ಪನ್ನೀರ್ ಡಿಶ್‌ಗೆ 3 ಸಾವಿರ ಪೇ ಮಾಡಿದ ಯೂಟ್ಯೂಬರ್! ನೆಟ್ಟಿಗರು ದಂಗು
ಒಂದು ರೊಟ್ಟಿಗೆ 20-30 ರೂಪಾಯಿ ನೀಡೋದೆ ಕಷ್ಟ. ಹಾಗಿರುವಾಗ ಈ ಯೂಟ್ಯೂಬರ್ 400 ರೂಪಾಯಿ ನೀಡಿದ್ದಾನೆ. ಅಷ್ಟೇ ಅಲ್ಲ ಪನ್ನೀರ್ ಮಖಾನಿಗೆ ಆತ ನೀಡಿದ ಹಣ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಭಾರತೀಯ ಯೂಟ್ಯೂಬರ್ (Indian YouTuber )ಒಬ್ಬರ ಹೋಟೆಲ್ ಬಿಲ್ (Hotel Bill) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ಪನೀರ್ ಮಖಾನಿಗೆ ನೀಡಿದ ಹಣ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಯೂಟ್ಯೂಬರ್ ಪೋಸ್ಟ್ ಮಾಡಿದ ಹೋಟೆಲ್ ಬಿಲ್ ಪ್ರಕಾರ, ಪನ್ನೀರ್ ಮಖಾನಿ (Panneer Makhani) ಬೆಲೆ 3,000 ರೂಪಾಯಿ ಅಂತ ತೋರಿಸಲಾಗಿದೆ. ಯೂಟ್ಯೂಬರ್ ದುಬಾರಿ ಬೆಲೆಗೆ ಆಹಾರ ಸೇವನೆ ಮಾಡಿದ್ರೂ ಹೋಟೆಲ್ ದರವನ್ನು ತೆಗಳಲಿಲ್ಲ. ಸೇವಾ ಶುಲ್ಕವನ್ನು ಹೋಟೆಲ್ ವಿಧಿಸಿಲ್ಲ ಎನ್ನುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಯಾವ ಯುಟ್ಯೂಬರ್ ಐದು ಡಿಶ್ ಗೆ 10 ಸಾವಿರಕ್ಕಿಂತ ಹೆಚ್ಚು ಹಣ ಪಾವತಿ ಮಾಡಿದ್ದು ಎಂಬ ಮಾಹಿತಿ ಇಲ್ಲಿದೆ.
ದುಬಾರಿ ರೆಸ್ಟೋರೆಂಟ್ ಬಿಲನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿ, ಪ್ರಸಿದ್ಧ ಯೂಟ್ಯೂಬರ್ ಇಶಾನ್ ಶರ್ಮಾ (Ishaan Sharma). ಅವರು ತಮ್ಮ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ನಲ್ಲಿ ಆಹಾರ ಬಿಲ್ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕಮೆಂಟ್ ಸುರಿಮಳೆಗೈದಿದ್ದಾರೆ. ಇಶಾನ್ ಶರ್ಮಾ, ರೆಸ್ಟೋರೆಂಟ್, ಟೇಕ್ ನೋಟ್ ಅಂತ ಶೀರ್ಷಿಕೆ ಹಾಕಿ, ಬಿಲ್ ಫೋಟೋ ಪೋಸ್ಟ್ ಮಾಡಿದ್ದಾರೆ.
