ಖ್ಯಾತ ಆಟಗಾರ ಹಾಕೊಂಡಿದ್ದ ಹೇರ್‌ನೆಟ್‌ನ್ನು ಕಾಂಡೋಮ್‌ಗೆ ಹೋಲಿಸಿದ ನೆಟ್ಟಿಗರು
ಖ್ಯಾತ ಫುಟ್ಬಾಲ್ ಆಟಗಾರ ಧರಿಸಿದ್ದ ಹೇರ್‌ನೆಟ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಹೇರ್‌ನೆಟ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.
ಜರ್ಮನಿ: ಇಂದು ಪುರುಷ ಆಟಗಾರರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಆಟದಲ್ಲಿ ಯಶಸ್ಸು ಸಿಗದಂತೆ ಜಾಹೀರಾತುಗಳಲ್ಲಿ ಕಾಣಸಿಗುವ ಅವಕಾಶಗಳು ಒಲಿದು ಬರುತ್ತವೆ. ಆಟದ ಜೊತೆಯಲ್ಲಿ ಮಾಡೆಲಿಂಗ್ ಲೋಕವೂ ಯಶಸ್ವಿ ಆಟಗಾರರನ್ನು ಸೆಳೆಯುತ್ತದೆ. ಕೆಲ ಆಟಗಾರರು ನಿವೃತ್ತಿ ಬಳಿಕ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಉದಾಹರಣಗಳು ನಮ್ಮ ಮುಂದಿವೆ. ಇನ್ನು ಆಟಗಾರರು ಅಪಾಯ ಅಭಿಮಾನಿಗಳನ್ನು ಹೊಂದಿರುತ್ತಾರೆ. ತಮ್ಮ ನೆಚ್ಚಿನ ಆಟಗಾರ ಧರಿಸುವ ಬಟ್ಟೆ, ಆತನ ಹೇರ್‌ಸ್ಟೈಲ್, ಟ್ಯಾಟೂಗಳನ್ನು ಅನುಸರಿಸುವ ಒಂದು ವರ್ಗದ ಅಭಿಮಾನಿ ಬಳಗ ಅನುಸರಿಸುತ್ತಾರೆ.
ಇದೆಲ್ಲದರ ಜೊತೆಯಲ್ಲಿ ಕೆಲ ಆಟಗಾರರು ಧರಿಸುವ ವಿಚಿತ್ರ ಬಟ್ಟೆಗಳಿಂದ ಟ್ರೋಲ್ ಸಹ ಆಗುತ್ತಿರುತ್ತಾರೆ. ಉದ್ದ ಕೂದಲು ಇರೋ ಆಟಗಾರರು ಆಟದ ಸಮಯದಲ್ಲಿ ಟೋಪಿ ಅಥವಾ ಜುಟ್ಟು ಹಾಕಿಕೊಳ್ಳುತ್ತಾರೆ. ಕೆಲವರು ಕೂದಲು ಕದಲದಂತೆ ಹೇರ್‌ಬ್ಯಾಂಡ್, ಕ್ಲಿಪ್, ಹೇರ್‌ನೆಟ್ ಬಳಕೆ ಮಾಡುತ್ತಾರೆ. ಇತ್ತೀಚೆಗೆ ಖ್ಯಾತ ಫುಟ್ಬಾಲ್ ಆಟಗಾರ ಧರಿಸಿದ್ದ ಹೇರ್‌ನೆಟ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಹೇರ್‌ನೆಟ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.
