ಮುಟ್ಟಿದ್ದೆಲ್ಲ ಚಿನ್ನ, ಮಾಡಿದ್ದೆಲ್ಲ ದಾಖಲೆ : ತಿಂಗಳಾಗೋ ಮೊದಲೇ ಯುಟ್ಯೂಬ್ ನಿಂದ ಹಣ ಬಾಚಿ ರೆಕಾರ್ಡ್ ಬರೆದ ರೊನಾಲ್ಡೊ
ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಏನ್ ಮಾಡಿದ್ರೂ ರೆಕಾರ್ಡ್ ಆಗುತ್ತೆ. ಇದೇ ಮೊದಲ ಬಾರಿ ಯುಟ್ಯೂಬ್ ಗೆ ಬಂದ ರೊನಾಲ್ಡ್ ಒಂದೇ ದಿನದಲ್ಲಿ ದಾಖಲೆ ಮುರಿದಿದ್ದಲ್ಲದೆ ಖಜಾನೆ ಭರ್ತಿ ಮಾಡ್ಕೊಂಡಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo), ದಾಖಲೆ ಬರೆಯೋ ಮನುಷ್ಯ. ಇವರು ಕಾಲಿಟ್ಟಲ್ಲೆಲ್ಲ ಹೊಸ ರೆಕಾರ್ಡ್ (new record) ಸೃಷ್ಟಿಯಾಗ್ಲೇಬೇಕು. ಫುಟ್ಬಾಲ್ ಮೈದಾನ (Football field) ಇರ್ಲಿ ಇಲ್ಲ ಸೋಶಿಯಲ್ ಮೀಡಿಯಾ ಇರಲಿ, ದಾಖಲೆ ಬರೆಯೋದು, ಮುರಿಯೋದ್ರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲಿದ್ದಾರೆ. ರೊನಾಲ್ಡೊ, ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ (streaming platform YouTube )ನ್ನು ಇಷ್ಟು ದಿನ ಬಳಸ್ತಾ ಇರಲಿಲ್ಲ. ಆದ್ರೆ ಅಲ್ಲಿಗೆ ಪದಾರ್ಪಣೆ ಮಾಡಿ ಕೆಲವೇ ಗಂಟೆಯಲ್ಲಿ ರೆಕಾರ್ಡ್ ಮಾಡಿದ್ದಾರೆ. ಯುಟ್ಯೂಬ್ ನಿಂದ ಅವರು ಗಳಿಸಿದ ಹಣ ಕೇಳಿದ್ರೆ ಶಾಕ್ ಆಗ್ತೀರಿ.
ಪೋರ್ಚುಗೀಸ್ ಫುಟ್ಬಾಲ್ ಆಟಗಾರ, ಕೆಲವೇ ದಿನಗಳ ಹಿಂದೆ ತಮ್ಮ ಯೂಟ್ಯೂಬ್ ಚಾನೆಲ್ (YouTube Channel) ಶುರು ಮಾಡಿದ್ದಾರೆ. ಅವರು ಯುಟ್ಯೂಬ್ ಚಾನೆಲ್ ಶುರು ಮಾಡಿದ 90 ನಿಮಿಷಗಳಲ್ಲಿ ಅವರು ಒಂದು ಮಿಲಿಯನ್ ಸಬ್ಸ್ಕ್ರೈಬರ್ ಪಡೆದ್ರು. ಅಷ್ಟೇ ಅಲ್ಲ ಅವ್ರಿಗೆ ಯುಟ್ಯೂಬ್ ಗೋಲ್ಡನ್ ಪ್ಲೇ ಬಟನ್ ಕೂಡ ಸಿಕ್ತು. ಫುಟ್ಬಾಲ್ ಮೈದಾನದಲ್ಲಿ ಹುರುಪಿನಿಂದ ಆಡುವ ಕ್ರಿಸ್ಟಿಯಾನೊ ರೊನಾಲ್ಡೋ, ಸೋಶಿಯಲ್ ಮೀಡಿಯಾವನ್ನು ಕೂಡ ಸ್ಪರ್ಧೆ ರೂಪದಲ್ಲಿಯೇ ನೋಡ್ತಿದ್ದಾರೆ.
ತವರಲ್ಲೇ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನಕ್ಕೆ ಸರಣಿ ಸೋಲು! ಪಾಕ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ
ಕ್ರಿಸ್ಟಿಯಾನೊ ಯುಟ್ಯೂಬ್ ಚಾನೆಲ್ ಹೆಸರು ಯುಆರ್ ಕ್ರಿಸ್ಟಿಯಾನೋ (UR Cristiano). ಆಗಸ್ಟ್ 21, 2024 ರಂದು ಪ್ರಾರಂಭವಾಯ್ತು. ಕೇವಲ 12 ಗಂಟೆಗಳ ಒಳಗೆ ಚಾನಲ್ 10 ಮಿಲಿಯನ್ ಚಂದಾದಾರರನ್ನು ಪಡೆದಿತ್ತು. ವಿಶೇಷ ಅಂದ್ರೆ ಯುಟ್ಯೂಬ್ ನಲ್ಲಿ ಟಾಪ್ ನಲ್ಲಿರುವ MrBeast ಇಷ್ಟು ಸಬ್ಸ್ಕ್ರೈಬರ್ ಪಡೆಯಲು 132 ದಿನಗಳನ್ನು ತೆಗೆದುಕೊಂಡಿದ್ರು. ರೊನಾಲ್ಡೋ, ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಚಂದಾದಾರರನ್ನು, ಟ್ವಿಟರ್‌ನಲ್ಲಿ 112.6 ಮಿಲಿಯನ್ ಚಂದಾದಾರರನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ. ಯುರೋಪ್‌ನಲ್ಲಿ ವಾಸಿಸುವ ಜನರ ಸಂಖ್ಯೆಗಿಂತ ಹೆಚ್ಚಿನ ಜನರು ಅವರನ್ನು ಫಾಲೋ ಮಾಡ್ತಾರೆ.
ರೊನಾಲ್ಡೊ ಮುಂದಿನ ಗುರಿ : ಸದ್ಯ ರೊನಾಲ್ಡೊ 56.5 ಮಿಲಿಯನ್ ಸಬ್ಸ್ಕ್ರೈಬರ್ ಹೊಂದಿದ್ದಾರೆ. ಪೋರ್ಚುಗಲ್‌ನ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಮುಂದಿನ ಎರಡು ವರ್ಷಗಳಲ್ಲಿ 313 ಮಿಲಿಯನ್ ಚಂದಾದಾರರನ್ನು ಹೊಂದಿರುವ ಯೂಟ್ಯೂಬ್‌ನ ಅಗ್ರ ಸೃಷ್ಟಿಕರ್ತ ಮಿಸ್ಟರ್‌ಬೀಸ್ಟ್ ಹಿಂದಿಕ್ಕುವ ಗುರಿ ಹೊಂದಿದ್ದಾರೆ. ಇಷ್ಟು ವೇಗದಲ್ಲಿ ತಮ್ಮ ಚಂದಾದಾರರನ್ನು ಹೆಚ್ಚಿಸಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊಗೆ ಟಾಪ್ ಒನ್ ರಲ್ಲಿ ಬರೋದು ಕಷ್ಟವೇನಲ್ಲ. ಕ್ರೊಯೇಷಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಪೋರ್ಚುಗಲ್‌ನಲ್ಲಿ ನಡೆದ ನೇಷನ್ಸ್ ಲೀಗ್ ಪಂದ್ಯಗಳ ಮೊದಲು ರೊನಾಲ್ಡೊ ಮಿಸ್ಟರ್‌ಬೀಸ್ಟ್ ಅವರನ್ನು ಹಿಂದಿಕ್ಕುವ ಬಗ್ಗೆ ತಮಾಷೆ ಮಾಡಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಯುಟ್ಯೂಬ್ ಗಳಿಕೆ : 39 ವರ್ಷದ ಆಟಗಾರ ರೊನಾಲ್ಡೊ, ಯುಟ್ಯೂಬ್ ಗೆ ಬಂದು ಸರಿಯಾಗಿ ತಿಂಗಳಾಗಿಲ್ಲ, ಆಗ್ಲೇ ಅವರು ಇಲ್ಲಿಂದ 100 ಮಿಲಿಯನ್ ಯುರೊ ಹಣ ಗಳಿಸಿದ್ದಾರೆ. 28ಕ್ಕೂ ಹೆಚ್ಚು ವಿಡಿಯೋಗಳನ್ನು ಹಂಚಿಕೊಂಡಿರುವ ಅವರ ಯುಟ್ಯೂಬ್ ನಲ್ಲಿ ಮಿಲಿಯನ್ಸ್ ಲೆಕ್ಕದಲ್ಲಿ ವ್ಯೂವ್ಸ್ ನೋಡ್ಬಹುದು.
ಐಪಿಎಲ್ ಆರ್‌ಸಿಬಿ ಆಫರ್ ರಿಜೆಕ್ಟ್ ಮಾಡಿದ ಸ್ಟಾರ್ ಆಟಗಾರನೀಗ ಹೊಟ್ಟೆಪಾಡಿಗಾಗಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ..!
ಜಗತ್ತಿನಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಯೂಟ್ಯೂಬರ್ಗಳು ಯಾರು? : ಸದ್ಯ ಯುಟ್ಯೂಬ್ ನಲ್ಲಿ ಹೊಸ ಚಾನೆಲ್ ಗಳು ನಾಯಿಕೊಡೆಯಂತೆ ಹುಟ್ಟಿಕೊಳ್ತಿವೆ. ದೊಡ್ಡ ಸಮುದ್ರದಲ್ಲಿ ಈಜಿ ದಡಸೇರೋದು ಸಾಮಾನ್ಯ ಕೆಲಸವಲ್ಲ. ಈಗಾಗಲೇ ಪ್ರಸಿದ್ಧಿ ಪಡೆದಿರುವ ಸ್ಟಾರ್ಸ್ ಕೂಡ ನಿತ್ಯ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಬೇಕು. ವಿಶ್ವದಲ್ಲಿ ಅತಿ ಹೆಚ್ಚು ಸಬ್ಸ್ಕ್ರೈಬರ್ ಹೊಂದಿರುವ ಯುಟ್ಯೂಬರ್ ಯಾರು ಅಂತ ನೋಡಿದ್ರೆ ಪಟ್ಟಿಯಲ್ಲಿ ಮಿಸ್ಟರ್‌ಬೀಸ್ಟ್ ಮತ್ತು ಶೇನ್ ಡಾಸನ್ ಬರ್ತಾರೆ. ಅವರ ನಂತ್ರ ಬೆಯಾನ್ಸ್, ಜಸ್ಟಿನ್ ಬೈಬರ್, ಝೆಂಡಯಾ, ಬ್ಲ್ಯಾಕ್‌ಪಿಂಕ್ ಮತ್ತು ಲೆಬ್ರಾನ್ ಜೇಮ್ಸ್‌ನಂತಹ ಪ್ರಸಿದ್ಧ ವ್ಯಕ್ತಿಗಳ ಹೆಸರು ಬರುತ್ತದೆ.