ISL 2022-23 ಸತತ 7 ಪಂದ್ಯ ಗೆದ್ದು ಪ್ಲೇ-ಆಫ್ಗೇರಿದ ಬೆಂಗಳೂರು ಎಫ್‌ಸಿ..!
ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಪ್ಲೇ ಆಫ್‌ಗೆ ಲಗ್ಗೆ
ಬಲಿಷ್ಠ ಮುಂಬೈ ಎಫ್‌ಸಿ ಎದುರು ಭರ್ಜರಿ ಗೆಲುವು ಸಾಧಿಸಿದ ಬಿಎಫ್‌ಸಿ
ಐಎಸ್‌ಎಲ್ ಟೂರ್ನಿಯಲ್ಲಿ ಸತತ 7ನೇ ಗೆಲುವು ದಾಖಲಿಸಿದ ಸುನಿಲ್ ಚೆಟ್ರಿ ಪಡೆ
ಬೆಂಗಳೂರು(ಫೆ.18): ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಮುಂಬೈ ಎಫ್‌ಸಿ ವಿರುದ್ಧ 2-1 ಗೋಲುಗಳ ಗೆಲುವು ಸಾಧಿಸಿದ ಸುನಿಲ್ ಚೆಟ್ರಿ ಪಡೆ 19 ಪಂದ್ಯಗಳಲ್ಲಿ ಒಟ್ಟು 31 ಅಂಕಗಳೊಂದಿಗೆ ಅಗ್ರ-6ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ತಂಡ ಕೊನೆ ಏಳೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಲೀಗ್ ಹಂತದ ಕೊನೆ ಪಂದ್ಯದಲ್ಲಿ ಫೆಬ್ರವರಿ 23ಕ್ಕೆ ಎಫ್‌ಸಿ ಗೋವಾ ವಿರುದ್ಧ ಸೆಣಸಾಡಲಿದೆ.
ಫಿನಿಕ್ಸ್‌ನಂತೆ ಎದ್ದು ಬಂದ ಬೆಂಗಳೂರು ಎಫ್‌ಸಿ: ಒಂದು ಹಂತದಲ್ಲಿ ಬೆಂಗಳೂರು ಎಫ್‌ಸಿ ತಂಡವು ಮೊದಲ 12 ಪಂದ್ಯಗಳನ್ನಾಡಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ಆರಂಭಿಕ ಪಂದ್ಯಗಳಲ್ಲಿ ಚೆಟ್ರಿ ಪಡೆ ನೀರಸ ಪ್ರದರ್ಶನ ತೋರಿದ್ದರಿಂದ, ಫಲಿತಾಂಶ ಕೂಡಾ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಆ ಬಳಿಕ ಕೆಚ್ಚೆದೆಯ ಪ್ರದರ್ಶನ ತೋರಿದ ಬೆಂಗಳೂರು ಎಫ್‌ಸಿ ತಂಡವು ಸತತ 7 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ನಾಕೌಟ್ ಹಂತಕ್ಕೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
2022-23ನೇ ಸಾಲಿನ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡವು 19 ಪಂದ್ಯಗಳನ್ನಾಡಿ 10 ಗೆಲುವು, ಎಂಟು ಸೋಲು ಹಾಗೂ ಒಂದು ಡ್ರಾನೊಂದಿಗೆ ಒಟ್ಟು 31 ಅಂಕಗಳನ್ನು ಸಂಪಾದಿಸಿದೆ. ಸದ್ಯ ಮುಂಬೈ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಅಗ್ರ ಎರಡು ಸ್ಥಾನಗಳಲ್ಲಿ ಭದ್ರವಾಗಿವೆ. ಗ್ರೂಪ್ ಹಂತ ಮುಕ್ತಾಯದ ವೇಳೆಗೆ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದರೆ, ಉಳಿದ 4 ತಂಡಗಳು ನಾಕೌಟ್ ಪಂದ್ಯಗಳನ್ನಾಡಲಿವೆ.
