ಇದರೊಂದಿಗೆ ತಂಡದ ನಾಕೌಟ್‌ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಇದು ಬಿಎಫ್‌ಸಿಗೆ 12 ಪಂದ್ಯಗಳಲ್ಲಿ ಎದುರಾದ 5ನೇ ಡ್ರಾ. ತಂಡ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳಲ್ಲಿ ಗೆದ್ದಿದ್ದು, 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಕೇವಲ 11 ಅಂಕಗಳೊಂದಿಗೆ 9ನೇ ಸ್ಥಾನದಲ್ಲೇ ಮುಂದುವರಿದಿದೆ.

ಬೆಂಗಳೂರು(ಡಿ.25): ಐಎಸ್‌ಎಲ್‌ ಫುಟ್ಬಾಲ್‌ ಲೀಗ್‌ನಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ನೀರಸ ಪ್ರದರ್ಶನ ಮುಂದುವರಿಸಿದೆ. ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ, ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ಧ 1-1 ಗೋಲಿನಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿತು. 

ಇದರೊಂದಿಗೆ ತಂಡದ ನಾಕೌಟ್‌ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಇದು ಬಿಎಫ್‌ಸಿಗೆ 12 ಪಂದ್ಯಗಳಲ್ಲಿ ಎದುರಾದ 5ನೇ ಡ್ರಾ. ತಂಡ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳಲ್ಲಿ ಗೆದ್ದಿದ್ದು, 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಕೇವಲ 11 ಅಂಕಗಳೊಂದಿಗೆ 9ನೇ ಸ್ಥಾನದಲ್ಲೇ ಮುಂದುವರಿದಿದೆ.

Scroll to load tweet…

ಇಂದಿನಿಂದ ಅಂತರ್‌ ವಿವಿ ಮಹಿಳಾ ಬಾಸ್ಕೆಟ್‌ಬಾಲ್‌

ಬೆಂಗಳೂರು: ನಗರದ ಜೈನ್‌ ವಿವಿ ದಕ್ಷಿಣ ವಲಯ ಅಂತರ್‌ ವಿವಿ ಮಹಿಳೆಯರ ಬಾಸ್ಕೆಟ್‌ಬಾಲ್‌ ಟೂರ್ನಿಯನ್ನು ಡಿ.25ರಿಂದ 28ರ ವರೆಗೆ ಕನಕಪುರದ ಜೈನ್‌ ಗ್ಲೋಬಲ್‌ ಕ್ಯಾಂಪಸ್‌ನಲ್ಲಿ ಆಯೋಜಿಸಲಿದೆ. ದಕ್ಷಿಣ ಭಾರತದ 81 ಬಾಸ್ಕೆಟ್‌ಬಾಲ್ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಅಗ್ರ-4 ಸ್ಥಾನ ಪಡೆಯುವ ತಂಡಗಳು ಜನವರಿಯಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್‌ ವಿವಿ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ ಎಂದು ಜೈನ್‌ ವಿವಿ ಕ್ರೀಡಾ ನಿರ್ದೇಶಕ ಡಾ. ಯು.ವಿ. ಶಂಕರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಹೋದರಿಯರ ಗೌರವ ಪ್ರಶಸ್ತಿಗಿಂತ ದೊಡ್ಡದು: ಭಜರಂಗ್‌ ಪೂನಿಯಾ

ಭಾರತ ಕಬಡ್ಡಿ ಒಕ್ಕೂಟಕ್ಕೆ ಕನ್ನಡಿಗ ಸುರೇಶ್‌ ಸದಸ್ಯ

ನವದೆಹಲಿ: ಕರ್ನಾಟಕ ಅಮೆಚೂರ್‌ ಕಬಡ್ಡಿ ಸಂಸ್ಥೆ ಅಧ್ಯಕ್ಷ ಬಿ.ಸಿ. ಸುರೇಶ್‌ ಅವರು ಭಾರತ ಅಮೆಚೂರು ಕಬಡ್ಡಿ ಫೆಡರೇಷನ್‌ನ ಸದಸ್ಯನಾಗಿ ನೇಮಕಗೊಂಡಿದ್ದಾರೆ. ಭಾನುವಾರ ಚುನಾವಣಾಧಿಕಾರಿ ಅಧಿಕೃತವಾಗಿ ಸಮಿತಿಯ ಸದಸ್ಯರ ಹೆಸರು ಪ್ರಕಟಿಸಿದರು. ಸದಸ್ಯನಾಗಿ ಆಯ್ಕೆಯಾಗಿರುವ ಬಗ್ಗೆ ‘ಕನ್ನಡಪ್ರಭ’ ಜೊತೆ ಸಂತಸ ವ್ಯಕ್ತಪಡಿಸಿದ ಸುರೇಶ್‌, ‘ಫೆಡರೇಷನ್‌ಗೆ ಕಳೆದ 5 ವರ್ಷ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಕೊನೆಗೂ ಈ ಬಾರಿ ಚುನಾವಣೆ ನಡೆದಿದೆ. ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಿತಿಗೆ ಆಯ್ಕೆಯಾಗಿದ್ದರಿಂದ ದೇಶದ ಕಬಡ್ಡಿ ಬೆಳವಣಿಗೆಗೆ ಇನ್ನಷ್ಟು ಕೊಡುಗೆ ನೀಡಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.