ಒಂದೇ ಒಂದು ತಿಂಗಳು ಆಲೂಗಡ್ಡೆ ತಿನ್ನೋದು ಬಿಡಿ ಸಾಕು, ಆರೋಗ್ಯ ಹೇಗಾಗುತ್ತೆ ನೋಡಿ!
ಆಲೂಗಡ್ಡೆ ನಮ್ಮ ದೇಶದ ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ತರಕಾರಿ ಪಟ್ಟೆಯಲ್ಲಿ ಮೇಲಿರುವ ಆಲೂಗಡ್ಡೆಯನ್ನ ನಾನು ಒಂದಲ್ಲ ಒಂದು ರೀತಿಯಲ್ಲಿ ದಿನ ಸೇವನೆ ಮಾಡ್ತೇವೆ. ಅದರ ಸೇವನೆ ನಿಲ್ಲಿಸಿದ್ರೆ ಏನಾಗ್ಬಹುದು ಗೊತ್ತಾ?
ಮಾರ್ಕೆಟ್ ಗೆ ಹೋದಾಗ ಯಾವ ತರಕಾರಿ ತರಲಿ ಬಿಡಲಿ ಆಲೂಗಡ್ಡೆ ಮಾತ್ರ ಬ್ಯಾಗ್ ನಲ್ಲಿ ಇದ್ದೇ ಇರುತ್ತೆ. ಅದನ್ನು ಆಪದ್ಭಾಂದವ ಅಂತಾ ಕರೆದ್ರೂ ತಪ್ಪಾಗೋದಿಲ್ಲ. ಎಲ್ಲ ತರಕಾರಿ ಜೊತೆ ಹೊಂದಿಕೊಳ್ಳುವ ಆಲೂಗಡ್ಡೆ, ಮನೆಗೆ ಅತಿಥಿಗಳು ಬಂದಾಗ ಪ್ರಮುಖ ಸ್ಥಾನ ಪಡೆಯುತ್ತದೆ. ಆಲೂಗಡ್ಡೆ ಸಾಂಬಾರ್ ನಿಂದ ಹಿಡಿದು ಆಲೂಗಡ್ಡೆ ಪಕೋಡಾ, ಆಲೂ ಬಜ್ಜಿ, ಆಲೂ ಚಿಪ್ಸ್, ಆಲೂ ಸಬ್ಜಿ ಹೀಗೆ ಆಲೂಗಡ್ಡೆಯಲ್ಲಿ ನಾವು ವೆರೈಟಿ ಫುಡ್ ಸಿದ್ಧಪಡಿಸಬಹುದು. ಬೀದಿ ಬದಿಯಲ್ಲಿ ಸಿಗುವ ಪಾನಿಪುರಿಯಿಂದ ಹಿಡಿದು ಫಾಸ್ಟ್ ಫುಡ್ ಬರ್ಗರ್ ವರೆಗೆ ಎಲ್ಲದಕ್ಕೂ ಈ ಆಲೂಗಡ್ಡೆ ಇಲ್ಲದೆ ಕೆಲಸ ಆಗಲ್ಲ.
ಅನೇಕರು ಆಲೂಗಡ್ಡೆ (Potato) ಯನ್ನು ಪ್ರತಿ ದಿನ ಸೇವನೆ ಮಾಡ್ತಾರೆ. ಆಲೂಗಡ್ಡೆ ಇಲ್ಲದ ದಿನವೇ ಇಲ್ಲ. ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಈ ತರಕಾರಿ ಇಷ್ಟವಾದ್ರೂ ಕೆಲವರು ಅದ್ರಿಂದ ದೂರ ಇರ್ತಾರೆ. ಮತ್ತೆ ಕೆಲವರು ಆಲೂಗಡ್ಡೆ ತಿಂದ್ರೆ ಅನಾರೊಗ್ಯ (Unhealthy) ಕಾಡುತ್ತೆ ಎನ್ನುವ ಕಾರಣಕ್ಕೆ ತಿಂಗಳುಗಟ್ಟಲೆ ಆಲೂಗಡ್ಡೆ ಸೇವನೆ ಮಾಡೋದಿಲ್ಲ. ಈ ಆಲೂಗಡ್ಡೆಯನ್ನು ಒಂದು ತಿಂಗಳು ಸೇವನೆ ಮಾಡದೆ ಬಿಟ್ರೆ ಏನಾಗುತ್ತೆ? ಇದಕ್ಕೆ ಉತ್ತರ ಇಲ್ಲಿದೆ. ನೀವು ಆಲೂಗಡ್ಡೆಯನ್ನು ಒಂದು ತಿಂಗಳು ತ್ಯಜಿಸಿದ್ರೆ ದೇಹದ ಮೇಲಾಗುತ್ತೆ ಈ ಪರಿಣಾಮ : ನೀವು ಆಲೂಗಡ್ಡೆಯ ಸೇವನೆಯನ್ನು ಒಂದು ತಿಂಗಳು ಬಿಟ್ರೆ ಅದ್ರಿಂದ ಸಕಾರಾತ್ಮಕ ಪರಿಣಾಮವನ್ನೇ ಕಾಣಬಹುದು ಎನ್ನುತ್ತಾರೆ ತಜ್ಞರು.
