲು ಬಾರಿಸುವ ಪ್ರಯತ್ನ ನಡೆಸಿತು. ಕೊನೆಗೂ 76ನೇ ನಿಮಿಷದಲ್ಲಿ ಹಾಜಿ ರೈಟ್‌ ಅಮೆರಿಕಕ್ಕೆ ಮೊದಲ ಗೋಲು ತಂದುಕೊಟ್ಟರು. ಪಂದ್ಯ ಅಮೆರಿಕ ಕಡೆಗೆ ವಾಲುತ್ತಿದೆ ಎನ್ನುವಷ್ಟರಲ್ಲಿ ಡೆನ್ಜೆಲ್‌ ಡಮ್‌ಫ್ರೈಸ್‌ ಡಚ್‌ ಪರ 3ನೇ ಗೋಲು ಬಾರಿಸಿ ಅಮೆರಿಕ ಮೇಲೆ ಮತ್ತೆ ಒತ್ತಡ ಹೇರಿದರು. ಡಚ್‌ನ ತಂತ್ರಗಾರಿಕೆಯ ಎದುರು ಅಮೆರಿಕ ಉತ್ತರಗಳಲ್ಲಿದೆ ಪರದಾಡಿತು.

ಈಡೇರದ ಅಮೆರಿಕ ಕನಸು!

2002ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಅಮೆರಿಕ ಆ ಬಳಿಕ 2006ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು. 2010, 2014ರಲ್ಲಿ ಪ್ರಿ ಕ್ವಾರ್ಟರ್‌ನಲ್ಲಿ ಸೋತಿದ್ದ ಅಮೆರಿಕ, 2018ರ ವಿಶ್ವಕಪ್‌ಗೆ ಅರ್ಹತೆ ಪಡೆದಿರಲಿಲ್ಲ. 20 ವರ್ಷಗಳ ಬಳಿಕ ಮತ್ತೆ ಕ್ವಾರ್ಟರ್‌ಗೇರುವ ಅಮೆರಿಕ ಕನಸು ಈಡೇರಲಿಲ್ಲ.

7ನೇ ಬಾರಿಗೆ ಡಚ್‌ ಕ್ವಾರ್ಟರ್‌ಗೆ!

ನೆದರ್‌ಲೆಂಡ್‌್ಸ 7ನೇ ಬಾರಿಗೆ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. 1974, 1978, 2010ರಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದಿದ್ದ ಡಚ್‌, 1994ರಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿತ್ತು. 1998ರಲ್ಲಿ 4ನೇ, 2014ರಲ್ಲಿ 3ನೇ ಸ್ಥಾನ ಪಡೆದಿತ್ತು.
 

Latest Videos
Follow Us:
Download App:
  • android
  • ios