Aeroponic Agriculture: ಮಣ್ಣಿನಡಿ ಮಾತ್ರವಲ್ಲ, ಗಾಳಿಯಲ್ಲೂ ಬೆಳೆಯುತ್ತೆ ಆಲೂಗಡ್ಡೆ!

ಮನೆಯಲ್ಲೇ ಶುದ್ಧ ತರಕಾರಿ ಬೆಳೆದುಕೊಳ್ಳಬೇಕೆಂಬ ಆಸಕ್ತಿ ನಿಮಗಿದೆಯೇ? ಹಾಗಿದ್ದರೆ ಇದೀಗ ಸುಲಭವಾಗಿ ಆಲೂಗಡ್ಡೆ ಬೆಳೆದುಕೊಳ್ಳುವ ಅವಕಾಶವಿದೆ. ಏರೋಫೋನಿಕ್ಸ್‌ ಅಥವಾ ವಾಯುಕೃಷಿ ಮೂಲಕ ಸುಲಭವಾಗಿ ಮನೆಯಲ್ಲೇ ಆಲೂಗಡ್ಡೆಯನ್ನು ಬೆಳೆದುಕೊಂಡು ನಗರ ಕೃಷಿಕರಾಗಬಹುದು. 
 

You can grow potato in air also by aeroponics know about this farming

ಸಾಮಾನ್ಯವಾಗಿ ನಗರ ಪ್ರದೇಶದ ಜನರಿಗೆ ಮನೆಯಲ್ಲೇ ಏನಾದರೂ ತರಕಾರಿ (Vegetable), ಸೊಪ್ಪುಗಳನ್ನು ಬೆಳೆದುಕೊಂಡು ಸೇವಿಸಬೇಕೆಂಬ ಆಸೆ ಇರುತ್ತದೆ. ನಿಮಗೂ ಅಂತಹ ಆಸೆ ಇದ್ದರೆ ಇದೀಗ ಸುಲಭವಾಗಿ ಆಲೂಗಡ್ಡೆಯನ್ನು (Potato) ಬೆಳೆದುಕೊಳ್ಳಬಹುದು. ಅಂತಹ ವಿಧಾನವೊಂದು ನಿಧಾನವಾಗಿ ಜನಪ್ರಿಯವಾಗುತ್ತಿದೆ. ಸಾಂಪ್ರದಾಯಿಕ ಕೃಷಿ (Agriculture) ವಿಧಾನಗಳನ್ನು ಚಿಕ್ಕಪುಟ್ಟ ಸ್ಥಳಗಳಲ್ಲಿ ಅನುಸರಿಸಲು ಸಾಧ್ಯವಿಲ್ಲ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಜಲಕೃಷಿ (Hydroponics), ವಾಯುಕೃಷಿಗಳೆಲ್ಲ ಚಾಲ್ತಿಗೆ ಬರುತ್ತಿವೆ. ನಿಮಗೆ ಗೊತ್ತೇ ಇರಬಹುದು. ಇತ್ತೀಚಿನ ವರ್ಷಗಳಲ್ಲಿ ಜಲಕೃಷಿಯ ಮೂಲಕ ಸಾಕಷ್ಟು ಜನರು ಹಸಿರು ಸೊಪ್ಪುಗಳನ್ನು ತಾವೇ ಬೆಳೆದುಕೊಳ್ಳುತ್ತಿದ್ದಾರೆ. ಈ ವಿಧಾನದಲ್ಲಿ ಕೇವಲ ಜಲವೊಂದರಲ್ಲಿಯೇ ಕೆಲವು ವಿಧದ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಯಲು ಸಾಧ್ಯ. ಹಾಗೂ ಇದು ಸಾಕಷ್ಟು ಮಟ್ಟಿಗೆ ಜನಪ್ರಿಯವೂ ಆಗಿದೆ. 
ಜಲಕೃಷಿಯಂತೆಯೇ ವಾಯುಕೃಷಿ ಕೂಡ ಮಣ್ಣಿಲ್ಲದೆ ಮಾಡುವ ಕೃಷಿ ವಿಧಾನ. ಇಲ್ಲಿಯೂ ಫಸಲು (Crop) ಹುಲುಸಾಗಿ ಹಾಗೂ ವೇಗವಾಗಿ ಬೆಳೆಯುತ್ತದೆ. ಮಿತವಾದ ನೀರಿನ (Water) ಬಳಕೆಯೊಂದಿಗೆ ಈ ವಿಧಾನವನ್ನು ಅನುಸರಿಸಲಾಗುತ್ತದೆ. ಮಣ್ಣಿನೊಳಗೆ ಬೆಳೆಯುವ ಆಲೂಗಡ್ಡೆಯನ್ನೇ ಇದರ ಮೂಲಕ ಬೆಳೆದುಕೊಳ್ಳಬಹುದು ಎಂದರೆ ನಿಮಗೆ ಅಚ್ಚರಿಯಾಗಬಹುದು. 

