* ತಾಲಿಬಾನಿಗಳ ಭೀತಿಯಿಂದ ಆಫ್ಘಾನಿಸ್ತಾನ ತೊರೆದ ಮಹಿಳಾ ಫುಟ್ಬಾಲ್ ತಂಡ* ಅಫ್ಘಾನ್‌ನಿಂದ ಸುರಕ್ಷಿತವಾಗಿ ಆಸ್ಟ್ರೇಲಿಯಾ ತಲುಪಿದ ಮಹಿಳಾ ತಂಡ* ಆಫ್ಘಾನ್ ಮಹಿಳಾ ಫುಟ್ಬಾಲ್ ತಂಡವನ್ನು 2007ರಲ್ಲಿ ರಚಿಸಲಾಗಿತ್ತು.
ಕಾಬೂಲ್(ಆ.25): ತಾಲಿಬಾನ್ ಆಡಳಿತ ಅಫ್ಘಾನಿಸ್ತಾನದ ಮಹಿಳೆಯರಿಗೆ ಕಂಟಕವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರು ದೇಶ ತೊರೆದು ಆಸ್ಪ್ರೇಲಿಯಾಗೆ ವಲಸೆ ಹೋಗಿದ್ದಾರೆ.
ಆಸ್ಪ್ರೇಲಿಯಾ ಸರ್ಕಾರದ ಸ್ಥಳಾಂತರ ಕಾರ್ಯಾಚರಣೆಯ ವಿಮಾನದಲ್ಲಿ ಆಟಗಾರ್ತಿಯರು, ಅವರ ಕುಟುಂಬಸ್ಥರು, ಅಧಿಕಾರಿಗಳು ಸೇರಿ 75ಕ್ಕೂ ಹೆಚ್ಚು ಜನರನ್ನು ಮಂಗಳವಾರ ಕಾಬೂಲ್‌ನಿಂದ ಸ್ಥಳಾಂತರಿಸಲಾಗಿದೆ. ‘ಆಟಗಾರ್ತಿಯರು ಅಪಾಯದಲ್ಲಿದ್ದರು. ಅವರ ನೆರವಿಗೆ ಧಾವಿಸಿದ ಆಸ್ಪ್ರೇಲಿಯಾ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಧನ್ಯವಾದಗಳು’ ಎಂದು ಜಾಗತಿಕ ಫುಟ್ಬಾಲ್ ಆಟಗಾರರ ಸಂಘ ತಿಳಿಸಿದೆ.
ಕಾಬೂಲ್‌ನಿಂದ ಉಕ್ರೇನ್ ವಿಮಾನ ಹೈಜಾಕ್, 2 ದಿನ ಬಳಿಕ ಸತ್ಯ ಬಿಚ್ಚಿಟ್ಟ ಸಚಿವ!
ಮಹಿಳಾ ಫುಟ್ಬಾಲ್ ತಂಡವನ್ನು 2007ರಲ್ಲಿ ರಚಿಸಲಾಗಿತ್ತು. ಆದರೆ ಮಹಿಳೆಯರು ಆಡುವುದು ತಾಲಿಬಾನ್ ನಿಯಮಕ್ಕೆ ವಿರುದ್ಧವಾಗಿದ್ದು, ಹೀಗಾಗಿ ಅಪಾಯದಲ್ಲಿದ್ದ ಆಟಗಾರ್ತಿಯರು ಆಸ್ಪ್ರೇಲಿಯಾಗೆ ವಲಸೆ ಹೋಗಿದ್ದಾರೆ.
