Kitchen Tips: ಮಸಾಲೆ ಪದಾರ್ಥಗಳು ಹಾಳಾಗ್ತಿದ್ಯಾ ? ಹೀಗೆ ಮಾಡಿ ನೋಡಿ

ಅಯ್ಯೋ ಅಡುಗೆ ಮನೆ (Kitchen)ಯಲ್ಲಿ ತಂದಿರೋ ಮಸಾಲೆ (Spice) ಪದಾರ್ಥಗಳು ಕೆಟ್ಟು ಹೋಗುತ್ತಿವೆಯೇ? ಅಡುಗೆ ರುಚಿ ಕೈ ಕೊಡ್ತಾ ಇದ್ಯಾ? ತಂದಿರುವ ಮೆಣಸು ಅಡ್ಡ ವಾಸನೆ ಬರುತ್ತಿದೆಯೇ? ಸಹಜ ಬಿಡಿ, ಏನೇನೋ ಬೆರೆಸಿ ಕೊಡುವ ಈ ಪದಾರ್ಥಗಳ ತಾಜಾತವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ತಲೆನೋವು. ಇದರಿಂದ ಅಡುಗೆ ರುಚಿ (Taste)ಯೂ ಹಾಳಾಗುತ್ತೆ. ಎನ್ನು ಟೆನ್ಷನ್ ಬೇರೆ. ಎಲ್ಲ ಬಿಟ್ಹಾಕಿ. ನಾವು ಹೇಳುತ್ತೇವೆ ಅವನ್ನು ಪ್ರೊಟೆಕ್ಟ್ ಮಾಡಿಕೊಳ್ಳೋದು ಹೇಗೆ ಅಂತ....

Tips for Keeping Your Spices Fresh

ಭಾರತೀಯ ಪಾಕಪದ್ಧತಿಯಲ್ಲಿ ಮಸಾಲೆಗಳು (Spices) ಮತ್ತು ಗಿಡಮೂಲಿಕೆಗಳು ಹೆಚ್ಚು ಅವಶ್ಯಕವಾಗಿದೆ. ಇಲ್ಲಿನ ಅಡುಗೆಗಳಲ್ಲಿ ಸಾಮಾನ್ಯವಾಗಿ ಎಲ್ಲದರಲ್ಲೂ ಮೆಣಸು, ಜೀರಿಗೆ, ಬೆಳ್ಳುಳ್ಳಿ, ಕೊತ್ತಂಬರಿ ಹೀಗೆ ಹಲವು ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ. ಎಲ್ಲಾ ಅಡುಗೆ ಮನೆಗಳಲ್ಲೂ ಇಂಥಹಾ ಮಸಾಲೆ ಪದಾರ್ಥಗಳು ಅಥವಾ ಪುಡಿಗಳು ಇದ್ದೇ ಇರುತ್ತವೆ. ಆಹಾರ (Food)ಕ್ಕೆ ಹೆಚ್ಚು ಸ್ವಾದವನ್ನು ತರಲು ಈ ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತದೆ. ಹೀಗಾಗಿಯೇ ಭಾರತದಲ್ಲಿ ಅಡುಗೆಮನೆಯಲ್ಲಿ ಏನಿಲ್ಲವಾದರೂ ಮಸಾಲೆಗಳು ತುಂಬಿದ ಡಬ್ಬಗಳಂತೂ ಇದ್ದೇ ಇರುತ್ತವೆ.

ಮಸಾಲೆ ಪದಾರ್ಥಗಳು ಆಹಾರಕ್ಕೇನೂ ಹೆಚ್ಚು ರುಚಿ ನೀಡುತ್ತವೆ. ಆದರೆ, ಇದನ್ನು ಅಡುಗೆ ಕೋಣೆಯಲ್ಲಿ ಹಾಳಾಗದಂತೆ ಸಂಗ್ರಹಿಸಿಡುವುದು ಕಷ್ಟ ಎಂಬುದೇ ಹಲವರ ಸಮಸ್ಯೆ. ಈ ಮಸಾಲಾಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕಾಲಕ್ರಮೇಣ ಕೆಟ್ಟು ಹೋಗಬಹುದು ಎಂಬುದು ನಿಮಗೆ ತಿಳಿದಿದೆಯೇ ? ಹೌದು ಮಸಾಲೆಗಳನ್ನು ಒದ್ದೆ ಡಬ್ಬಿಯಲ್ಲಿ, ಶೆಲ್ಫ್‌ನಲ್ಲಿ ಸಂಗ್ರಹಿಸಿಡುವುದರರಿಂದ ಬೇಗನೇ ಬೂಸ್ಟ್ ಹಿಡಿಯುತ್ತದೆ. ಆಹಾರಕ್ಕೆ ಸೇರಿಸಲು ಸಾಧ್ಯವಾಗುವುದಿಲ್ಲ. ಅಡುಗೆ ಕೋಣೆಯಲ್ಲಿ ಮಸಾಲ ಪದಾರ್ಥಗಳಂತೂ ಇರಲೇಬೇಕು. ಅದನ್ನಂತೂ ತಪ್ಪಿಸಲು ಸಾಧ್ಯವಿಲ್ಲ. ಹಾಗಿದ್ರೆ ಮಸಾಲ ಪದಾರ್ಥಗಳು ಹಾಳಾಗದಂತೆ ಜೋಪಾನವಾಗಿ ತೆಗೆದಿಡುವುದು ಹೇಗೆ ? ಹೆಚ್ಚು ಕಾಲ ಮಸಾಲೆ ಪದಾರ್ಥಗಳು ಬಾಳ್ವಿಕೆ ಬರಬೇಕಾದರೆ ಏನು ಮಾಡಬೇಕು ?

