Food Trend: ಮ್ಯಾಂಗೋ ಮ್ಯಾಗಿ ತಯಾರಿಸುವ ವೀಡಿಯೋ ವೈರಲ್
ಕೆಂಪು-ಹಳದಿ ಮಿಶ್ರಿತ ರುಚಿ ರುಚಿಯಾದ ಮ್ಯಾಂಗೋ (Mango) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ವೆರೈಟಿ ರೆಸಿಪಿ (Recipe)ಗಳನ್ನು ಸವಿದು ಖುಷಿಪಡ್ತಾರೆ. ಮ್ಯಾಂಗೋ ಪ್ರಿಯರ ಲಿಸ್ಟ್‌ಗೆ ಇನ್ನೊಂದು ಫುಡ್ (Food) ಸೇರಿಸ್ಬೋದು ಅದುವೇ ಮ್ಯಾಂಗೋ ಮ್ಯಾಗಿ (Mango maggie). ಇದೇನಪ್ಪಾ ವಿಚಿತ್ರ ಅನ್ಬೇಡಿ. ಹೆಚ್ಚಿನ ಡೀಟೈಲ್ಸ್ ತಿಳ್ಕೊಳ್ಳಿ.
ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಇಲ್ಲಿ ಆಯಾ ರಾಜ್ಯಕ್ಕೆ ಅಲ್ಲಿಯ ಭಾಷೆ, ಸಂಸ್ಕೃತಿ. ಆಚಾರ-ವಿಚಾರಗಳು ಇರುವ ಹಾಗೆಯೇ ಪ್ರತ್ಯೇಕವಾದ ಆಹಾರಪದ್ಧತಿಯೂ ಇದೆ. ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ಹೀಗಾಗಿಯೇ ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ.
ಫುಡ್ (Food)ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ (Trend) ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ (Combination) ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ (Viral) ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಮ್ಯಾಂಗೋ ಮ್ಯಾಗಿ (Mango maggie).
Food Trend: ಐಸ್‌ಕ್ರೀಂ ಸೂಪ್ ನೂಡಲ್ಸ್ ಟೇಸ್ಟ್ ಮಾಡಿದ್ದೀರಾ ?
ಇದು ಬೇಸಿಗೆ ಕಾಲ. ಅಂದರೆ ಇದು ಮಾವಿನ ಸೀಸನ್ ಕೂಡ ಹೌದು. ಈ ರುಚಿಕರವಾದ ಹಣ್ಣಿಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಾರೆ. ಕೆಂಪು-ಹಳದಿ ಮಿಶ್ರಿತ ರುಚಿ ರುಚಿಯಾದ ಮ್ಯಾಂಗೋ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ವೆರೈಟಿ ರೆಸಿಪಿಗಳನ್ನು ಸವಿದು ಖುಷಿಪಡ್ತಾರೆ. ಮಾವು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಗಳು, ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ನಾರಿನಂಶ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ಸೋಡಿಯಂನಂತಹ ಪೋಷಕಾಂಶಗಳಿವೆ. ದೇಹದ ಉತ್ತಮ ಕಾರ್ಯನಿರ್ವಹಣೆಗೆ ಈ ಎಲ್ಲಾ ಅಂಶಗಳು ಅತ್ಯಗತ್ಯ.
ಹೀಗಾಗಿಯೇ ಬೇಸಿಗೆಯಲ್ಲಿ ಎಲ್ಲರೂ ಮಾವಿನ ಹಣ್ಣಿನ ವಿವಿಧ ರೆಸಿಪಿಗಳನ್ನು ಮಾಡಿ ಸೇವಿಸ್ತಾರೆ. ನಿಮ್ಮ ಲಿಸ್ಟ್‌ಗೆ ಈಗ ನೀವು ಹೊಸದಾಗಿ ಇನ್ನೊಂದು ರೆಸಿಪಿಯನ್ನು ಸೇರಿಸಬಹುದು. ಅದುವೇ ಮ್ಯಾಂಗೋ ಮ್ಯಾಗಿ. ಅರೆ, ಇದೇನಪ್ಪಾ ವಿಚಿತ್ರ ಅನ್ಬೇಡಿ. ಮಾವಿನ ಮ್ಯಾಗಿ ಮಾಡೋದ್ಹೇಗೆ, ಇದನ್ನು ತಿನ್ನೋಕಾಗುತ್ತಾ ? ಇಲ್ಲ ವಿಯರ್ಡ್ ಕಾಂಬಿನೇಶನ್ ಅನ್ಸುತ್ತಾ ತಿಳ್ಳೊಳ್ಳಿ.