ಆನ್‌ಲೈನ್‌ನಲ್ಲಿ ಅಪ್ಪಿತಪ್ಪಿಯೂ ಈ ಫುಡ್ ಆರ್ಡರ್ ಮಾಡ್ಬೇಡಿ, ಆರೋಗ್ಯ ಕೆಡೋದು ಗ್ಯಾರಂಟಿ
ಆಲೂಗಡ್ಡೆಯಲ್ಲಿ ಪಿಷ್ಟ (Starch)ವಿದೆ. ಇದನ್ನು ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಆಲೂಗಡ್ಡೆ ಬಹಳಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಆಲೂಗಡ್ಡೆ ಸೇವನೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ದಿನವಿಡೀ ನೀವು ಉತ್ಸಾಹದಿಂದ ಕೆಲಸ ಮಾಡಬಹುದು. ಆದ್ರೆ ಆಲೂಗಡ್ಡೆಯನ್ನು ನೀವು ಹೇಗೆ ಸೇವನೆ ಮಾಡ್ತಿರಿ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಬಹುತೇಕ ಆಲೂಗಡ್ಡೆ ಆಹಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬಳಕೆ ಮಾಡಲಾಗುತ್ತದೆ. ಎಣ್ಣೆಯಲ್ಲಿ ಬೇಯಿಸಿದ ಅಥವಾ ಕರಿದ ಆಲೂಗಡ್ಡೆ ತಿನ್ನುವುದ್ರಿಂದ ಅನಾರೋಗ್ಯ ಕಾಡುತ್ತದೆ. ನಿಮ್ಮ ತೂಕದಲ್ಲೂ ಏರಿಕೆ ಕಂಡು ಬರುತ್ತದೆ. ತೂಕ ನಿಯಂತ್ರಣಕ್ಕೆ ಬರಬೇಕು ಎನ್ನುವವರು ಕರಿದ ಆಲೂಗಡ್ಡೆ ಸೇವನೆ ಮಾಡುವ ಬದಲು ಕಡಿಮೆ ಕ್ಯಾಲೋರಿ ಹೊಂದಿರುವ ಬೇರೆ ಆಹಾರ ಸೇವನೆ ಮಾಡಬೇಕು. ಇದರಿಂದ ನಿಮ್ಮ ತೂಕವನ್ನು ನೀವು ನಿಯಂತ್ರಿಸಬಹುದು.
ಮೊಟ್ಟೆ-ಬಾಳೆಹಣ್ಣು ಜೊತೆಗೆ ತಿಂದರೆ ಆರೋಗ್ಯ ಏನಾಗುತ್ತೆ?
ಮೊದಲೇ ಹೇಳಿದಂತೆ ಆಲೂಗಡ್ಡೆಯಲ್ಲಿ ಪಿಷ್ಟವಿದ್ದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಲೂಗಡ್ಡೆಯನ್ನು ನೀವು ಒಂದು ತಿಂಗಳು ತ್ಯಜಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅದರಲ್ಲೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಆಲೂಗಡ್ಡೆಯನ್ನು ಅಪರೂಪಕ್ಕೆ ಸೇವನೆ ಮಾಡೋದು ಒಳ್ಳೆಯದು.
ಒಂದ್ವೇಳೆ ನೀವು ನಿಮ್ಮ ಡಯಟ್ ನಲ್ಲಿ ಆಲೂಗಡ್ಡೆ ಸೇರಿಸಿಕೊಂಡಿಲ್ಲವೆಂದಾದ್ರೆ ಈ ನೆಪದಲ್ಲಿ ನೀವು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುತ್ತೀರಿ. ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆಯೂ ಸುಧಾರಿಸಬಹುದು.
ಆಲೂಗಡ್ಡೆಗೆ ಕಡಿಮೆ ಎಣ್ಣೆ ಹಾಗೂ ಮಸಾಲೆ ಬೆರೆಸಿ ಮನೆಯಲ್ಲಿಯೇ ನೀವು ಅಪರೂಪಕ್ಕೆ ಸೇವನೆ ಮಾಡಿ. ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಆಲೂಗಡ್ಡೆ ಉತ್ಪನ್ನಗಳನ್ನು ಸೇವಿಸಬೇಡಿ. ಚಿಪ್ಸ್ ಮತ್ತು ಫ್ರೆಂಚ್ ಫ್ರೈಗಳಂತ ಆಲೂಗಡ್ಡೆ ಖಾದ್ಯಗಳು ಸೇವನೆಗೆ ರುಚಿಯಾಗಿರುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಎಷ್ಟು ತಿಂದ್ರೂ ಮತ್ತೆ ಬೇಕೆನ್ನಿಸುವ ಈ ಚಿಪ್ಸ್, ಫ್ರೆಂಚ್ ಫ್ರೈನಂತಹ ಮಾರುಕಟ್ಟೆಯಲ್ಲಿ ಸಿಗುವ ಆಹಾರಗಳು ಬಹಳಷ್ಟು ಸೋಡಿಯಂ ಅನ್ನು ಹೊಂದಿರುತ್ತವೆ. ಇದನ್ನು ನೀವು ತಿನ್ನುವುದ್ರಿಂದ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆ ನಿಮ್ಮನ್ನು ಕಾಡುವ ಅಪಾಯವಿರುತ್ತದೆ. ಹಾಗಾಗಿ ಆಲೂಗಡ್ಡೆ ಸೇವನೆ ಮಾಡುವ ಮುನ್ನ ಅದು ನಿಮ್ಮ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.