Kitchen Hacks: ಕಟ್ ಮಾಡಿದ ಹಣ್ಣು, ತರಕಾರಿ ಹಾಳಾಗುತ್ತೆ ಅನ್ನೋ ಭಯ ಇನ್ನಿಲ್ಲ
ತರಕಾರಿ (Vegetable) ಕಟ್ ಮಾಡಿ ಆಗಿದೆ. ಅಷ್ಟರಲ್ಲೇ ಫುಡ್ (Food) ಆರ್ಡರ್ ಮಾಡಿ ಬಿಟ್ರು. ತಿನ್ನೋಕೆ ಅಂತ ಹಣ್ಣು ಕಟ್ ಮಾಡಿಟ್ರೆ ತಿನ್ನೋರೆ ಇಲ್ಲ. ಹೀಗಿದ್ದಾಗ ಇದನ್ನೆಲ್ಲಾ ಈಗ ಎಸಿಯೋದಾ ಅನ್ನೋ ಟೆನ್ಶನ್ ಬೇಡ. ಝಿಪ್ಪರ್ ಬ್ಯಾಗ್ (Zipper Bag)ಗಳನ್ನು ಬಳಸಿ ಕತ್ತರಿಸಿಟ್ಟ ಹಣ್ಣು, ತರಕಾರಿಗಳನ್ನು ತಾಜಾವಾಗಿಡಬಹುದು.
ಕೊರೋನಾ (Coorna) ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದಲೂ ಎಲ್ಲರೂ ಆಹಾರದ ಮಹತ್ವವನ್ನು ಅರಿತಿದ್ದಾರೆ. ಆಹಾರ (Food)ವನ್ನು ವ್ಯರ್ಥ ಮಾಡಬಾರದು, ಯಾವ ರೀತಿ ತೆಗೆದಿಡಬಹುದು, ಮತ್ತೆ ತಿನ್ನಬಹುದು ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಅಡುಗೆ ಮನೆಯಲ್ಲಿ ತರಕಾರಿ, ಹಣ್ಣು, ಆಹಾರಗಳನ್ನು ತೆಗೆದಿಡಲು ನೆರವಾಗುವ ಝಿಪ್ಪರ್ ಬ್ಯಾಗ್ (Zipper Bag)ಬಗ್ಗೆ ನಾವು ತಿಳಿಸ್ತೀವಿ. ಈ ಚೀಲಗಳು ಉಳಿದ ಆಹಾರವನ್ನು ಆರೋಗ್ಯಕರವಾಗಿ ತೆಗೆದಿಡಲು ಸಹಾಯ ಮಾಡುತ್ತವೆ. ಇದರಿಂದ ನೀವು ಕತ್ತರಿಸಿದ ತರಕಾರಿ, ಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳಬಹುದು. ಈ ಝಿಪ್ಪರ್ ಬ್ಯಾಗ್‌ಗಳನ್ನು ನೀವು ಬಳಸಬಹುದಾದ ಕೆಲವು ಸುಲಭ ವಿಧಾನಗಳು ಇಲ್ಲಿವೆ.
ಹಣ್ಣು, ತರಕಾರಿ (Vegetable)ಗಳನ್ನು ಬ್ಯಾಗ್‌ನಲ್ಲಿ ತೆಗೆದಿಡಬಹುದು
ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಬ್ರಾಂಡ್‌ಗಳು ತಮ್ಮ ಜಿಪ್‌ಲಾಕ್ ಬ್ಯಾಗ್‌ಗಳಿಂದ ಆಹಾರವು ಚೆಲ್ಲುವುದಿಲ್ಲ ಎಂದು ಖಾತರಿಪಡಿಸುತ್ತದೆ. ಹೀಗಾಗಿ, ಟೇಬಲ್‌ನಲ್ಲಿಟ್ಟರೆ ಹಣ್ಣು (Fruit)ಗಳಿಗೆ ನೊಣಗಳು ಬಂದು ಕುಳಿತುಕೊಳ್ಳುತ್ತವೆ ಎಂಬ ಚಿಂತೆಯಿಲ್ಲ. ಈ ಝಿಪ್ಪರ್ ಬ್ಯಾಗ್‌ನಲ್ಲಿ ಹಣ್ಣುಗಳನ್ನು ತೆಗೆದಿಟ್ಟರೆ ಅವು ದೀರ್ಘಕಾಲ ತಾಜಾವಾಗಿರುತ್ತವೆ. ಈ ಬ್ಯಾಗ್‌ನಲ್ಲಿ ನೀಟಾಗಿ ಕತ್ತರಿಸಿದ ಹಣ್ಣುಗಳನ್ನು ಸಹ ಇಡಬಹುದು. ಇದರಿಂದ ಅವಸರದ ಸಂದರ್ಭದಲ್ಲಿ ಸುಲಭವಾಗಿ ಪ್ಲೇಟ್ ಹಾಕಿಕೊಂಡು ತಿನ್ನಬಹುದು, ಆಫೀಸಿಗೆ ಸಹ ಹೋಗುವ ಅರ್ಜೆಂಟ್‌ನಲ್ಲಿದ್ದಾಗ ಸುಲಭವಾಗಿ ಬಾಕ್ಸ್‌ಗೆ ತುಂಬಿಸಿ ಕೊಂಡೊಯ್ಯಬಹುದು.