ಚಳಿಗಾಲದ ರೋಗಗಳನ್ನು ಹೊಡೆದೋಡಿಸುವ ಅಡುಗೆಮನೆಯ ಬೆಸ್ಟ್ ಮೆಡಿಸಿನ್’ಗಳಿವು

ಆರ್ದ್ರತೆ, ಶಾಖ, ಗಾಳಿ ಮತ್ತು ಸೂರ್ಯನ ಮೊದಲಾದವುಗಳಿಂದ ಮಸಾಲ ಪದಾರ್ಥಗಳನ್ನು ದೂರವಿಡಬೇಕು. ಯಾಕೆಂದರೆ ಇದು ಮಸಾಲೆಗಳಿಗೆ ಪರಿಮಳವನ್ನು ನೀಡುವ ರಾಸಾಯನಿಕ ಸಂಯುಕ್ತಗಳನ್ನು ಕೆಡಿಸಬಹುದು. ಪರಿಣಾಮವಾಗಿ, ಕೆಲವು ಮಸಾಲೆಗಳಲ್ಲಿ ಸುವಾಸನೆ ಮತ್ತು ಸುವಾಸನೆಯು ರಾಸಿಡ್, ಅಚ್ಚು ಅಥವಾ ಕೊಳಕು ಆಗಬಹುದು. ಆದ್ದರಿಂದ, ನಿಮ್ಮ ಮಸಾಲೆಗಳನ್ನು ಹೇಗೆ ಕಾಳಜಿ ವಹಿಸಬೇಕು? ಕೆಳಗಿನ ಈ ಸರಳ ಸಲಹೆಗಳೊಂದಿಗೆ ನಾವು ಕಂಡುಹಿಡಿಯೋಣ.

ಮಸಾಲೆ ಪದಾರ್ಥಗಳನ್ನು ಶಾಖದಿಂದ ದೂರವಿಡಿ
ಅಡುಗೆ ಕೋಣೆಯಲ್ಲಿ ಹೆಚ್ಚಿನವರು ಮಸಾಲೆ ಪದಾರ್ಥಗಳನ್ನು ಗ್ಯಾಸ್ ಸ್ಟವ್ (Gas Stove) ಮೇಲೆ ಅಥವಾ ಗ್ಯಾಸ್ ಸ್ಟವ್ ಬದಿಯಲ್ಲಿ ಇಡುತ್ತಾರೆ. ಆದರ ಈ ರೀತಿ ಮಸಾಲೆ ಪದಾರ್ಥಗಳನ್ನು ಇಡಬಾರದು. ಶಾಖ (Heat)ದಿಂದ ಮಸಾಲೆಯ ಡಬ್ಬಗಳನ್ನು ಯಾವತ್ತೂ ದೂರವಿಡಬೇಕು. ಯಾಕೆಂದರೆ ಇದು ಮಸಾಲೆಗಳಿಗೆ ಹಾನಿಯುಂಟು ಮಾಡುತ್ತದೆ. 

ಸ್ಮಾರ್ಟ್ ಕಿಚನ್ ನಿಯಮ ತಿಳ್ಕೊಳ್ಳಿ, ಸ್ಮಾರ್ಟ್ ಹೆಣ್ಣು ನೀವಾಗಿ..

ಗಾಳಿಯಾಡದಂತೆ ಇರಿಸಿಕೊಳ್ಳಿ 
ಮಸಾಲೆಗಳು ಗಾಳಿಗೆ (Air) ತೆರೆದುಕೊಂಡರೆ ಅವುಗಳ ಪರಿಮಳವನ್ನು ತ್ವರಿತವಾಗಿ ಕಳೆದುಕೊಳ್ಳುತ್ತವೆ. ಆದ್ದರಿಂದ ಮಸಾಲೆ ಪದಾರ್ಥಗಳನ್ನು ಯಾವಾಗಲೂ ಗಾಜಿನ ಜಾರ್ ಅಥವಾ ಲೋಹದ ಟಿನ್‌ಗಳನ್ನು ಬಳಸಿ ಶೇಖರಿಸಿ ಇಡಿ. ಅವುಗಳನ್ನು ಬಿಗಿಯಾಗಿ ಮುಚ್ಚಲು ಮರೆಯದಿರಿ. ಏರ್‌ಲಾಕ್ ಕಂಟೈನರ್‌ಗಳು ಬಿಗಿಯಾಗಿರುವುದರಿಂದ ಮಸಾಲೆಗಳನ್ನು ಸಂಗ್ರಹಿಸಲು ಇವು ಅತ್ಯುತ್ತಮವಾಗಿದೆ.

