ಫುಟ್ಬಾಲ್ ದಂತಕಥೆ ಅರ್ಜೆಂಟೀನಾದ ಡಿಗೊ ಮರಡೋನಾ ಇನ್ನಿಲ್ಲ/ 1986ರ ವಿಶ್ವಕಪ್ ನ ಆಟವನ್ನು ಯಾವ ಫುಟ್ಬಾಲ್ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ/ ಹೃದಯಾಘಾತದಿಂದ ದಿಗ್ಗಜ ಆಟಗಾರ ನಿಧನ/ ಅರ್ಜೆಂಟೀನಾ ಮಾಧ್ಯಮಗಳ ವರದಿ
ಅರ್ಜಂಟೇನಾ(ನ. 25): ಫುಟ್ಬಾಲ್ ದಂತಕಥೆ ಅರ್ಜೆಂಟೀನಾದ ಡಿಗೊ ಮರಡೋನಾ(60) ಇನ್ನು ನೆನಪು ಮಾತ್ರ. ಹೃದಯಾಘಾತ ಕಾಲುಚೆಂಡು ಜಗತ್ತಿನ ಚೇತನವೊಂದನ್ನು ಕೊಂಡೊಯ್ದಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಲಾ ಪ್ಲಾಟಾದಲ್ಲಿನ ಇಪೆನ್ಸಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಹಿಂದಿರುಗಿದ್ದರು. ಆದರೆ ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅರ್ಜೇಂಟೀನಾ ಮಾಧ್ಯಮಗಳು ವರದಿ ಮಾಡಿವೆ.
ಇದೇನಿದು, ಫುಟ್ಬಾಲ್ ಮೈದಾನದಲ್ಲಿ ಶಿರಚ್ಛೇದ
1986ರ ವಿಶ್ವಕಪ್ ನ ಆಟವನ್ನು ಯಾವ ಫುಟ್ಬಾಲ್ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ. ತಮ್ಮ ಮನೆಯಲ್ಲೆ ದಿಗ್ಗಜನಿಗೆ ಹೃದಯಾಘಾತವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ನಾಪೋಲಿ ಮತ್ತು ಬಾರ್ಸೀಲೋನಾದ ಪರವಾಗಿ ಅವರು ಆಡಿದ ಪಂದ್ಯಗಳು ಇಂದಿಗೂ ಕತೆ ಹೇಳುತ್ತವೆ. ಆರೋಗ್ಯ ಸಮಸ್ಯೆ, ತೂಕ ಹೆಚ್ಚಳ ಅವರನ್ನು ಕಾಡುತ್ತಲೇ ಬಂದಿತ್ತು.
ಒಂದು ಕಾಲದ ಯುವಕರ ಕಣ್ಮಣಿಯಾಗಿದ್ದ ಆಟಗಾರನ ಸ್ಟೈಲ್ ಸಹ ಅಂದಿನ ಫ್ಯಾಷನ್ ಆಗಿತ್ತು. ವಿಶ್ವದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದರು. ಪೀಲೇ ಮತ್ತು ಮರಡೋನಾ ನಡುವೆ ಹೋಲಿಕೆ ಮಾಡಿ ಮಾತನಾಡಲಾಗುತ್ತಿತ್ತು.
ಮರಡೋನಾ ಅಗಲಿಕೆಗೆ ದಿಗ್ಗಜ ಪೀಲೇ ಸಂತಾಪ ಸೂಚಿಸಿದ್ದು, ನಾವಿಬ್ಬರು ಒಂದೇ ದಿನ ಒಂದೇ ಕಡೆ ಚೆಂಡನ್ನು ಆಕಾಶಕ್ಕೆ ಚಿಮ್ಮಿಸಬೇಕು ಎಂಬ ಆಸೆ ಇತ್ತು. ದಿಗ್ಗಜನ ಅಗಲಿಕೆಗೆ ಏನೂ ಹೇಳಬೇಕು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 25, 2020, 10:59 PM IST