ನ್ಯೂಯಾರ್ಕ್(ಆ.15): ಅಮೆರಿಕದ ಖ್ಯಾತ ಬಾಸ್ಕೆಟ್‌ಬಾಲ್‌ ಆಟಗಾರ ಮೈಕೆಲ್‌ ಜೋರ್ಡನ್‌ ಅವರು ಬಳಸಿದ ಶೂ ಹರಾಜೊಂದರಲ್ಲಿ ಬರೋಬ್ಬರಿ 4.6(6,15,00) ಕೋಟಿ ರು.ಗೆ ಮಾರಾಟವಾಗಿದೆ. 

ಕ್ರಿಸ್ಟೀಸ್‌ ಆಕ್ಷನ್‌ ಹೌಸ್‌ನಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಮೊತ್ತಕ್ಕೆ ಮೈಕೆಲ್‌ ಅವರ ಶೂ ಮಾರಾಟವಾಗಿದೆ. ಇದರೊಂದಿಗೆ ಅವರದ್ದೇ ಹೆಸರಿನಲ್ಲಿದ್ದ(5,60,000) ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಕಪ್ಪು ಮತ್ತು ಕೆಂಪು ಬಣ್ಣಗಳಿಂದ ಕೂಡಿದ ಶೂನಲ್ಲಿ ಮೈಕೆಲ್ ಜೋರ್ಡನ್ 30 ಅಂಕ ಕಲೆಹಾಕಿದ್ದರು.  

ಐಪಿಎಲ್‌ ಪ್ರಾಯೋಜಕತ್ವಕ್ಕೆ ಬೆಂಗಳೂರು ಕಂಪನಿ ಅರ್ಜಿ..!

ಶೂನ ಸೋಲ್‌ಗೆ ಗ್ಲಾಸ್‌ ಬಳಸಲಾಗಿದೆ ಎಂದು ಕ್ರಿಸ್ಟೀಸ್‌ ಶೂ ಮಾರಾಟ ವಿಭಾಗದ ಮುಖ್ಯಸ ಕ್ಯಾಟ್ಲಿನ್‌ ದೊನೊವನ್‌ ತಿಳಿಸಿದ್ದಾರೆ. ಮೈಕೆಲ್‌ ಅವರು ಚಿಕಾಗೋ ಬುಲ್ಸ್‌ ತಂಡಕ್ಕೆ ಆಡುವಾಗ ಬಳಸಿದ ಕಪ್ಪು ಮತ್ತು ಕೆಂಪು ಬಣ್ಣಗಳಿಂದ ಕೂಡಿದ 13.5 ಸೈಜಿನ ಶೂ ಇದಾಗಿದೆ.