ಸಂತೋಷ್ ಟ್ರೋಫಿ: ಡ್ರಾ ಸಾಧಿಸಿದ ಕರ್ನಾಟಕ
ಭುವನೇಶ್ವರ: ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 3-3 ಗೋಲುಗಳ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಟೂರ್ನಿಯ ಅಂತಿಮ ಸುತ್ತಿನಲ್ಲಿ ರಾಜ್ಯ ತಂಡ 2ನೇ ಡ್ರಾ ಸಾಧಿಸಿದರೂ ‘ಎ’ ಗುಂಪಿನಲ್ಲಿ 8 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಪ್ರತಿ ಗ್ರಾಮ ಪಂಚಾಯಿತ್‌ನಲ್ಲಿ 5 ಕೋಟಿ ರುಪಾಯಿ ವೆಚ್ಚದ ಸುಸಜ್ಜಿತ ಸ್ಟೇಡಿಯಂ..! ಬೊಮ್ಮಾಯಿ ಬಂಪರ್ ಬಜೆಟ್
ಕರ್ನಾಟಕ ಪರ ರಾಬಿನ್ ಯಾದವ್(45+4ನೇ ನಿಮಿಷ) ಮೊದಲ ಗೋಲು ಬಾರಿಸಿದರು. 60ನೇ ನಿಮಿಷಕ್ಕೆ ಕರ್ನಾಟಕ 1-3ರಿಂದ ಹಿಂದಿದ್ದರೂ ಬಳಿಕ ಅಂಕಿತ್(60ನೇ ನಿಮಿಷ), ಶಾಜನ್ ಫ್ರಾಂಕ್ಲಿನ್(90+11ನೇ ನಿಮಿಷ) ಬಾರಿಸಿ ಗೋಲು ರಾಜ್ಯ ತಂಡವನ್ನು ಸೋಲಿನಿಂದ ಪಾರು ಮಾಡಿತು. ರಾಜ್ಯ ಕೊನೆ ಪಂದ್ಯದಲ್ಲಿ ಭಾನುವಾರ ಒಡಿಶಾ ವಿರುದ್ಧ ಸೆಣಸಲಿದ್ದು, ಗೆದ್ದರೆ ಸೆಮಿಫೈನಲ್ ಪ್ರವೇಶಿಸಲಿದೆ.
ಏಷ್ಯಾ ಬ್ಯಾಡ್ಮಿಂಟನ್: ಭಾರತ ಸೆಮೀಸ್ಗೆ
ದುಬೈ: ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಚೊಚ್ಚಲ ಬಾರಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದು, ಐತಿಹಾಸಿಕ ಪದಕ ಖಚಿತಪಡಿಸಿಕೊಂಡಿದೆ. ಜೊತೆಗೆ 2023ರ ಸುದೀರ್ಮನ್ ಟೂರ್ನಿಗೂ ಅರ್ಹತೆ ಗಿಟ್ಟಿಸಿಕೊಂಡಿದೆ. ಶುಕ್ರವಾರ ಕ್ವಾರ್ಟರ್ ಫೈನಲ್ನಲ್ಲಿ ಭಾರತ ತಂಡ ಹಾಂಕಾಂಗ್ ವಿರುದ್ಧ 3-2 ಅಂತರದಲ್ಲಿ ಗೆಲುವು ಸಾಧಿಸಿತು.
ಆರಂಭದಲ್ಲಿ 2 ಪಂದ್ಯಗಳಲ್ಲಿ ಸೋತು 0-2 ಹಿನ್ನಡೆ ಅನುಭವಿಸಿದರೂ ಬಳಿಕ ಪುಟಿದೆದ್ದು ಪಂದ್ಯ ತನ್ನದಾಗಿಸಿಕೊಳ್ಳು ಭಾರತ ಯಶಸ್ವಿಯಾಯಿತು. ಪುರುಷರ ಡಬಲ್ಸ್ನಲ್ಲಿ ಧ್ರುವ್ ಕಪಿಲಾ-ಚಿರಾಗ್ ಶೆಟ್ಟಿಗೆಲುವು ಸಾಧಿಸಿದರೆ, ಮಹಿಳಾ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು ಗೆದ್ದು ಸಮಬಲ ಸಾಧಿಸಲು ನೆರವಾದರು. ಕೊನೆ ಪಂದ್ಯದಲ್ಲಿ ಮಹಿಳಾ ಡಬಲ್ಸ್ನಲ್ಲಿ ತೀಸಾ ಜಾಲಿ-ಗಾಯತ್ರಿ ಗೋಪಿಚಂಗ್ 21-13, 21-12ರಿಂದ ಜಯಗಳಿಸಿ ಭಾರತವನ್ನು ಸೆಮೀಸ್ಗೇರಿಸಿದರು.