ಉಪ್ಪನ್ನು ಸೇರಿಸಿ
ಮಸಾಲೆ ಪದಾರ್ಥಗಳನ್ನು ದೀರ್ಘಕಾಲದ ವರೆಗೆ ಡಬ್ಬದಲ್ಲಿ ಶೇಖರಿಸಿ ಇಡುವುದರಿಂದ ಅವುಗಳು ಕೆಲವೊಂದು ಅಣುಗಳನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಮಸಾಲೆಗಳನ್ನು ಸಂಗ್ರಹಿಸುವಾಗ ಅವುಗಳನ್ನು ತಾಜಾವಾಗಿಡಲು ಮಧ್ಯದಲ್ಲಿ ಉಪ್ಪನ್ನು (Salt) ಸೇರಿಸಬಹುದು.

ಕಂಟೈನರ್‌ಗಳಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳಿ
ಮಸಾಲೆಗಳನ್ನು ಸಂಗ್ರಹಿಸಿಡುವ ಕಂಟೈನರ್‌ಗಳಲ್ಲಿ ತೇವಾಂಶವನ್ನು ಪ್ರವೇಶಿಸಲು ಬಿಡಬೇಡಿ. ತೇವಾಂಶವು ಮಸಾಲೆಗಳು ಹೆಚ್ಚು ಕಾಲ ಬಾಳ್ವಿಕೆ ಬರುವುದನ್ನು ತಡೆಯುತ್ತದೆ. ಫ್ರೀಜರ್‌ನಲ್ಲಿ ಮಸಾಲೆಗಳನ್ನು ಎಂದಿಗೂ ತೆಗೆದಿಡಬೇಡಿ. ಇದರಿಂದ ಮಸಾಲೆಗಳು ಹಾಳಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಒದ್ದೆಯಾಗಿದ್ದಾಗ ಮಸಾಲೆ ಪದಾರ್ಥಗಳನ್ನು ಸಂಗ್ರಹಿಸುವುದು ಸೂಕ್ತವಲ್ಲ. ಸಂಪೂರ್ಣವಾಗಿ ಒಣಗಿದ ಮೇಲೆಯಷ್ಟೇ ಮಸಾಲೆ ಪದಾರ್ಥಗಳನ್ನು ಡಬ್ಬದಲ್ಲಿ ಶೇಖರಿಸಿ ಇಡಿ. 

ಕತ್ತಲೆ ಕೋಣೆಯಲ್ಲಿ ಸಂಗ್ರಹಿಸಿ 
ಮಸಾಲೆ ಪದಾರ್ಥಗಳನ್ನು ಯಾವತ್ತೂ ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿ. ಕೆಲವೊಮ್ಮೆ ಸೂರ್ಯನ ಬೆಳಕಿನಿಂದ ಉಂಟಾಗುವ ಶಾಖವು ಮಸಾಲೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅವುಗಳನ್ನು ಕತ್ತಲೆಯ ಸ್ಥಳದಲ್ಲಿ ಇಡುವುದು ಉತ್ತಮ. ಇದರಿಂದ ಮಸಾಲೆಗಳು ಸೂರ್ಯನ ನೇರ ಸಂಪರ್ಕಕ್ಕೆ ಬರುವುದಿಲ್ಲ. ಹೀಗಾಗಿ ಮಸಾಲೆ ಪದಾರ್ಥಗಳು ಹಾಳಾಗುವ ಸಾಧ್ಯತೆ ಕಡಿಮೆ.

ಸೋ, ಇನ್ಮುಂದೆ ಮಸಾಲೆ ಪದಾರ್ಥಗಳು ಹಾಳಾಗುತ್ತೆ ಅನ್ನೋ ಚಿಂತೆ ಬೇಡ. ಈ ಮೇಲಿರೋ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಎಷ್ಟು ಸಮಯ ಆದ್ರೂ ಮಸಾಲೆ ಪದಾರ್ಥಗಳು ಫ್ರೆಶ್ ಆಗಿರುತ್ತೆ. ಕಮಟು ವಾಸನೆ ಬರುತ್ತೆ, ಅಡುಗೆಗೆ ಪರಿಮಳಾನೇ ಇಲ್ಲಪ್ಪಾ ಅಂತ ಬೇಜಾರು ಮಾಡ್ಕೊಬೇಕಾಗಿಲ್ಲ.

Latest Videos
Follow Us:
Download App:
  • android
  • ios