Kitchen Tips: ಮನೇಲಿ ಫ್ರಿಡ್ಜ್ ಇಲ್ವಾ ? ಪರ್ವಾಗಿಲ್ಲ ಹೀಗಿಟ್ರೂ ಹಣ್ಣು, ತರಕಾರಿ ಫ್ರೆಶ್ ಆಗಿರುತ್ತೆ
ತರಕಾರಿಗಳನ್ನು ದೀರ್ಘಕಾಲದ ವರೆಗೆ ತಾಜಾವಾಗಿರಿಸಿ
ಕೊತ್ತಂಬರಿ ಸೊಪ್ಪು, ಪುದೀನ ಎಲೆಗಳು, ಮೆಂತ್ಯೆ ಎಲೆಗಳು, ಪಾಲಕ್ ಅಥವಾ ಸ್ಪ್ರಿಂಗ್ ಓನಿಯನ್ ಸೇರಿದಂತೆ ಸೊಪ್ಪು ತರಕಾರಿಗಳು ಸಾಮಾನ್ಯವಾಗಿ ಫ್ರಿಜ್‌ನಲ್ಲಿಟ್ಟರೂ ಹಾಳಾಗುತ್ತವೆ. ಹೀಗಾಗಿ ದೀರ್ಘಕಾಲ ದವರೆಗೆ ಅವುಗಳನ್ನು ತಾಜಾ (Fresh)ವಾಗಿಡಲು, ತಂದ ಕೂಡಲೇ ಒಂದು ಪೇಪರ್ನ ಮೇಲೆ ಅವನ್ನು ಹರಡಿ ಬಿಡಿಸಿಟ್ಟುಕೊಳ್ಳಿ. ಅದರ ಮೇಲೆ ನೀರು ಚಿಮುಕಿಸಿ. ನೀರು ಒಣಗಿದ ನಂತರ ಝಿಪ್ಪರ್ ಚೀಲದಲ್ಲಿ ಇರಿಸಿ ಮತ್ತು ರೆಫ್ರಿಜರೇಟರ್ನಲ್ಲಿ ಇರಿಸಿ.
ಮಾಂಸಾಹಾರವನ್ನು ಸಂಗ್ರಹಿಸುವುದು
ಫ್ರೀಜ್ ಮಾಡಿದರೂ ಮಾಂಸಾಹಾರವನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಕಷ್ಟವಾಗುತ್ತದೆ. ಆದರೆ, ಜಿಪ್‌ಲಾಕ್ ಬ್ಯಾಗ್‌ಗಳಲ್ಲಿ ಬಳಸಲಾಗುತ್ತಿರುವ ಸುಧಾರಿತ ತಂತ್ರಜ್ಞಾನಗಳು ಮಾಂಸವನ್ನು ತಾಜಾವಾಗಿರಿಸುತ್ತದೆ. ಅದರ ವಾಸನೆಯನ್ನು ಲಾಕ್ ಮಾಡುವ ಮೂಲಕ ಅಡುಗೆಮನೆಗೆಯನ್ನು ಸಹ ತಾಜಾವಾಗಿಡುತ್ತದೆ. ಹೀಗಾಗಿ ತಾಜಾ, ವಾಸನೆಮುಕ್ತವಾಗಿ ಮಾಂಸವನ್ನು ಸಂಗ್ರಹಿಸಿಡಲು ಝಿಪ್ಪರ್ ಬ್ಯಾಗ್‌ಗಳನ್ನು ಬಳಸಿ.
Varieties Of Cauliflower: ಕಲರ್ ಕಲರ್ ಹೂಕೋಸು ನೋಡಿದ್ದೀರಾ ?