ಫುಡ್ ಟ್ರೆಂಡ್ ಹೊಸದೇನಲ್ಲ. ಈ ಹಿಂದೆ ಮ್ಯಾಗಿ ಮಿಲ್ಕ್‌ಶೇಕ್, ಫುಡ್ ಮಸಾಲೆ ದೋಸೆ ಐಸ್ ಕ್ರೀಂ ರೋಲ್ (Masala Dosa Ice Cream Roll), ಮೊಮೋಸ್ ಐಸ್‌ಕ್ರೀಂ ರೋಲ್ ಹೀಗೆ ಹಲವು ವಿಚಿತ್ರ ಆಹಾರಗಳು ಟ್ರೆಂಡ್ ಆಗಿವೆ. ಹಾಗೆಯೇ ಸದ್ಯ ಮ್ಯಾಂಗೋ ಮ್ಯಾಗಿ ಟ್ರೆಂಡ್ ಆಗ್ತಿದೆ.
Idli Ice Cream: ಇಡ್ಲಿ ಮತ್ತು ಐಸ್‌ಕ್ರೀಂ ಮಿಕ್ಸ್ ಮಾಡಿದ್ರೆ ಹೇಗಿರುತ್ತೆ?
ಮಹಿಳೆ ಮೊದಲು ದೊಡ್ಡ ಪಾತ್ರೆಗೆ ತುಪ್ಪ ಹಾಕಿ ಮ್ಯಾಗಿ ಮಸಾಲೆ ಹಾಕಿಕೊಳ್ಳುತ್ತಾಳೆ. ನಂತರ ಇದಕ್ಕೆ ನೀರು ಸೇರಿಸಿ ಮ್ಯಾಗಿ ಸೇರಿಸುತ್ತಾಳೆ. ನಂತರ ಮಾವಿನ ಜ್ಯೂಸ್ ಸುರಿದು ಅದರಲ್ಲೇ ಮ್ಯಾಗಿಯನ್ನು ಬೇಯಿಸಿಕೊಳ್ಳುತ್ತಾಳೆ. ಬಳಿಕ ಮ್ಯಾಗಿಯನ್ನು ಪ್ಲೇಟ್‌ಗೆ ಹಾಕಿ ಮೇಲಿನಿಂದ ಬಹಳಷ್ಟು ಮಾವಿನ ತುಂಡನ್ನು ಸೇರಿಸುತ್ತಾಳೆ. ನಂತರ ಮ್ಯಾಗಿಯನ್ನು ಸೇರಿಸುತ್ತಾಳೆ.ನಂತರ ಪ್ಲೇಟ್‌ನ ಬದಿಯಲ್ಲಿ ಮ್ಯಾಂಗೋ ರಸವನ್ನು ಸೇರಿಸುತ್ತಾಳೆ
ಮ್ಯಾಂಗೋ ಮ್ಯಾಗಿ ತಯಾರಿಸುವ ವೀಡಿಯೊವನ್ನು 115 ಸಾವಿರ ಬಾರಿ ವೀಕ್ಷಿಸಿದ್ದಾರೆ. ವೀಡಿಯೋಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಈ ಮಿಶ್ರಣದಿಂದ ನೆಟಿಜನ್‌ಗಳು ಸಂಪೂರ್ಣವಾಗಿ ಗಾಬರಿಗೊಂಡಿದ್ದಾರೆ. ಕೆಲವರು ತಮ್ಮ ನೆಚ್ಚಿನ ಹಣ್ಣನ್ನು ಮ್ಯಾಗಿಯಲ್ಲಿ ಏಕೆ ಸೇರಿಸಲಾಗಿದೆ ಎಂದು ಕೋಪಗೊಂಡ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ.