* ಯುರೋ ಕಪ್‌ ಫುಟ್ಬಾಲ್‌ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಶುರು* ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ ಹಾಗೂ ಸ್ವಿಜರ್‌ಲೆಂಡ್‌  ಮುಖಾಮುಖಿ* 2ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂ ಹಾಗೂ ಇಟಲಿ ತಂಡಗಳು ಸೆಣಸಾಟ

ಮ್ಯೂನಿಕ್(ಜು.02)‌: ಯುರೋ ಕಪ್‌ 2020 ಫುಟ್ಬಾಲ್‌ ಟೂರ್ನಿ ನಿರ್ಣಾಯಕ ಹಂತ ತಲುಪಿದೆ. ಶುಕ್ರವಾರದಿಂದ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಆರಂಭಗೊಳ್ಳಲಿವೆ. 

ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ ಹಾಗೂ ಸ್ವಿಜರ್‌ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ. ಯುರೋ ಕಪ್‌ನಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಸೆಣಸಲಿವೆ. ಅಲ್ಲದೇ ಸ್ವಿಜರ್‌ಲೆಂಡ್‌ ವಿರುದ್ಧ ಆಡಿರುವ ಒಟ್ಟು 22 ಪಂದ್ಯಗಳಲ್ಲಿ ಸ್ಪೇನ್‌ ಕೇವಲ ಒಂದರಲ್ಲಿ ಸೋತಿದೆ. ರಷ್ಯಾದ ಸೇಂಟ್‌ ಪೀಟ​ರ್‍ಸ್ಬರ್ಗ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್‌ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಯುರೋ ಕಪ್‌: ಕ್ವಾರ್ಟರ್‌ಗೆ ಇಂಗ್ಲೆಂಡ್‌, ಉಕ್ರೇನ್‌ ಪ್ರವೇಶ

Scroll to load tweet…
Scroll to load tweet…

ಇನ್ನು ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆಯಲಿರುವ 2ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂ ಹಾಗೂ ಇಟಲಿ ತಂಡಗಳು ಸೆಣಸಲಿವೆ. ಸತತ 4ನೇ ಬಾರಿ ಯುರೋ ಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಇಟಲಿ ಸ್ಪರ್ಧಿಸಲಿದೆ.

ಇಂದಿನ ಪಂದ್ಯಗಳು: 
ಸ್ಪೇನ್‌-ಸ್ವಿಜರ್‌ಲೆಂಡ್‌(ರಾತ್ರಿ 9.30ಕ್ಕೆ), 
ಇಟಲಿ-ಬೆಲ್ಜಿಯಂ(ತಡರಾತ್ರಿ 12.30ಕ್ಕೆ)