ಫ್ರಿಜ್‌ನಲ್ಲಿ ಕಡಿಮೆ ಜಾಗ ಸಾಕಾಗುತ್ತದೆ
ಫ್ರಿಜ್‌ನಲ್ಲಿ ಸಾಮಾನ್ಯವಾಗಿ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಹಣ್ಣು, ತರಕಾರಿಗಳನ್ನು ತುಂಬಿಸಿಡಲಾಗುತ್ತದೆ. ಉಳಿದ ಆಹಾರವನ್ನು ತುಂಬಿಸಿಡಲು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸುತ್ತಾರೆ. ಆದರೆ ಈ ರೀತಿಯ ಕಂಟೇನರ್‌ಗಳು ಹಾಗೂ ಡಬ್ಬಗಳು ಫ್ರಿಜ್‌ನಲ್ಲಿ ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಫ್ರಿಜ್‌ನಲ್ಲಿ ಇವುಗಳ ಬದಲು ಝಿಪ್ಪರ್ ಚೀಲಗಳಲ್ಲಿ ಹಣ್ಣುಗಳನ್ನು, ತರಕಾರಿಗಳನ್ನು, ಆಹಾರವನ್ನು ತೆಗೆದಿಡಬಹುದು. ಈ ಮೂಲಕ ಫ್ರೀಜರ್ನಲ್ಲಿ ಹೆಚ್ಚು ಜಾಗವನ್ನು ಉಳಿಸಬಹುದು. ಝಿಪ್ಪರ್ ಬ್ಯಾಗ್‌ಗಳಲ್ಲಿ ದ್ರವ ರೂಪದ ವಸ್ತುವನ್ನು ತೆಗೆದಿಡಬಹುದಾದ ಕಾರಣ ಗ್ರೇವಿ, ಸೂಪ್ಪನ್ನು ತೆಗೆದಿಡುವುದಕ್ಕೂ ತೊಂದರೆಯೇನಿಲ್ಲ.
ಕೇಕ್‌ಗಳನ್ನು ಬ್ಯಾಗ್‌ನಲ್ಲಿ ತೆಗೆದಿಡಿ
ಕಪ್ ಕೇಕ್‌ಗಳನ್ನು ಝಿಪ್ಪರ್ ಬ್ಯಾಗ್‌ನಲ್ಲಿ ನೀಟಾಗಿ ತೆಗೆದಿಡಬಹುದು. ಇದಕ್ಕೆ ಝಿಪ್ಪರ್ ಬ್ಯಾಗ್ ಮತ್ತು ಒಂದು ಜೋಡಿ ಕತ್ತರಿ ಮಾತ್ರ ಬೇಕಾಗುತ್ತದೆ. ಕಪ್ ಕೇಕ್ ಅಚ್ಚುಗಳನ್ನು ತುಂಬಲು, ಬ್ಯಾಗ್ ನ್ನು ಅರ್ಧ ಕತ್ತರಿಸಿ, ಕೇಕ್ನ್ನು ಒಳಗೆ ಇರಿಸಿ, ಮೇಲಿನಿಂದ ಅದನ್ನು ಸುತ್ತಿಕೊಳ್ಳಿ, ಮೂಲೆಯಿಂದ ಸ್ವಲ್ಪ ದಪ್ಪವಾದ ಭಾಗವನ್ನು ಕತ್ತರಿಸಿ ಮತ್ತು ಸುಲಭವಾಗಿ ಅಚ್ಚುಗಳನ್ನು ತುಂಬಿಸಿ, ತೆಗೆದಿಡಬಹುದಾಗಿದೆ.
ಝಿಪ್ಪರ್ ಬ್ಯಾಗ್‌ನ ಇತರ ಉಪಯೋಗಗಳು
ಝಿಪ್ಪರ್ ಬ್ಯಾಗ್ ಸರಳವಾದ ಮನೆಯ ವಸ್ತುವಾಗಿ ಕಂಡುಬಂದರೂ, ಅದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು. ಖಾರದ ಪದಾರ್ಥಗಳು, ಒಣ ಹಣ್ಣುಗಳು, ಮೇಲೋಗರಗಳು, ಪೂರಿಗಳು ಮತ್ತು ಮಾಂಸವನ್ನು ಸಂಗ್ರಹಿಸಬಹುದು. ಪ್ರಯಾಣದ ಸಂದರ್ಭದಲ್ಲಿ ಆಹಾರವನ್ನು ಕೊಂಡೊಯ್ಯಲು ಇದು ಅತ್ಯುತ್ತಮ. ಈ ಚೀಲಗಳಲ್ಲಿಒಣ ಮಸಾಲೆ ಪುಡಿಗಳನ್ನು ಶೇಖರಿಸಿಡಬಹುದು, ಆಭರಣಗಳನ್ನು ತೆಗೆದಿಡಬಹುದು. ಮಾತ್ರವಲ್ಲ ಪ್ರಯಾಣದ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು, ಔಷಧಿಗಳನ್ನು ಸಹ ಕೊಂಡೊಯ್ಯಲು ಇದರಿಂದ ಸುಲಭವಾಗುತ್ತದೆ.