ಹರಿಯಾಣದ (Haryana) ಕರ್ನಲ್‌ (Karnal) ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ತಾಂತ್ರಿಕ (Technique) ವಿಧಾನದ ಕೇಂದ್ರವಿದೆ. ಇಲ್ಲಿ ಮಾಡಿರುವ ಪ್ರಯೋಗದಲ್ಲಿ ಆಲೂಗಡ್ಡೆ ಬೆಳೆ ಸಾಕಷ್ಟು ಉತ್ತಮವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕೃಷಿ ವಿಭಾಗ ರೈತರಲ್ಲಿ (Farmer) ಈ ಕುರಿತು ಅರಿವು ಮೂಡಿಸಲು ಹಾಗೂ ಇತರೆ ರಾಜ್ಯಗಳಲ್ಲಿ ಪ್ರಚಾರ ನಡೆಸಲು ತೀರ್ಮಾನಿಸಿದೆ.  ಏರೋಪೋನಿಕ್ಸ್‌ ವಿಧಾನದಿಂದ ಹಲವಾರು ಲಾಭಗಳಿವೆ. ಮೊದಲನೆಯದಾಗಿ, ಈ ಕೃಷಿಗೆ ವಿಸ್ತಾರವಾದ ಭೂಮಿಯಿಲ್ಲ ಎನ್ನುವ ಕೊರತೆ ಬಾಧಿಸುವುದಿಲ್ಲ. ಕಡಿಮೆ ನೀರು ಸಾಕು ಹಾಗೂ ಹತ್ತು ಪಟ್ಟು ಬೆಳೆ ಸಿಗುತ್ತದೆ. ಹಾಗೂ ಹೆಚ್ಚು ಕೆಲಸಗಾರರ ಅಗತ್ಯವಿಲ್ಲದೆ ಬೆಳೆದುಕೊಳ್ಳಲು ಸಾಧ್ಯ.

ದೇಸೀ ಹೈನೋದ್ಯಮದಲ್ಲಿ ಸಾಧನೆ ಮಾಡಿದ ಕುಮಾರ್

ಕೃಷಿ ತಜ್ಞ ಅನಿಲ್‌ ಥಡಾನಿ (Anil Thadani) ಎನ್ನುವವರ ಪ್ರಕಾರ, ಏರೋಪೋನಿಕ್‌ ಆಲೂಗಡ್ಡೆ ಕೃಷಿ ವಿಧಾನದಲ್ಲಿ ಸಸ್ಯಗಳಿಗೆ ಬೇಕಾಗುವ ಪೌಷ್ಟಿಕಾಂಶಗಳನ್ನು ತೂಗಾಡುವ ಬೇರುಗಳ ಮೂಲಕ ನೀಡಲಾಗುವುದು. ಇದರ ಮೂಲಕ ಬೀಜಕ್ಕಾಗಿ ಬಿಡುವ ಆಲೂಗಡ್ಡೆಗಳನ್ನು ಸಹ ಸಂಗ್ರಹಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಏರೋಪೋನಿಕ್‌ (ವಾಯುಕೃಷಿ) ಹಾಗೂ ಹೈಡ್ರೋಪೋನಿಕ್‌ (ಜಲಕೃಷಿ) ಎರಡೂ ತುಂಬ ಜನಪ್ರಿಯವಾಗಿವೆ. ಮಣ್ಣಿನಲ್ಲಿ ಬೆಳೆದಂತೆಯೇ ಬೆಳೆದರೂ ಅವುಗಳಲ್ಲಿ ಸಿಗುವ ಪೌಷ್ಟಿಕಾಂಶದ ಪ್ರಮಾಣ ಮಾತ್ರ ಅಗಾಧವಾಗಿರುತ್ತದೆ. 