ಕಾಂಡೋಮ್ ಫೋಟೋ ಸೇರಿಸಿ ಟ್ರೋಲ್
ಫುಟ್ಬಾಲ್ ಆಟಗಾರ ಐನಿಸ್ ಹ್ಯಾಗಿ ಸಾಮಾಜಿಕ ಜಾಲತಾಣದಲ್ಲ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಐನಿಸ್ ಹ್ಯಾಗಿ ಹಾಕಿಕೊಂಡಿದ್ದ ಹೇರ್‌ನೆಟ್ ನೋಡಲು ಕಾಂಡೋಮ್ ರೀತಿ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಐನಿಸ್ ಹ್ಯಾಗಿ ಬಳಸಿದ ಹೇರ್‌ನೆಟ್ ಹಾಗೂ ಕಾಂಡೋಮ್ ಫೋಟೋ ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ. ಆಟದ ಸಂದರ್ಭದಲ್ಲಿ ತಲೆಗೆ ಗಾಯವಾಗಿದ್ದರಿಂದ ಐನಿಸ್ ಹ್ಯಾಗಿ ಬಿಳಿ ಬಣ್ಣದ ಹೇರ್‌ನೆಟ್ ಬಳಕೆ ಮಾಡಿದ್ದರು.
ಟೈಟ್ ಜೀನ್ಸ್ ಧರಿಸಿ ಬೈಕ್ ಏರಿ ಬಂದ ಯುವತಿಯನ್ನು ಓರೆಗಣ್ಣಿನಲ್ಲಿ ನೋಡಿದ ಅಂಕಲ್
ಆಟದಲ್ಲಿ ಆಗಿದ್ದೇನು? ಹೇರ್‌ನೆಟ್ ಹಾಕಿದ್ಯಾಕೆ?
ನೆದರ್‌ಲ್ಯಾಂಡ್ ವಿರುದ್ಧ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಐನಿಸ್ ಹ್ಯಾಗಿ ಫುಟ್ಬಾಲ್‌ನ್ನು ತಲೆಯಿಂದ ನೆಟ್‌ನತ್ತ ದೂಡುತ್ತಿದ್ದರು. ಈ ವೇಳೆ ಡಚ್ ಡಿಫೆಂಡರ್ ಆಗಿರುವ ಡೆನ್ಜೆಲ್ ಡಮ್‌ಫ್ರೈಸ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ವೇಳೆ ಡೆನ್ಜೆಲ್ ಡಮ್‌ಫ್ರೈಸ್ ಅವರ ಮೊಣಕೈ ಐನಿಸ್ ಹ್ಯಾಗಿಗೆ ತಗುಲಿದೆ. ಪರಿಣಾಮ ಐನಿಸ್ ಹ್ಯಾಗಿ ತಲೆಗೆ ಗಾಯವಾಗಿ ರಕ್ತ ಸೋರಲಾರಂಭಿಸಿತು. ಆಟದ ಮೈದಾನದಲ್ಲಿಯೇ ಚಿಕಿತ್ಸೆ ನೀಡಿ ಪಟ್ಟಿ ಸಹ ಹಾಕಲಾಯ್ತು. ಈ ವೇಳೆ ಬ್ಯಾಂಡೇಜ್ ಬಿಚ್ಚದಿರಲಿ ಎಂದು ಹೇರ್‌ನೆಟ್ ಹಾಕಿಕೊಂಡು ತಮ್ಮ ಆಟ ಮುಂದುವರಿಸಿದ್ದರು.
ಹೇರ್‌ನೆಟ್ ಧರಿಸಿದ ಫೋಟೋಗಳು ಕೆಲವೇ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲವರು ಐನಿಸ್ ಹ್ಯಾಗಿ ಅವರ ಕ್ರೀಡಾಸ್ಪೂರ್ತಿಗೆ ಬೇಷ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಗಾಯಗೊಂಡರು ಆಟ ಮುಂದುವರಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಇನ್ನು ಟ್ರೋಲಿಗರು ಹೇರ್‌ನೆಟ್‌ನ್ನು ಕಾಂಡೋಮ್, ಹಣ್ಣುಗಳನ್ನು ಪ್ಯಾಕ್ ಮಾಡುವ ಬ್ಯಾಗ್ ಹೀಗೆ ಹಲವು ವಸ್ತುಗಳೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಬ್ಯಾನ್, ವ್ಯಾಟ್ಸಾಪ್, ಫೇಸ್‌ಬುಕ್ ಸೇರಿ ಎಲ್ಲಾ SM ಪಾಕ್‌ನಲ್ಲಿ 6 ದಿನ ನಿಷೇಧ!