ಯುವ ರೈತನ ಕೈ ಹಿಡಿದ ಚಂದ್ರಬಾಳೆ ಕೃಷಿ: 4 ಎಕರೆ ಭೂಮಿಯಲ್ಲಿ 35 ಲಕ್ಷ ಸಂಪಾದನೆ
ಇಶಾನ್ ಶರ್ಮಾ ಬಿಲ್ ನಲ್ಲಿ ಪನೀರ್ ಖುರ್ಚನ್, ದಾಲ್ ಬುಖಾರಾ, ಪನೀರ್ ಮಖಾನಿ, ಖಾಸ್ತಾ ರೋಟಿ ಮತ್ತು ಪುದಿನಾ ಪರಾಠಾವನ್ನು ನೀವು ಕಾಣ್ಬಹುದು. ಈ ಐದು ಐಟಂಗೆ ಈ ಇಶಾನ್ ಶರ್ಮಾ ಒಟ್ಟೂ 10,030 ರೂಪಾಯಿ ಪಾವತಿಸಿದ್ದಾರೆ. ಪನ್ನೀರ್ ನ ಎಲ್ಲ ಡಿಶ್ ಬೆಲೆ 3000ಕ್ಕೆ ಹತ್ತಿರವಾಗಿದೆ. ಪದೀನಾ ಪರಾಠಾ ಬೆಲೆ 1125 ರೂಪಾಯಿ. ಬಿಲ್ ಕೆಳಗೆ ನಾವು ಯಾವುದೇ ಸರ್ವಿಸ್ ಚಾರ್ಜ್ ತೆಗೆದುಕೊಂಡಿಲ್ಲ ಎಂದು ಬರೆಯಲಾಗಿದೆ. ಶರ್ಮಾ ರೆಸ್ಟೋರೆಂಟ್‌ನ ಬೆಲೆ ಬಗ್ಗೆ ಏನೂ ಕಮೆಂಟ್ ಮಾಡಿಲ್ಲ. ಆದ್ರೆ ಸಾಮಾಜಿಕ ಜಾಲತಾಣ ಬಳಕೆದಾರರು ಮಾತ್ರ ಹೋಟೆಲ್ ಜೊತೆ ಶರ್ಮಾ, ಐಷಾರಾಮಿ ಬದುಕನ್ನು ಟೀಕಿಸಿದ್ದಾರೆ. ಇಷ್ಟು ಹಣಕೊಟ್ಟು ಪನ್ನೀರ್ ಡಿಶ್ ಸೇವನೆ ಮಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಅನೇಕ ಬಳಕೆದಾರರು ಬೆಲೆಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪನೀರ್ ಮಖಾನಿಗೆ 2,900 ರೂಪಾಯಿ ಎಂಬುದನ್ನು ಅವರಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ಇನ್ನು ಮೂರು ಪರಾಠಾಗೆ 1,125 ರೂಪಾಯಿ ನೀಡ್ಬೇಕಾ, ಒಂದು ರೊಟ್ಟಿಗೆ 400 ರೂಪಾಯಿ ನೀಡಲು ತಲೆಕೆಟ್ಟಿದ್ಯಾ ಎನ್ನುತ್ತಿದ್ದಾರೆ ಬಳಕೆದಾರರು.
ವಿಶ್ವದ ಟಾಪ್ 100 ಆಹಾರಗಳಲ್ಲಿ ಸ್ಥಾನ ಪಡೆದ ಭಾರತದ 4 ಖಾದ್ಯಗಳು
ಪನ್ನೀರ್ ಮಖಾನಿಗೆ ನೀಡಿದ ಹಣದಲ್ಲಿ ದರ್ಬಾಂಗ್ ವಿಶ್ವವಿದ್ಯಾನಿಲಯದಲ್ಲಿ ನನಗೆ ಎಂಎ ಪದವಿ ಸಿಕ್ತಾ ಇತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಾಲ್ಕೈದು ಡಿಶ್ ಗೆ ಇಷ್ಟೊಂದು ಹಣ ಖರ್ಚು ಮಾಡುವ ಬದಲು ಈ ಹಣದಲ್ಲಿ ವಾರಾಂತ್ಯದ ಪ್ರವಾಸ ಅಥವಾ ಶಾಪಿಂಗ್ ಮಾಡಿ. ಇಲ್ಲವೆ ಒಂದು ಗುಣಮಟ್ಟದ ಇಯರ್ ಫೋನ್ ಖರೀದಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಡಿಶ್ ಬೆಲೆಗಳನ್ನೇ ಹೆಚ್ಚು ಮಾಡಿರುವ ಕಾರಣ ಅವರು ಸರ್ವಿಸ್ ಚಾರ್ಜ್ ತೆಗೆದುಕೊಂಡಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಇಶಾನ್ ಶರ್ಮಾ ಹೋಗಿರೋದು ಸಾಮಾನ್ಯ ರೆಸ್ಟೋರೆಂಟ್ ಅಲ್ಲ. ಹಾಗಾಗಿ ಬೆಲೆ ಇಷ್ಟೊಂದು ಜಾಸ್ತಿ ಎಂಬುದು ಕೆಲಸವರ ಅಭಿಪ್ರಾಯವಾಗಿದೆ. ದುಬಾರಿ ಹೋಟೆಲ್ ಗೆ ಹೋದ್ರೆ ಇಷ್ಟು ಬಿಲ್ ಬರೋದು ಸಾಮಾನ್ಯ, ಅದ್ರಲ್ಲಿ ವಿಶೇಷ ಏನಿದೆ ಎಂಬುದು ಮತ್ತೆ ಕೆಲವರ ವಾದವಾಗಿದೆ.
Restaurants, take note! pic.twitter.com/8jJEZxqGbg
— Ishan Sharma (@Ishansharma7390) December 13, 2024