ಆಲೂಗಡ್ಡೆಯ ವಾಯುಕೃಷಿ ಹೇಗೆ?
ಆಲೂಗಡ್ಡೆಯ ಕೃಷಿಯನ್ನು ಮುಚ್ಚಿದ ವಾತಾವರಣದಲ್ಲಿ ಮಾಡಬೇಕಾಗುತ್ತದೆ. ಸಸ್ಯಗಳು ಮೇಲ್ಮುಖವಾಗಿ, ಬೇರು(Root)ಗಳನ್ನು ಕೆಳಮುಖವಾಗಿ ಇರುತ್ತವೆ. ಅವುಗಳಲ್ಲಿ ಬುಡದಲ್ಲಿ ನೀರಿನ ಕಾರಂಜಿ(Fountain)ಯನ್ನು ಅಳವಡಿಸಬೇಕಾಗುತ್ತದೆ. ನೀರಿನೊಂದಿಗೆ ಪೌಷ್ಟಿಕಾಂಶ ಅಂದರೆ, ಸಸ್ಯದ ಬೆಳವಣಿಗೆಗೆ ಬೇಕಾಗುವ ವಿವಿಧ ಅಂಶಗಳನ್ನು ಬೆರೆಸಬೇಕು. ನೀರಿನ ಮೂಲಕ ಅವು ಬೇರುಗಳಿಗೆ ಲಭ್ಯವಾಗುತ್ತವೆ. ಮೇಲಿನಿಂದ ಸೂರ್ಯರಶ್ಮಿ ಹಾಗೂ ಕೆಳಗಿನಿಂದ ಪೌಷ್ಟಿಕಾಂಶಗಳು ದೊರೆಯುವಂತೆ ಮಾಡಬೇಕು. ಇದನ್ನು ಲಂಬ (Vertical) ಕೃಷಿ ಎಂದೂ ಹೇಳಬಹುದು.
ನೀವು ಕೈತೋಟ (Gardening) ಮಾಡುವುದರಲ್ಲಿ ನಿಪುಣರಾಗಿದ್ದರೆ ಇದರ ಪ್ರಯೋಗವನ್ನು ಆರಾಮಾಗಿ ಮಾಡಬಹುದು. ಮನೆಯಲ್ಲೇ ಆಲೂಗಡ್ಡೆ ಬೆಳೆದುಕೊಂಡು ತೃಪ್ತರಾಗಬಹುದು. ಅದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ.

•    ಮೊದಲಿಗೆ ಪಾಲಿಹೌಸ್‌ (Polyhouse) ಅಂತಹ ಸಣ್ಣ ಖಾಲಿ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. 
•    ಏರೋಪೋನಿಕ್‌ ಕೃಷಿ ವಿಧಾನದ ಕಿಟ್‌ (Kit) ಲಭ್ಯವಾಗುತ್ತದೆ. ಅದನ್ನು ತಂದು ಅಳವಡಿಸಿಕೊಳ್ಳಿ. ಈ ಸಮಯದಲ್ಲಿ ತಜ್ಞರ ಸಹಕಾರ ಪಡೆದುಕೊಳ್ಳಿ. 
•    ಆರೋಗ್ಯಕರ ಆಲೂಗಡ್ಡೆ ಸಸ್ಯಗಳನ್ನು ಸಣ್ಣ ಸಣ್ಣ ಪಾಟ್‌ ಗಳಲ್ಲಿ ನೆಡಿ. ಅವುಗಳನ್ನು ಸೂರ್ಯರಶ್ಮಿ (Sunlight) ಸಿಗುವ ಕಡೆ ನೇತುಹಾಕಿ. 
•    ಕೆಲವು ದಿನಗಳಲ್ಲಿ ಅವುಗಳಿಗೆ ಬೇರುಗಳು ಮೂಡುತ್ತವೆ. ಅವುಗಳಿಗೆ ನೀರು ತಾಗುವ ಕುರಿತು ಎಚ್ಚರಿಕೆ ವಹಿಸಿ. ನಿರ್ದಿಷ್ಟ ಅವಧಿಗೆ ಪೌಷ್ಟಿಕಾಂಶ ನೀಡಿ. 
•    70-80 ದಿನಗಳಲ್ಲಿ ಮೊದಲ ಫಸಲು ಲಭ್ಯವಾಗುತ್ತದೆ. 

ತನ್ನದೇ ಬ್ರ್ಯಾಂಡ್ ಕೃಷಿ ಉಪಕರಣ ತಯಾರಿಸಿದ ಇಮಾಮ್‌ಸಾಬ್
 

Latest Videos
Follow Us:
Download App:
  • android
  • ios